ಜಿಲ್ಲಾ ಸುದ್ದಿ

ಮಂಗಳೂರು ವಿಮಾನ ನಿಲ್ದಾಣದಿಂದ ಮುಸ್ಲಿಂ ದ್ವೇಷಿ ಸಿಬ್ಬಂದಿಗಳನ್ನು ಹೊರಗಿಡಿ : ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್ ಆಗ್ರಹ

ಮಂಗಳೂರು :  ಮಂಗಳೂರು ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿಗಳ ‘ಮುಸ್ಲಿಂ ದ್ವೇಷ’ ಕ್ಕೆ, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿದು ತಾಯ್ನಾಡಿಗೆ ಬರುವ ಶ್ರಮಜೀವಿಗಳು  ಕಿರುಕುಳ ಅನುಭವಿಸುತ್ತಿರುವ ಬಗ್ಗೆ   ದೂರು ಕೇಳಿ ಬರುತ್ತಿದ್ದು ಸಂಬಂಧ ಪಟ್ಟವರು ಕೂಡಲೇ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಿ, ಸೂಕ್ತ ಕ್ರಮ ಜರುಗಿಸ ಬೇಕೆಂದು  ಕಾಂಗ್ರೆಸ್ ಪಕ್ಷದ ದ.ಕ.ಜಿಲ್ಲಾ ವಕ್ತಾರ ಶ್ರೀ  ಕೆ ಫಾರೂಕ್ ಉಳ್ಳಾಲ್ ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಂಜೇಶ್ವರ ಸಮೀಪದ ಯುವಕರು, ತಮಗಾದ  ಅನ್ಯಾಯವನ್ನು ಮಾಧ್ಯಮದ ಮುಂದೆ ಹೇಳಿ ಕೊಳ್ಳುವ ಮೂಲಕ ಈ ‘ಮನುಷ್ಯ ವಿರೋಧಿ’ ಕೃತ್ಯಗಳು ಬಹಿರಂಗವಾಗಿ, ನಾಗರಿಕ ಜಗತ್ತು ಬೆಚ್ಚು ಬೀಳುವಂತಿವೆ. ಗಲ್ಫ್ ರಾಷ್ಟ್ರಗಳಿಂದ ಊರಿಗೆ ಮರಳುವವರು, ‘ಮುಸ್ಲಿಂ ‘ಎಂದು ಗೊತ್ತಾದ ಕೂಡಲೇ ಪ್ರಯಾಣಕ್ಕೆ  ಸಂಬಂಧ ಪಡದ ಪ್ರಶ್ನೆಗಳನ್ನು  ಕೇಳಿ ಹಿಯ್ಯಾಳಿಸುತ್ತಾ, ಲೋಹ ಶೋಧಕ ಯಂತ್ರವನ್ನು ದೇಹಕ್ಕೆ ಇಟ್ಟು,  ‘ನಿಮ್ಮ ದೇಹದಲ್ಲಿ ಬಂಗಾರ ಅವಿತಿಟ್ಟಿದ್ದೀರಿ ಎಂದು ಗದರಿಸುವುದು ಇಲ್ಲಿ ಸಾಮಾನ್ಯ ದೃಶ್ಯವಂತೆ.  ಆಶ್ಚರ್ಯವೆಂದರೆ ಇಲ್ಲಿ ಬಳಸುವ ಲೋಹ ಶೋಧಕ ಮಾಪಕ ಮುಸ್ಲಿಮರ ದೇಹಕ್ಕೆ ಇಟ್ಟರೆ ಚಿನ್ನ ಇದೆ ಎಂದು ಸೈರನ್  ಕೊಡುತ್ತದೆ. ಸೈರನ್ ಕೇಳಿದ ತಕ್ಷಣ ಮುಸ್ಲಿಂ ಪ್ರಯಾಣಿಕರನ್ನು ನಗ್ನರನ್ನಾಗಿಸಿ ಗಂಟೆಗಳ ಕಾಲ ಮತ್ತೆ ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ ಎಂದು  ಸಂತ್ರಸ್ತರು ಮಲಯಾಳಂ ಮಾಧ್ಯಮ ಗಳು ಮುಂದೆ ಅಲವತ್ತು ಕೊಂಡಿದ್ದಾರೆ. ಕಿರುಕುಳವನ್ನು ಮೌನವಾಗಿ ಸಹಿಸದೆ ಎದುರುತ್ತರ ಕೊಡುವವರನ್ನು ಸಂಶಯಾಸ್ಪದವಾಗಿ ಕಂಡು ಬಂದರೆಂದು ಪೋಲಿಸ್ ವಶ ಒಪ್ಪಿಸುವುದೂ ಇದೆ ಎಂದು ಹೇಳಲಾಗುತ್ತದೆ.

ಕೆಲವರು ವಿದೇಶದಿಂದ ತಮ್ಮವರಿಗಾಗಿ ದುಡ್ಡು ಕೊಟ್ಟು ತಂದ (ಕಾನೂನುಬದ್ಧವಾಗಿ) ವಸ್ತುಗಳನ್ನು ಸಿಬ್ಬಂದಿಗಳಿಗೆ ನೀಡಿ ಬಚಾವ್ ಆಗುವುದೂ ಇದೆಯಂತೆ. ಕಾಸರಗೋಡಿನ ಗ್ರಾಮಾಂತರ ಪ್ರದೇಶಗಳ ಜನರಿಗೆ  ಕಣ್ಣೂರು ವಿಮಾನ ನಿಲ್ದಾಣದಕ್ಕಿಂತ ಮಂಗಳೂರು ಏರ್ಪೋರ್ಟ್ ಹತ್ತಿರವಾಗುತ್ತಿರುವುದರಿಂದ ಅಲ್ಲಿನವರು ಮಂಗಳೂರು ವಿಮಾನ ನಿಲ್ದಾಣವನ್ನೇ  ಬಳಸುತ್ತಾರೆ.  ಎಂದು ತಿಳಿಸಿರುವ ಶ್ರೀ ಫಾರೂಕ್ ಉಳ್ಳಾಲ್, ‘ಮುಸ್ಲಿಂ ಅಮಾಯಕರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಈಗಾಗಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಅಶೋಕ್ ಗಜಪತಿ ರಾಜು,  ಮಾಜೀ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ರೀ ಬಿ.ಕೆ.ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಶ್ರೀ ಕೆ.ಸಿ.ವೇಣುಗೋಪಾಲ್, ಮಾಜೀ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್  ಸ್ಥಳೀಯ ಶಾಸಕ ಶ್ರೀ ಉಮಾನಾಥ್ ಕೋಟ್ಯಾನ್, ರಿಗೆ ಲಿಖಿತ ಮನವಿ ನೀಡಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿರುವುದಾಗಿ ಶ್ರೀ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group