
ವರದಿಗಾರ ವಿಮರ್ಶೆ
ಕರ್ನಾಟಕದಲ್ಲಿ ತಮ್ಮನ್ನು ತಾವೇ ಮಾರಿಕೊಂಡಿರುವ ಕೆಲ ಮಾಧ್ಯಮಗಳಿಗೆ ಹಾಗೂ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಿಳಿಯಲೂ ಹೇಸದಿರುವ ಬಿಜೆಪಿಗೆ ಕೊನೆಗೂ ಶುಭ ಸುದ್ದಿ ದೊರೆತಿದೆ. ಇಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಸದನದಲ್ಲಿ ವಿಶ್ವಾಸ ಕಳೆದುಕೊಂಡು ಸರಕಾರ ಪತನವಾಗಿದೆ. ಸರಕಾರದ ಪರ 99 ಮತಗಳು ಚಲಾವಣೆಯಾದರೆ, ವಿರುದ್ಧ 105 ಮತಗಳು ಚಲಾವಣೆಯಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಕ್ಷಣದಿಂದಲೇ ಸರಕಾರ ಈಗ ಬೀಳತ್ತೆ, ಇಂದು ಬೀಳುತ್ತೆ, ನಾಳೆ ಬೀಳತ್ತೆ ಎಂದು ವಿಶೇಷ ಕಾರ್ಯಕ್ರಮ ಬಿತ್ತರಿಸುತ್ತಲೇ ಇದ್ದ, ತಮ್ಮನ್ನು ಮಾರಿಕೊಂಡ ಕೆಲ ಕನ್ನಡದ ಮಾಧ್ಯಮಗಳ 14 ತಿಂಗಳುಗಳ ಕನಸಿಗೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ ಅದೆಷ್ಟು ಮರೆಮಾಚಲು ಪ್ರಯತ್ನಿಸಿದರೂ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರಿಗೆ ಕೋಟಿ ಕೋಟಿಗಳ ಆಮಿಷಗಳನ್ನು ನೀಡಿ ಅವರನ್ನು ‘ಅತೃಪ್ತ’ ರನ್ನಾಗಿಸಿ, ಹಿನ್ನೆಲೆಯಲ್ಲಿ ನಿಂತು ಸರಕಾರವನ್ನು ಪತನವಾಗುವಂತೆ ಮಾಡಿದ್ದನ್ನು ಜನರಿಂದ ಮುಚ್ಚಿಡಲು ಹರ ಸಾಹಸ ಪಡುತ್ತಿದೆ. ಕೊನೆಗೂ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೋಟಿಗಳಿಗೆ ಮಾರಲ್ಪಟ್ಟು, ಸರಕಾರ ಪತನವಾದಂತಾಗಿದೆ.
ಕರ್ನಾಟಕದ ‘ಮಾರಿಕೊಂಡ ಮಾಧ್ಯಮ’ ಗಳಿಗೆ ನಿರ್ಗಮನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರಿಯಾದ ರೀತಿಯಲ್ಲಿಯೇ ಟಾಂಗ್ ನೀಡಿದ್ದು, “ಕಳೆದ 14 ತಿಂಗಳ ನನ್ನ ಮೈತ್ರಿ ಸರಕಾರದ ಆಳ್ವಿಕೆಗೆ ಕರ್ನಾಟಕದ ಮಾಧ್ಯಮಗಳು ಕೊಟ್ಟಂತಹಾ ‘ಸಹಕಾರ’ಕ್ಕೆ ಹೃದಯ ತುಂಬಿದ ಧನ್ಯವಾದಗಳು” ಎಂದು ಹೇಳಿ ವ್ಯಂಗ್ಯವಾಡಿದ್ದಾರೆ.
