ರಾಷ್ಟ್ರೀಯ ಸುದ್ದಿ

ವೈದ್ಯರ, ಪೊಲೀಸರ ನಿರ್ಲಕ್ಷ್ಯದಿಂದ ತಬ್ರೇಝ್ ಅನ್ಸಾರಿ ಸಾವು: ತನಿಖಾ ವರದಿ

“ಜೈ ಶ್ರೀರಾಮ್” “‘ಜೈ ಹನುಮಾನ್” ಹೇಳುವಂತೆ ಒತ್ತಾಯಿಸಿ ಜಾರ್ಖಂಡಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ

ವರದಿಗಾರ (ಜುಲೈ,12): ಕಳೆದ ತಿಂಗಳು “ಜೈ ಶ್ರೀರಾಮ್” “‘ಜೈ ಹನುಮಾನ್” ಹೇಳುವಂತೆ ಒತ್ತಾಯಿಸಿ ಹಿಂದುತ್ವ ಭಯೋತ್ಪಾದಕರಿಂದ ಭೀಭತ್ಸಕ ರೀತಿಯಲ್ಲಿ ಥಳಿತಕ್ಕೊಳಗಾಗಿ ಹತ್ಯೆಗೀಡಾದ ಜಾರ್ಖಂಡ್ ಸೆರೈಕೇಲ ಖಸ್ರ್ವಾನ್ ಜಿಲ್ಲೆಯ 24 ವರ್ಷದ ತಬ್ರೇಝ್ ಅನ್ಸಾರಿ ಪ್ರಕರಣದ ತನಿಖೆ ನಡೆಸಿದ ಜಿಲ್ಲಾಡಳಿತ ತನ್ನ ವರದಿಯಲ್ಲಿ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ವೈದ್ಯರ ಕರ್ತವ್ಯಲೋಪದಿಂದ ತಬ್ರೇಝ್ ಅನ್ಸಾರಿ ಮೃತಪಟ್ಟಿದ್ದಾರೆಂದು  ಹೇಳಿದೆ.

ತನ್ನ ಸ್ನೇಹಿತರ ಜತೆ ಹೋಗುತ್ತಿದ್ದ ತಬ್ರೇಝ್ ಅನ್ಸಾರಿ ಮೇಲೆ ಹಿಂದುತ್ವ ಭಯೋತ್ಪಾದಕರು ಮೋಟಾರ್ ಸೈಕಲ್ ಕಳ್ಳತನದ ಆರೋಪ ಹೊರಿಸಿ ‘ಜೈ ಶ್ರೀ ರಾಂ’, ‘ಜೈ ಹನುಮಾನ್’ ಹೇಳುವಂತೆ ಒತ್ತಾಯಿಸಿ ಮಾರಣಾಂತಿಕವಾಗಿ ಥಳಿಸಿ ಅವರ ಸಾವಿಗೆ ಕಾರಣರಾಗಿದ್ದರು.

ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ತನಿಖಾ ತಂಡದಲ್ಲಿ ಉಪ ವಿಭಾಗೀಯ ಅಧಿಕಾರಿ ಹಾಗೂ ಜಿಲ್ಲಾ ಸಿವಿಲ್ ಸರ್ಜನ್ ಒಳಗೊಂಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸುವಲ್ಲಿ ಸ್ಥಳೀಯ ಪೊಲೀಸರು ವಿಳಂಬಿಸಿದ್ದು ಮಾತ್ರವಲ್ಲದೆ ಯುವಕನಿಗೆ ಚಿಕಿತ್ಸೆ ನೀಡಿದ್ದ ವೈದ್ಯರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲ ವರದಿಗಳು ತಿಳಿಸಿವೆ.

ಘಟನೆಯ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ತಬ್ರೇಝ್ ರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದರೂ ತಪಾಸಣೆ ನಡೆಸಿದ ಇಬ್ಬರು ವೈದ್ಯರು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡುವ ಬದಲು ಅವರನ್ನು ಜೈಲಿಗೆ ಕೊಂಡೊಯ್ಯಬಹುದು ಎಂದು ಹೇಳಿದ್ದರು. ನಾಲ್ಕು ದಿನಗಳ ನಂತರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

‘ಆತ ಮುಸ್ಲಿಂ ಎಂಬ ಕಾರಣಕ್ಕೆ ನಿಷ್ಕರುಣೆಯಿಂದ ಥಳಿಸಲಾಗಿತ್ತು. ನನಗೆ ಯಾರೂ ಇಲ್ಲ, ನನ್ನ ಪತಿಯೇ ನನಗಿದ್ದ ಏಕೈಕ ಆಧಾರ, ನನಗೆ ನ್ಯಾಯ ಬೇಕು” ಎಂದು ತಬ್ರೇಝ್ ಪತ್ನಿ ಶಹಿಸ್ತಾ ಪರ್ವೀನ್ ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರವ್ಯಾಪಿ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡು ಆರೋಪಿಗಳನ್ನು ಬಂಧಿಸುವಂತೆ ಹಾಗೂ ಗುಂಪು ಹಿಂಸಾ ಹತ್ಯೆ ವಿರುದ್ಧ ನೂತನ ಕಾನೂನು ಜಾರಿಗೆ ಒತ್ತಾಯಿಸಿದ್ದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group