
‘ಬಿಜೆಪಿಯ ಹುಚ್ಚು ಕನಸು ನನಸಾಗುವುದಿಲ್ಲ‘
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ವರದಿಗಾರ (ಜುಲೈ, 10): ‘ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರ, ಸ್ವಾಭಿಮಾನಿ ಕರ್ನಾಟಕದಲ್ಲಿ ನಡೆಯದು’ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದಾರಮಯ್ಯ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರ, ಸ್ವಾಭಿಮಾನಿ ಕರ್ನಾಟಕದಲ್ಲಿ ನಡೆಯದು. ಅಡ್ಡಹಾದಿಯ ಮೂಲಕ,ಹಣದ ಥೈಲಿ ಹಿಡಿದುಕೊಂಡು ಅಧಿಕಾರಕ್ಕೆ ಬರುವ ಬಿಜೆಪಿ ಹುಚ್ಚುಕನಸನ್ನು ನನಸು ಮಾಡಲು ನಾವು ಬಿಡುವುದಿಲ್ಲ. ನಮ್ಮ ಈ ಹೋರಾಟ ರಾಜ್ಯದಾದ್ಯಂತ ಮುಂದುವರಿಯಲಿದೆ” ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ @narendramodi ಸರ್ವಾಧಿಕಾರ, ಸ್ವಾಭಿಮಾನಿ ಕರ್ನಾಟಕದಲ್ಲಿ ನಡೆಯದು. ಅಡ್ಡಹಾದಿಯ ಮೂಲಕ,ಹಣದ ಥೈಲಿ ಹಿಡಿದುಕೊಂಡು ಅಧಿಕಾರಕ್ಕೆ ಬರುವ @BJP4India ಹುಚ್ಚುಕನಸನ್ನು ನನಸು ಮಾಡಲು ನಾವು ಬಿಡುವುದಿಲ್ಲ. ನಮ್ಮ ಈ ಹೋರಾಟ ರಾಜ್ಯದಾದ್ಯಂತ ಮುಂದುವರಿಯಲಿದೆ.#BJPKidnapsMLAs
— Siddaramaiah (@siddaramaiah) July 10, 2019
“ಮುಂಬೈಯಲ್ಲಿ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ತಂಗಿರುವ ರಿನೈಸಾನ್ಸ್ ಹೊಟೇಲ್ ಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಭೇಟಿ ನೀಡಲು ಅವಕಾಶ ನೀಡದೆ ಇರುವುದು ಮತ್ತು ಕರ್ನಾಟಕದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ನೀಡದೆ ಇರುವುದು ಇಡೀ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂಬುದಕ್ಕೆ ಸಾಕ್ಷಿ. ಈ ಎಲ್ಲ ಬೆಳವಣಿಗೆಯ ನಂತರವೂ ಇದರಲ್ಲಿ ಬಿಜೆಪಿ ಕೈವಾಡವಿಲ್ಲ ಎಂದರೆ ಯಾರಾದರೂ ನಂಬುತ್ತಾರಾ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ, ಮುಂಬೈನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹೊಟೇಲ್ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ.
ಇದರ ನಂತರವೂ ಕಾಂಗ್ರೆಸ್ ಶಾಸಕರ ರಾಜೀನಾಮೆ ಪ್ರಕರಣದಲ್ಲಿ @BJP4India @BJP4Karnataka ಪಾತ್ರ ಇಲ್ಲ ಎಂದರೆ ಯಾರಾದರೂ ನಂಬ್ತಾರಾ?@INCKarnataka— Siddaramaiah (@siddaramaiah) July 10, 2019
.@BJP4India claims to have no role in kidnapping our MLAs but Shri. @DKShivakumar is not allowed inside the hotel by Mumbai police who is acting on the behest of @Dev_Fadnavis.
Prima facie evi show that our MLAs are held in hostage & their lives are under threat from @BJP4India.
— Siddaramaiah (@siddaramaiah) July 10, 2019
