ಜಿಲ್ಲಾ ಸುದ್ದಿ

ಪಾಪ್ಯುಲರ್ ಫ್ರಂಟ್ ವಿರುದ್ಧ ಮಾನಹಾನಿಕರ ವರದಿ: ‘ಕರಾವಳಿ ಅಲೆ’ ಪತ್ರಿಕೆಗೆ ದಂಡ ವಿಧಿಸಿ, ಛೀಮಾರಿ ಹಾಕಿದ ನ್ಯಾಯಾಲಯ

ಪಾಪ್ಯುಲರ್ ಫ್ರಂಟಿನ ಕಾನೂನು ಹೋರಾಟಕ್ಕೆ ಜಯ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿರುದ್ಧ ಮಾನಹಾನಿಕರ ಸುಳ್ಳುಸುದ್ದಿ ಪ್ರಕಟಿಸಿದ್ದ ಕರಾವಳಿ ಅಲೆ ಪತ್ರಿಕೆಗೆ ಜಿಲ್ಲಾ ನ್ಯಾಯಾಲಯವು 15,000 ರೂಪಾಯಿ ದಂಡ ಮತ್ತು ಸಂಘಟನೆಯ ವಿರುದ್ಧ ಪೂರ್ವಾಗ್ರಹಪೀಡಿತವಾಗಿ ಇಂತಹ ಮಾನಹಾನಿಕರ ಸುಳ್ಳುಸುದ್ದಿ ಪ್ರಕಟಿಸದಂತೆ ತಾಕೀತು ಮಾಡಿ ಛೀಮಾರಿ ಹಾಕಿದೆ. 2013ರಲ್ಲಿ ಕರಾವಳಿ ಅಲೆ ಪತ್ರಿಕೆಯು ಪಾಪ್ಯುಲರ್ ಫ್ರಂಟ್ ವಿರುದ್ಧ ಸುಳ್ಳುಸುದ್ದಿಯನ್ನು ಪ್ರಕಟಿಸಿ ಅದರ ಕಾರ್ಯಕರ್ತರನ್ನು ಕೆಟ್ಟ ಪದಗಳನ್ನು ಬಳಸಿ ಪೂರ್ವಾಗ್ರಹಪೀಡಿತ ವರದಿಯನ್ನು ಪ್ರಕಟಿಸಿತ್ತು. ಇದರ ವಿರುದ್ಧ 2013ರಲ್ಲೇ ಪ್ರಕರಣ ದಾಖಲಿಸಿದ್ದ ಪಾಪ್ಯುಲರ್ ಫ್ರಂಟ್ ಪತ್ರಿಕೆಯ ವಿರುದ್ಧ ಕಾನೂನು ಸಮರಕ್ಕೆ ಇಳಿದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 5ನೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಪತ್ರಿಕೆಯ ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದೂ, ಸುದ್ದಿಯ ಅಧಿಕೃತತೆಯನ್ನು ರುಜುವಾತು ಪಡಿಸುವಲ್ಲಿ ಪತ್ರಿಕೆಯು ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಕರಾವಳಿ ಪತ್ರಿಕೆಯು ಅಪರಾಧವು ಎಸಗಿರುವುದಾಗಿ ದೃಢಪಡಿಸಿತು. ಈ ಪ್ರಕರಣದ ತೀರ್ಪನ್ನು ಪ್ರಕಟಿಸಿದ ನ್ಯಾಯಾಲಯವು ಕರಾವಳಿ ಪತ್ರಿಕೆಯು ಮಾನನಷ್ಟ ದಂಡ 15,000 ರೂಪಾಯಿ ಪಾವತಿಸುವಂತೆ ಮತ್ತು ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ತಾಕೀತು ಮಾಡಿದೆ. ಕರಾವಳಿಅಲೆ ಪತ್ರಿಕೆಯ ಯಾವುದೇ ಸಿಬ್ಬಂದಿಯು ಪಾಪ್ಯುಲರ್ ಫ್ರಂಟ್ ವಿರುದ್ಧ ಸುಳ್ಳುಸುದ್ದಿಯನ್ನು ಪ್ರಕಟಿಸದಂತೆ ಎಚ್ಚರಿಕೆಯನ್ನು ಮಾನ್ಯ ನ್ಯಾಯಾಲಯವು ತನ್ನ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ, ವಿಧಿಸಲಾಗಿರುವ ದಂಡ ಮೊತ್ತಕ್ಕೆ ವರ್ಷಕ್ಕೆ ಶೇ. 6 ಹೆಚ್ಚುವರಿ ದಂಡವನ್ನು ಸೇರಿಸಿ ಕೊಡುವಂತೆಯೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಸಮಾಜದಲ್ಲಿ ಪಾಪ್ಯುಲರ್ ಫ್ರಂಟ್ ಸಂಘಟನೆಯ ವರ್ಚಸ್ಸಿಗೆ ಮಸಿ ಬಳಿಯುವುದಕ್ಕಾಗಿ ಪತ್ರಿಕೆಯು ಪೂರ್ವಾಗ್ರಹಪೀಡಿತವಾಗಿ ಇಂತಹ ವರದಿಯನ್ನು ಪ್ರಕಟಿಸಿದೆ ಎಂದು ಆರಂಭದಲ್ಲೇ ಸಂಘಟನೆಯು ಸ್ಪಷ್ಟೀಕರಣ ನೀಡಿ, ಪತ್ರಿಕೆಯ ವಿರುದ್ಧ ಕಾನೂನು ಹೋರಾಟ ನಡೆಸಿತ್ತು. ಇದೀಗ 6 ವರ್ಷಗಳ ಬಳಿಕ ಹೋರಾಟಕ್ಕೆ ಜಯ ಸಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನ್ಯಾಯವಾದಿ ಎಸ್.ಎಸ್. ಖಾಝಿ ವಾದಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group