ರಾಜ್ಯ ಸುದ್ದಿ

ರಾಜೀನಾಮೆಯನ್ನು ಖುದ್ದು ಭೇಟಿಯಾಗದೆ ಅಂಗೀಕರಿಸಲಾಗದು: ಸ್ಪೀಕರ್ ಸ್ಪಷ್ಟನೆ

‘ಶಾಸಕರು ತಮ್ಮ ರಾಜೀನಾಮೆಯ ಬಗ್ಗೆ ಯಾವುದೇಪೂರ್ವಾನುಮತಿ ಪಡೆದಿರಲಿಲ್ಲ’

ವರದಿಗಾರ (ಜುಲೈ.09): ಕರ್ನಾಟಕ ರಾಜಕೀಯದಲ್ಲಿ ಬಹಳಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಒಂದು ಕಡೆ ಕುದುರೆ ವ್ಯಾಪಾರ ನಡೆಯುತ್ತಿದ್ದರೆ ಮತ್ತೊಂದು ಕಡೆ ಚುನಾಯಿತ ಸಚಿವರು, ಶಾಸಕರು ರಾಜೀನಾಮೆಗೆ ಮುಂದಾಗಿರುವುದು ಕೆಲವು ದಿನಗಳ ಸುದ್ದಿಯಾಗಿದೆ. ಕಳೆದ ಶನಿವಾರದಿಂದ ಕಚೇರಿಗೆ ತಲುಪಿರುವ ರಾಜೀನಾಮೆ ಪತ್ರಗಳಿಗೆ ಸಂಬಂಧಿಸಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದು, ರಾಜೀನಾಮೆ ನೀಡುವವರು ಖುದ್ದು ಭೇಟಿಯಾಗದ ಹೊರತು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 9 ಮತ್ತು ಜೆಡಿಎಸ್ ಪಕ್ಷದ 3 ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ವತಃ ತನ್ನನ್ನು ಭೇಟಿಯಾಗದ ಹೊರತು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ. ಸ್ಪೀಕರ್ ಸ್ಪಷ್ಟನೆಯಿಂದ ಮೈತ್ರಿ ಸರಕಾರ ಸದ್ಯದ ಅಪಾಯದಿಂದ ಪಾರಾಗಿದೆ ಎನ್ನಲಾಗಿದೆ.

ಶಾಸಕರು ತಮ್ಮ ರಾಜೀನಾಮೆಯ ಬಗ್ಗೆ ಯಾವುದೇಪೂರ್ವಾನುಮತಿ ಪಡೆದಿರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿರುವುದಕ್ಕೆ ನಾನು ಹೊಣೆಯಲ್ಲ. ನಿಯಮಾವಳಿಗಳ ಅನ್ವಯ ಶಾಸಕರು ಖುದ್ದು ಭೇಟಿಯಾಗಿ ರಾಜೀನಾಮೆ ನೀಡಬೇಕು ಎಂದವರು ಸ್ಪಷ್ಟಪಡಿಸಿದ್ದಾರೆ.

 

Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group