ರಾಜ್ಯ ಸುದ್ದಿ

ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಪ್ರತಾಪ್ ಸಿಂಹ ಬಹಿರಂಗ ಕ್ಷಮೆ ಯಾಚನೆ

ವರದಿಗಾರ (ಆ. 8): ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿ ಪ್ರಕಾಶ್ ರೈ ಯವರೊಂದಿಗೆ ಕ್ಷಮೆ ಯಾಚಿಸಿದ್ದಾರೆ.

2017ರ ಅಕ್ಟೋಬರ್ 2ರಂದು ಪ್ರತಾಪ್ ಸಿಂಹ ತಮ್ಮ ಟ್ವಿಟರ್‌ ಹಾಗೂ ಫೇಸ್ಬುಕ್‌ ನಲ್ಲಿ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು‌. ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ, “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ಪ್ರಕಾಶ್ ರೈಗೆ, ಮೋದಿ ಯೋಗಿಗೆ ಬುದ್ದಿ ಹೇಳುವಷ್ಟು ಯೋಗ್ಯತೆ ಇದೆಯಾ?” ಎಂಬುವುದಾಗಿ ಮಾನಹಾನಿಕರ ಟ್ವೀಟ್ ಮಾಡಿ ತನ್ನ ಕೀಳಬಿರುಚಿಯನ್ನು ತೋರ್ಪಡಿಸಿದ್ದರು.

ಪ್ರತಾಪ ಸಿಂಹರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಾನೂನು ಮೊರೆ ಹೋದ ಪ್ರಕಾಶ್ ರೈ ಪ್ರತಾಪ್ ಸಿಂಹರ ವಿರುದ್ಧ 1 ರೂ. ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣ ಸಂಬಂಧ ಮೈಸೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಬಳಿಕ ಈ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸದ್ಯ ನ್ಯಾಯಾಲಯದಲ್ಲೂ ಈ ಬಗ್ಗೆ ಕ್ಷಮೆ ಯಾಚಿಸಿರುವ ಪ್ರತಾಪ್ ಸಿಂಹ ಇಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ತನ್ನ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಕ್ಷಮೆ ಯಾಚಿಸಿರುವ ಪ್ರತಾಪ್ ಸಿಂಹರ ಕ್ಷಮೆ ಈ ರೀತಿಯಲ್ಲಿದೆ ” ಆತ್ಮೀಯ ಪ್ರಕಾಶ್ ರಾಜ್, ನಾನು ನಿಮ್ಮ ಕುಟುಂಬದ ವಿರುದ್ಧ  2017ರ ಅಕ್ಟೋಬರ್  2 ಮತ್ತು 3 ರಂದು ಅವಹೇಳನಕಾರಿ ಲೇಖನವನ್ನು ಪೋಸ್ಟ್ ಮಾಡಿದ್ದೇನೆ. ಆದರೆ ಇವುಗಳು ಅನಗತ್ಯ ಮತ್ತು ಇದರಿಂದ ನಿಮಗೆ ನೋವಾಗಿರಬಹುದೆಂದು  ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ, ನಾನು ನಿಸ್ಸಂದಿಗ್ಧವಾಗಿ ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಗಾಗಿ ವಿಷಾದಿಸುತ್ತೇನೆ”.

ಪ್ರತಾಪ್ ಸಿಂಹರ ಕ್ಷಮೆಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, “ಧನ್ಯವಾದಗಳು ಪ್ರತಾಪ್ ಸಿಂಹ. ನಮ್ಮ ಸಿದ್ಧಾಂತದೊಂದಿಗೆ ನಮಗೆ ಭಿನ್ನಾಭಿಪ್ರಾಯಗಳು ಇರಬಹುದು. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಯಕ್ತಿಕವಾಗಿ ಮತ್ತು ಕೊಳಕನ್ನು ಪಡೆಯಬಾರದು. ನಾವು ಇಬ್ಬರೂ ನಮ್ಮ ನಮ್ಮ ಗೌರವಯುತ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದೇವೆ. ಹಾಗಾಗಿ ನಾವು ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕರ್ತವ್ಯ, ನಿಮಗೆ ಶುಭವಾಗಲಿ” ಎಂದು ತನ್ನ ಹೃದಯ ವೈಶಾಲ್ಯತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group