ರಾಜ್ಯ ಸುದ್ದಿ

ನಾಳೆ, ಬಿಜೆಪಿಗರೇ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸುತ್ತಾರೆ: ಸಿದ್ದರಾಮಯ್ಯ ಭವಿಷ್ಯ

ವರದಿಗಾರ (ಜು.28):  ನಾಳಿನ ವಿಶ್ವಾಸ ಮತ ಯಾಚನೆಯಲ್ಲಿ ಸ್ವತಃ ಬಿಜೆಪಿಗರೇ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಅವರು ಈ ಬಗ್ಗೆ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ನಾಳೆ ವಿಶ್ವಾಸಮತ ಯಾಚಿಸಲಿದ್ದಾರೆ. ಅವರಿಗೆ ಅವರ ಪಕ್ಷದ ಶಾಸಕರ ಬೆಂಬಲವೇ ಇಲ್ಲ, ಹಾಗಾಗಿ ಅವರ ಪಕ್ಷದವರೇ ಅವರ ವಿರುದ್ಧವಾಗಿ ಮತ ಹಾಕಬಹುದು ಎಂದು ಹೇಳಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

ಇಂದು ಸ್ವೀಕರ್ ರವರು ಪತ್ರಿಕಾಗೋಷ್ಠಿ ಕರೆದು ಅತೃಪ್ತ ಶಾಸಕರ ಅನರ್ಹತೆಯ ಮಹತ್ವದ ತೀರ್ಪು ನೀಡಿದ ಕುರಿತ ವರದಿಗಾಗರ ಪ್ರಶ್ನೆಗೆ ಉತ್ತರಿಸುತ್ತಾ, ಸ್ಪೀಕರ್ ಪ್ರೆಸ್‍ಮೀಟ್ ಕರೆದಿದ್ದಾರಾ.. ಏಕೆ ಕರೆದಿದ್ದಾರೆ.. ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು. ನಾನು ಇಲ್ಲಿದ್ದೇನೇ ನನಗೆನೂ ಗೊತ್ತು. ನಿಮಗೇನಾದರೂ ಗೊತ್ತಾ..? ಎಂದು ಪ್ರಶ್ನಿಸಿದ್ದಾರೆ.

ಅತೃಪ್ತತರ ಕರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಸಿದ ಅವರು, ಪದೇ ಪದೇ ಅದೇ ವಿಚಾರ ಪ್ರಸ್ತಾಪ ಬೇಡ ಕರೆ ಮಾಡಿಲ್ಲ ಎಂದು ಹೇಳುವವರು ನನಗೆ ಕರೆ ಮಾಡಿಲ್ಲ ಎಂದರು.
ಬಿ ಫಾರಂ ಮೇಲೆ ಗೆದ್ದವರೆ ಹೊರಗೆ ಹೋಗಿದ್ದಾರೆ. ಇನ್ನೂ ಇವರನ್ನು ಏನು ಕೇಳಬಹುದು ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group