ರಾಷ್ಟ್ರೀಯ ಸುದ್ದಿ

ಗೋವಾ ಕಾಂಗ್ರೆಸ್ ಪಕ್ಷಾಂತರ : SDPI ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಭಾಗಿ !!

ವರದಿಗಾರ ಜು 14 : ‘ಅಪರೇಶನ್ ಕೊಳಚೆಗುಂಡಿ’ ಎಂದೇ ಕುಖ್ಯಾತಿ ಪಡೆದಿರುವ ಬಿಜೆಪಿಯ ‘ಅಪರೇಶನ್ ಕಮಲ’ಕ್ಕೆ ಬಲಿಯಾಗಿರುವ ಗೋವಾ ಕಾಂಗ್ರೆಸ್ ಪಕ್ಷದ 10 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿರುವ ಘಟನೆಯ ನಂತರ ದಿಗ್ಭ್ರಾಂತಗೊಂಡಂತಿರುವ ಕಾಂಗ್ರೆಸ್ ಪಕ್ಷ ಇದುವರೆಗೂ ಸಾಂಕೇತಿಕವಾಗಿಯಾದರೂ ಪ್ರತಿಭಟನೆ ನಡೆಸುವ ಗೋಜಿಗೂ ಹೋಗದೆ ಕೈಕಟ್ಟಿ ಕುಳಿತಿದೆ. ಆದರೆ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಗೋವಾ ಘಟಕವು ಶನಿವಾರ MMC ಚೌಕದಲ್ಲಿ ಬಿಜೆಪಿಯ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಿತ್ತು. ಅಚ್ಚರಿಯೆಂಬಂತೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಹಾಗೂ ಮಾಜಿ ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಎಸ್ಡಿಪಿಐ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಯ ಹಣದ ಆಮಿಷಗಳಿಗೆ ಬಲಿಯಾಗಿರುವುದನ್ನು ಖಂಡಿಸಿ ಸ್ವತಃ ತಮ್ಮದೇ ಪಕ್ಷ ಯಾವುದೇ ಪ್ರತಿಭಟನೆಗಳಿಗೆ ಮುಂದಾಗದೆ,  ಎಸ್ಡಿಪಿಐ ನಡೆಸಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯೋರ್ವರೇ ಖುದ್ದು ಭಾಗವಹಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಎಸ್ಡಿಪಿಐ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ದಿಗಂಬರ್ ಕಾಮತ್, ” ನಾನಿಲ್ಲಿ ಎಸ್ಡಿಪಿಐ ಪ್ರತಿಭಟನೆಗೆ ಬೆಂಬಲ ನೀಡಲು ಬಂದಿದ್ದೇನೆ. ಇದು ಈಗಿನ ಪರಿಸ್ಥಿತಿಯ ಬೇಡಿಕೆಯಾಗಿದೆ.  ಗೋವಾದಲ್ಲಿ ಏನು ಸಂಭವಿಸಿದೆಯೋ ಅದು ನಿಜಕ್ಕೂ ಖೇದಕರ. ವಿರೋಧ ಪಕ್ಷದ ನಾಯಕನೋರ್ವನೇ ಇನ್ನೊಂದು ಪಕ್ಷಕ್ಕೆ ಹಾರುವುದನ್ನು ಯೋಚಿಸಿದರೆ ಆಘಾತವಾಗುತ್ತದೆ. SDPI ಇಂದು ಬಹುಮುಖ್ಯವಾದ ವಿಷಯವೊಂದನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದೆ. ನಾವು ಇದೇ ರೀತಿ ಜನರ ನಡುವೆ ಜಾಗೃತಿ ಮೂಡಿಸಲು ಮುಂದಾಗಬೇಕಿದೆ” ಎಂದವರು ಹೇಳಿದರು. ದಿಗಂಬರ್ ಕಾಮತ್ ಜೊತೆಗೆ ಪ್ರತಿಭಟನೆಯಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ದಾಮು ಶಿರೋಡ್ಕರ್, ಮಾರ್ಗೋವಾ ಮುನ್ಸಿಪಾಲಿಟಿಯ ಕೌನ್ಸಿಲರ್ ಡೋರಿಸ್ ಟೆಕ್ಸೀರಾ ಕೂಡಾ ಹಾಜರಿದ್ದುದು ವಿಶೇಷವಾಗಿತ್ತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group