ರಾಷ್ಟ್ರೀಯ ಸುದ್ದಿ

‘ಮನೋಹರ್ ಪರಿಕ್ಕರ್ ನಿಧನದಂದೆ ಬಿಜೆಪಿಯಲ್ಲಿದ್ದ ವಿಶ್ವಾಸ ಮತ್ತು ಬದ್ಧತೆ ಅಂತ್ಯವಾಗಿದೆ’: ಪರಿಕ್ಕರ್ ಮಗ

ವರದಿಗಾರ (ಜುಲೈ,11): ‘ಮನೋಹರ್ ಪರಿಕ್ಕರ್ ಅವರ ಕಾಲದಲ್ಲಿ ವಿಶ್ವಾಸ ಮತ್ತು ಬದ್ಧತೆ ಬಿಜೆಪಿಯಲ್ಲಿದ್ದರೆ ಆ ನಿಲುವು ಮಾರ್ಚ್ 17ರಂದು ಅಂತ್ಯವಾಗಿದೆ (ಮನೋಹರ್ ಪರಿಕ್ಕರ್ ನಿಧನರಾದ ದಿನ)’ ಎಂದು ಮನೋಹರ್ ಪರಿಕ್ಕರ್ ಮಗ ಉತ್ಪಲ್ ಪರಿಕ್ಕರ್ ಹೇಳಿದ್ದಾರೆ.

ಅವರು ಗೋವಾದ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿರುವ ಅನಿರೀಕ್ಷಿತ ವಿದ್ಯಮಾನದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ, ‘ತಮ್ಮ ತಂದೆಯ ಮರಣಾನಂತರ ಕೇಸರಿ ಪಕ್ಷ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಹೇಳಿ ಬಿಜೆಪಿಯ ಅನೈತಿಕ ಮಾರ್ಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿ ಈಗ ಸಾಗಿರುವ ಹಾದಿ ಸರಿಯಾದ ಹಾದಿಯೇ ಎಂದು ಸಮಯವೇ ನಿರ್ಧರಿಸುವುದು’ ಎಂದ ಉತ್ಪಲ್, ತಾವು ಬಿಜೆಪಿಯಲ್ಲಿಯೇ ಉಳಿದುಕೊಂಡು ಪಕ್ಷದ ಹಿರಿಯರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ತಮ್ಮ ತಂದೆಯ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಶಾಸಕ ಬಿಜೆಪಿ ಸೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಮುಂದಿನ ಎರಡು ವರ್ಷಗಳಲ್ಲಿ ತಾವೆಲ್ಲಿರಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ” ಎಂದು ಕುಟುಕಿದ್ದಾರೆ.

ತಮ್ಮ ತಂದೆಯ ನಿಧನ ನಂತರ ಅವರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಪಲ್ ಉತ್ಸುಕರಾಗಿದ್ದರೂ ಪಕ್ಷ ಅವರಿಗೆ ಅವಕಾಶ ನೀಡಿರಲಿಲ್ಲ. ಈ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಟನಾಸಿಯೊ ಮೊನ್ಸೆರ್ರೆಟ್ ಜಯ ಗಳಿಸಿದ್ದರು. ಬುಧವಾರ ಸಂಜೆ ಬಿಜೆಪಿ ಸೇರಿದ ಹತ್ತು ಕಾಂಗ್ರೆಸ್ ಶಾಸಕರ ಪೈಕಿ ಅಟನಾಸಿಯೊ ಕೂಡ ಸೇರಿದ್ದಾರೆ ಎಂಬುವುದು ಇಲ್ಲಿ ಗಮನಾರ್ಹ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group