ವರದಿಗಾರ-ದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಕುಲಾದ ನ್ಯಾಯಾಲಯವು ಶುಕ್ರವಾರದಂದು ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಆರೋಪಿ ಎಂದು ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಬಳಿಕ ಬಾಬಾ ಭಕ್ತರಿಂದ ಹಿಂಸಾಚಾರ ಬುಗಿಲೆದ್ದಿದೆ. ಹಿಂಸಾಚಾರದಿಂದ ಇದುವರೆಗಿನ ವರದಿ ಪ್ರಕಾರ, 32ಜನ ಸಾವನ್ನಪ್ಪಿದ್ದು, ಸುಮಾರು 250ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿದ್ದು, ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಬಳಿಕ ನಡೆಯುತ್ತಿರುವ ಚರ್ಚೆಯಲ್ಲಿ ಹಲವು ವಿಚಾರಗಳು ಬಯಲಿಗೆ ಬರಲು ಪ್ರಾರಂಭಿಸಿದೆ. ಕಳೆದ ವಿವಿಧ ಚುನಾವಣೆಯ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) , ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ನೆರವು ಪಡೆದಿದ್ದರು ಎಂದು ಹೇಳಲಾಗಿದೆ. ಹಾಗೂ ಕಾಂಗ್ರೆಸ್ ಕೂಡ ನೆರವನ್ನು ಪಡೆದಿತ್ತು ಎಂದು ಹೇಳಲಾಗುತ್ತಿದೆ. ಅದರ ಸತ್ಯಾಂಶ ಇನ್ನಷ್ಟೇ ತಿಳಿದು ಬರಬೇಕಿದೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಹರಿಯಾಣದಲ್ಲಿ ದಲಿತರು ಸೇರಿದಂತೆ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಜನರು ಗುರ್ಮೀತ್ ರಾಮ್ ರಹೀಮ್ ಸಿಂಗ್ ರ ಭಕ್ತರಾಗಿದ್ದಾರಂತೆ. ಬಾಬಾ ತನ್ನ ಸಂಸ್ಥೆಯ ಅಧೀನದಲ್ಲಿ 2007ರಲ್ಲಿ ರಾಜಕೀಯ ವಿಭಾಗವನ್ನು ತೆರೆದಿತ್ತು. ಹಾಗೂ ಚುನಾವಣೆಯ ಸಂದರ್ಭ ಯಾವ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ನಿರ್ಧರಿಸಲಾಗುತ್ತಿತ್ತು ಎನ್ನಲಾಗಿದೆ. ತನ್ನ ಮತಬ್ಯಾಂಕ್ ರಾಜಕೀಯಕ್ಕಾಗಿ ಹರಿಯಾಣ ಹಾಗೂ ಪಂಜಾಬ್ ನ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಾಬಾ ನೆರವು ಪಡೆದಿತ್ತು.
ಅದರಂತೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಹಾಗೂ ಲೋಕಸಭೆಯ ಚುನಾವಣೆ ಸಂದರ್ಭ ಸಂಸ್ಥೆ ಬಿಜೆಪಿಯನ್ನು ಬೆಂಬಲಿಸಿತ್ತು ಎಂದು ವರದಿ ತಿಳಿಸಿದೆ. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ 2014ರ ಅಕ್ಟೋಬರ್ 30ರಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಾಬಾ ರಾಮ್ ರಹೀಮ್ ಸಿಂಗ್ ಪರ ಬ್ಯಾಟಿಂಗ್ ನಡೆಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚಾಗಿ ಹರಿದಾಡುತ್ತಿದೆ. 2014ರ ಆಕ್ಟೋಬರ್ 11ರಂದು ಹರಿಯಾಣದ ವಿಧಾನಸಭೆ ಚುನಾವಣೆಯ ಸಾರ್ವಜನಿಕ ರ್ಯಾಲಿಯಲ್ಲಿ ರಾಮ್ ಬಾಬಾ ರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದರು. ಇದನ್ನು ಹಿಂಸಾಚಾರ ಬುಗಿಲೆದ್ದ ಕೆಲಕ್ಷಣದಲ್ಲೇ ಪ್ರತಿಕ್ರಿಯಿಸಿದ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಕೂಡ ಹೇಳಿಕೆಯಲ್ಲಿ ನೆನಪಿಸಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪಂಚಕುಲಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಹಿಂಸಾಚಾರದಲ್ಲಿ ಗಾಯಗೊಂಡಿರುವವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಹಾಗೂ ಹಿಂಸಾಚಾರವು ಸಮಾಜ ವಿರೋಧಿಗಳ ಕೃತ್ಯವೆಂದು ಹೇಳಿದ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲ. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ತೀರ್ಪಿನ ಬಳಿಕ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್ ಸಿಂಗ್ ಅವರ ಬೆಂಬಲಿಗರಾದ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿರ್ಸಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನ್ ಶೇಣ್ವಿ ಹೇಳಿಕೆ ನೀಡಿದ್ದಾರೆ.
ಇಬ್ಬರು ಮಹಿಳೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ್ದರು. ಬೆದರಿಕೆ ಮತ್ತು ಅಪಪ್ರಚಾರಗಳ ನಡುವೆಯೂ ನ್ಯಾಯಕ್ಕಾಗಿರುವ ಹೋರಾಟ ಮುಂದುವರಿದ ಕಾರಣದಿಂದ ಬಾಬಾ ರಾಮ್ ರಹೀಮ್ ಸದ್ಯ ಜೈಲು ಪಾಲಾಗಿದ್ದಾರೆ.
ನ್ಯಾಯಾಲಯದ ತೀರ್ಪಿನ ಬಳಿಕ ಬುಗಿಲೆದ್ದ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ನರೇಂದ್ರ ಮೋದಿಯವರು ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ರನ್ನು ಹೊಗಳಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಾದ್ಯಂತ ಹೆಚ್ಚಾಗಿ ಹರಿದಾಡ್ತಿದೆ.
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ರೊಂದಿಗೆ
ಅತ್ಯಾಚಾರಿ ಬಾಬಾ ಹರ್ಯಾಣದ ಸಚಿವರೊಂದಿಗೆ
ಬಿಜೆಪಿ ನಾಯಕ ವಿಜಯ ಕುಮಾರ್(ವಿಕೆ ಸಿಂಗ್ ) ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೊತೆ
The instances of violence today are deeply distressing. I strongly condemn the violence & urge everyone to maintain peace.
— Narendra Modi (@narendramodi) August 25, 2017
Death & violence caused by complete failure of state machinery. Lack of preparedness inexcusable. PM must take action & #KhattarMustResign
— Congress (@INCIndia) August 26, 2017
Grateful to people of Punjab for maintaining peace. All steps being taken to ensure law & order not disturbed at any cost.
— Capt.Amarinder Singh (@capt_amarinder) August 26, 2017
I strongly condemn violence and widespread damage to properties including OB vans by #RamRahimSingh supporters in Haryana, Punjab, Delhi
— Rajat Sharma (@RajatSharmaLive) August 25, 2017
