
ವರದಿಗಾರ (ಜುಲೈ,11): ಅತೃಪ್ತ ಶಾಸಕರಲ್ಲಿ ಕೆಲವರಿಗೆ ವಾಪಸ್ ಬರುವ ಮನಸ್ಸಿದೆ. ಇನ್ನು ಕೆಲವರಿಗೆ ಮರಳಿ ಬರುವ ಮನಸ್ಸಿಲ್ಲ ಎಂದು ಸಚಿವ ಜಿ.ಟಿ.ದೇವೆಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರನ್ನು ಭೇಟಿ ಮಾಡಲು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನಾವು ಹೋಗಿದ್ದೆವು. ಆದರೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ನಾವು ಬುಕ್ ಮಾಡಿದ ರೂಮ್ ನ್ನೂ ರಾಜಕೀಯ ಕುತಂತ್ರಗಳಿಂದ ಕ್ಯಾನ್ಸಲ್ ಮಾಡಲಾಗಿದೆ. ಎಲ್ಲಿದೆ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.
‘ನಾವು ಆಯುಧ ಇಟ್ಟುಕೊಂಡು ಹೋಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಹೋಟೆಲ್ನಲ್ಲೇ ಇದ್ದರು. ಆದರೆ ನಮ್ಮನ್ನು ಮಾತ್ರ ಬಿಡಲಿಲ್ಲ’ ಎಂದು ಜಿಟಿಡಿ ಹೇಳಿದ್ದಾರೆ.
