ರಾಷ್ಟ್ರೀಯ ಸುದ್ದಿ

ಆಗಸ್ಟ್ 9; ‘ಫ್ಯಾಸಿಸ್ಟರೇ, ಭಾರತ ಬಿಟ್ಟು ತೊಲಗಿ’ ಘೋಷಣೆಯೊಂದಿಗೆ ಎಸ್‍ಡಿಪಿಐ ರಾಷ್ಟ್ರಾವ್ಯಾಪಿ ಪ್ರತಿಭಟನೆ

UAPA, NIA, RTI ಮತ್ತು ಕಾಶ್ಮೀರದ ಕಾನೂನು ಬದಲಾವಣೆಯನ್ನು ವಿರೋಧಿಸಿ

ವರದಿಗಾರ (ಆ. 8): UAPA, NIA, RTI ಕಾಯ್ದೆಗಳಲ್ಲಿ ಬದಲಾವಣೆ ಮಾಡಿರುವುದನ್ನು ಮತ್ತು ಸಂಸತ್ತಿ ಉಭಯ ಸದನಗಳಲ್ಲಿ ತಿದ್ದುಪಡಿಯನ್ನು ಅಂಗೀಕರಿಸುವ ಮೂಲಕ ಕಾಶ್ಮೀರವನ್ನು ವಿಭಜಿಸಿದ ನೀತಿಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟಿಸಲು ‘ಕ್ವಿಟ್ ಇಂಡಿಯಾ ದಿನ’ವನ್ನು ‘ಫ್ಯಾಸಿಸಂ ಕ್ವಿಟ್ ಇಂಡಿಯಾ’ ( ಫ್ಯಾಸಿಸ್ಟರೇ ಭಾರತ ಬಿಟ್ಟು ತೊಲಗಿ) ದಿನವಾಗಿ ಆಚರಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವು ಈ ಸಂಬಂಧದ ತಿದ್ದುಪಡಿಗಳನ್ನು ತರಾತುರಿಯಲ್ಲಿ ಅಂಗೀಕರಿಸಿತು. ಇದೇ ವೇಳೆ ಪ್ರತಿಪಕ್ಷಗಳ ಏಕತೆಯನ್ನು ದುರ್ಬಲಗೊಳಿಸಿದೆ.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತನ್ನ ಹೇಳಿಕೆಯಲ್ಲಿ, ರಾಷ್ಟ್ರೀಯ ತನಿಖಾ ದಳ(ತಿದ್ದುಪಡಿ) ಮಸೂದೆ -2019 ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ -2019 ರಲ್ಲಿ ಮಾಡಿದ ತಿದ್ದುಪಡಿಗಳು ಸಂವಿಧಾನದಲ್ಲಿ ನೀಡಲಾದ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ತಿದ್ದುಪಡಿಗಳು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಲು ಸರ್ಕಾರಗಳಿಗೆ ಅಧಿಕಾರ ನೀಡಿವೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ, RTI ಕಾಯ್ದೆಯನ್ನು ಅದರ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಲು ತಿದ್ದುಪಡಿ ಮಾಡಲಾಗಿದೆ ಎಂದು ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.  ಈ ತಿದ್ದುಪಡಿಯಲ್ಲಿ, ಆಯುಕ್ತರ ಆಡಳಿತವು ರಾಜಕಾರಣಿಗಳ ಕೈಗೆ ಹೋಗಿದ್ದು, ಇದರಿಂದ ಆರ್‍ಟಿಐ ಸಂಸ್ಥೆಯು ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸುವ ಮೂಲಕ ಕಾಶ್ಮೀರದ ಜನರ ಹಕ್ಕುಗಳನ್ನು ಕೇಂದ್ರ ಸರ್ಕಾರ ಧ್ವಂಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಹಿಂದುತ್ವ ಬಲವನ್ನು ಸಮಾಧಾನಪಡಿಸಲು ಸರ್ಕಾರ ಪ್ರಯತ್ನಿಸಿದೆ ಎಂಬುದು ಇದರಿಂದ ಬಹಳ ಸ್ಪಷ್ಟವಾಗಿದೆ ಎಂದು ಅಬ್ದುಲ್ ಮಜೀದ್ ಬೊಟ್ಟು ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರದ ನಾಯಕತ್ವದ ಮಧ್ಯಮವಾದಿ ವರ್ಗಗಳನ್ನು ಸಹ ದೂರವಿಟ್ಟು ಮತ್ತು ಸೇನೆಯನ್ನು ಬಳಸುವ ಮೂಲಕ ಮೂಲಕ ಕಠಿಣ ಮತ್ತು ಅವಿವೇಕದ ಕ್ರಮವನ್ನು ಕೈಗೊಂಡು ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿಗ್ರಹಿಸಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಈ ಮಧ್ಯೆ, ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮಹಾತ್ಮ ಗಾಂಧಿಯವರು ಆಗಸ್ಟ್ 8, 1942 ರಂದು “ಮಾಡು ಇಲ್ಲವೇ ಮಡಿ” ಎಂದು ಕರೆ ನೀಡಿದ ನಂತರ ಭಾರತ್ “ಚೋಡೋ ಆಂದೋಲನ್” ಎಂದೂ ಕರೆಯಲ್ಪಡುವ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರಸ್ತುತ ಪರಿಸ್ಥಿತಿಯು ಭಾರತವನ್ನು ಫ್ಯಾಸಿಸಂ ಹಿಡಿತದಿಂದ ರಕ್ಷಿಸಲು ಜಂಟಿ ಪ್ರಯತ್ನ ಅಗತ್ಯವಿದ್ದು, ಹೊಸ ಫ್ಯಾಸಿಸಮ್ ಭಾರತ ಬಿಟ್ಟು ತೊಲಗು ಎಂಬ ಚಳವಳಿ ಆಗಬೇಕಾಗಿದೆ ಎಂದು ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group