ಸಾಮಾಜಿಕ ತಾಣ

ವಿಧಾನಸೌಧದಲ್ಲಿ ಹೋಗಿ ಗಲಾಟೆ ಮಾಡಿ; ಬಿಜೆಪಿ ನಾಯಕರಿಗೆ ಆರ್.ಅಶೋಕ್ ಕರೆ?

ಬಿಜೆಪಿಯ ಸಂಚು ಬಹಿರಂಗ;ಕಾಂಗ್ರೆಸ್

ವರದಿಗಾರ (ಜುಲೈ.12): ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತಷ್ಟು ತಾರಕ್ಕೇರಿರುತ್ತಿದ್ದು, ಅದರ ಮುಂದುವರಿದ ಭಾಗದಂತೆ ಬಿಜೆಪಿ ನಾಯಕ ಆರ್.ಅಶೋಕ್ ವಿಧಾನಸೌಧದಲ್ಲಿ ಹೋಗಿ ಗಲಾಟೆ ಎಬ್ಬಿಸುವಂತೆ ಕರೆ ನೀಡುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಾದ್ಯಂತ ಹರಿದಾಡುತ್ತಿದ್ದು, ಅಧಿಕಾರಕ್ಕಾಗಿನ ಬಿಜೆಪಿಯ ಕುತಂತ್ರಗಳನ್ನು ಹಾಗೂ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಲಿಯಬಲ್ಲರು ಎಂದು ಹೇಳಿ ಜನತೆ ಬಿಜೆಪಿಯನ್ನು ಕೆಣಕುತ್ತಿದ್ದಾರೆ.

ವೀಡಿಯೋ ಗೆ ಸಂಬಂಧಿಸಿದಂತೆ, ಕರ್ನಾಟಕ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ‘ವಿಧಾನಸೌಧದಲ್ಲಿ ಗಲಾಟೆ ಮಾಡಲು ಬಿಜೆಪಿಯ ಸಂಚು ಬಹಿರಂಗ’ ಎಂದು ಹೇಳಿಕೊಂಡಿದೆ.

ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೋ ವೀಕ್ಷಿಸಿ:

‘ಆಪರೇಷನ್ ಕಮಲದ ಮುಖೇನ ಸರ್ಕಾರ ಹಿಡಿಯಲು ಪ್ರಯತ್ನಿಸುತ್ತಿರುವವರು’ ಎಂದು ಕಾಂಗ್ರೆಸ್ ಆರೋಪಿಸಿದೆ.

‘ವಿಧಾನಸೌಧದಲ್ಲಿ ದಾಂಧಲೆ ಎಬ್ಬಿಸಲು ಸಂಚು ರೂಪಿಸುತ್ತಿರುವುದು ಈ ಸದನಕ್ಕೆ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಘೋರ ಅಪಮಾನವಾಗಿದೆ’ ಎಂದು ಹಂಚಿಕೊಂಡಿರುವ ವೀಡಿಯೋದಲ್ಲಿ ಕಾಂಗ್ರೆಸ್ ಹೇಳಿದೆ.

ವಿಧಾನಸೌಧದಲ್ಲಿ ಹೋಗಿ ಗಲಾಟೆ ಮಾಡಿ ಎಂದು ಹೇಳಿದ ಆರ್.ಅಶೋಕ್ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group