ರಾಷ್ಟ್ರೀಯ ಸುದ್ದಿ

ಅಥ್ಲೀಟ್ ಅಂಜು ಬಾಬಿ ಬಿಜೆಪಿ ಸೇರಿದ್ದಾರೆ ಎಂಬುವುದು ಸುಳ್ಳು; ಮುಖಭಂಗಕ್ಕೊಳಗಾದ ಬಿಜೆಪಿ

ವರದಿಗಾರ (ಜುಲೈ,08): ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಅಥ್ಲೆಟಿಕ್ಸ್ ಪದಕ ವಿಜೇತ, ಒಲಿಂಪಿಯನ್ ಲಾಂಗ್ ಜಂಪರ್ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ಅಂಜು ಬಾಬಿ ಜಾರ್ಜ್ ನಿರಾಕರಿಸಿದ್ದು, ಈ ನಿರಾಕರಣೆಯು ರಾಜ್ಯ ಬಿಜೆಪಿಯನ್ನು ಮುಗಭಂಗಕ್ಕೀಡಾಗಿಸಿದೆ.

ಅಥ್ಲೀಟ್ ಅಂಜು ಬಾಬಿ ಜಾರ್ಜ್, ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ ಎನ್ನುವ ಸುದ್ದಿಗಳು ಹಾಗೂ ಬಿಜೆಪಿಯ ಧ್ವಜವನ್ನು ಹಿಡಿದಿರುವ ಫೋಟೋ ಹರಿದಾಡಿತ್ತು. ಈ ಬಗ್ಗೆ ಸತ್ಯವನ್ನು ಬಯಲಿಗೆಳೆಯುವ ‘ಬೂಮ್ ಫ್ಯಾಕ್ಟ್ ಚೆಕ್’ ಸುದ್ದಿಯ ಬೆನ್ನು ಹಿಡಿದು ಹೊರಟಿತ್ತು. ಈ ಬಗ್ಗೆ ಸ್ವತಃ ಅಂಜು ಬಾಬಿ ಜಾರ್ಜ್ ರನ್ನು ಸಂಪರ್ಕಿಸಿದ ತಂಡ ಅವರನ್ನು ವಿಚಾರಿಸಿತ್ತು. ವಿಚಾರಣೆಯ ಸಂದರ್ಭ ಬಿಜೆಪಿಯ ಸದಸ್ಯತ್ವವನ್ನು ಸ್ವೀಕರಿಸಿದ ಸುದ್ದಿಗಳು ಸುಳ್ಳುಗಳಾಗಿವೆ ಎಂದು ಅವರು ಹೇಳಿರುವುದಾಗಿ ‘ಬೂಮ್ ‘ ವರದಿ ಮಾಡಿವೆ.

Anju joins BJP ANI

ಬೂಮ್ ತಂಡವು ಈ ಬಗ್ಗೆ ಅಂಜು ಬಾಬಿ ಜಾರ್ಜ್ ರೊಂದಿಗೆ ಮಾತನಾಡಿದಾಗ, “ನಾನು ಆ ಸಮಾರಂಭಕ್ಕೆ ಕೇಂದ್ರ ಸಚಿವರು, ಕುಟುಂಬ ಸ್ನೇಹಿತರಾಗಿರುವ ವಿ ಮುರಳೀಧರನ್ ರನ್ನು ಭೇಟಿಯಾಗಲು ಹೋಗಿದ್ದೆ. ನಾನು ವೇದಿಕೆ ಪಕ್ಕದಲ್ಲಿ ನಿಂತಿರುವುದನ್ನು ಕಂಡ ಬಿಜೆಪಿ ನಾಯಕರು ನನ್ನನ್ನು ವೇದಿಕೆಗೆ ಆಹ್ವಾನಿಸಿ ಬಿಜೆಪಿ ಧ್ವಜವನ್ನು ನನ್ನ ಕೈಗಿತ್ತು ಸ್ವಾಗತಿಸಿದರು. ಕ್ರೀಡೆಯೇ ನನ್ನ ಪಕ್ಷ, ನನಗೆ ಬೇರೆ ಯಾವುದೇ ಪಕ್ಷ ಸೇರುವ ಉದ್ದೇಶ ನನಗಿಲ್ಲ” ಎಂದು ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.

ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ರವರು ಜುಲೈ 7ರಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಂಜು ಬಾಬಿ ಜಾರ್ಜ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದರು ಎಂದು ಬೂಮ್ ವರದಿ ಮಾಡಿವೆ.  “ನಾನು ಅಂಜು ಮತ್ತು ಅವಳ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದೇನೆ. ನಿನ್ನೆ, ನಾನು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಅವಳು ನನಗೆ ಕರೆ ಮಾಡಿ ಭೇಟಿಯಾಗಬಹುದೇ ಎಂದು ಕೇಳಿದರು ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆ. ನಾನು ಭಾಗವಹಿಸಬೇಕಾಗಿದ್ದ ಕಾರ್ಯಕ್ರಮಕ್ಕೆ ಅವರು ಬಂದಾಗ ಕಾರ್ಯಕ್ರಮ ಪ್ರಾರಂಭವಾಗಿತ್ತು. ಹಾಗಾಗಿ ನಾನು ಅವಳನ್ನು ವೇದಿಕೆಗೆ ಆಹ್ವಾನಿಸಿದೆ, ಏಕೆಂದರೆ ಅವಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಎನ್ನುವುದಕ್ಕಾಗಿ ”ಎಂದು ಮುರಳೀಧರನ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವುದನ್ನು ಬೂಮ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಬಿಜೆಪಿಗೆ ಸೇರ್ಪಡೆಯಾಗಿರುವುದಲ್ಲ ಎಂಬುವುದನ್ನು ಸ್ಪಷ್ಟನೆ ನೀಡುತ್ತಿರುವ ಕೇಂದ್ರ ಸಚಿವ ವಿ ಮುರಳೀಧರನ್

https://twitter.com/duryodan_/status/1147782985296601088?s=20

ಮಾಧ್ಯಮಗಳು ANI ಸುದ್ದಿ ಸಂಸ್ಥೆಯ ಟ್ವೀಟ್ ನ್ನು ಪರಿಗಣಿಸಿ ವರದಿ ಮಾಡುತ್ತೆ

ಎಎನ್‌ಐ ಸುದ್ದಿ ಸಂಸ್ಥೆಯ ಟ್ವೀಟ್‌ನ ಬಳಿಕ, ಟೈಮ್ಸ್ ಆಫ್ ಇಂಡಿಯಾ (ಟಿಒಐ), ನ್ಯೂಸ್ ನೇಷನ್, ಮತ್ತು ಎನ್‌ಡಿಟಿವಿ ಸೇರಿದಂತೆ ಹಲವಾರು ಮಾಧ್ಯಮಗಳು ಎಎನ್‌ಐ ಅನ್ನು ಉಲ್ಲೇಖಿಸಿ ಜಾರ್ಜ್ ಬಿಜೆಪಿಗೆ ಸೇರಿದ್ದಾರೆ ಎಂದು ತಪ್ಪಾಗಿ ವರದಿ ಮಾಡಿದೆ ಎಂದು ವರದಿ ತಿಳಿಸಿದೆ.

Anju Joins BJP TOI

Anju joins BJP News Nation

Anju joins BJP NDTV article

ಬಿಜೆಪಿ ಕರ್ನಾಟಕವು ತನ್ನ ಫೇಸ್ಬುಕ್ ನ ಅಧಿಕೃತ ಖಾತೆಯಲ್ಲಿ ಅಂಜು ಬಾಬಿ ಜಾರ್ಜ್ ರವರ ಫೋಟೊವನ್ನು ಬಳಸಿಕೊಂಡಿದೆ.

ಅಂಜು ಬಾಬಿ ಜಾರ್ಜ್ ವಿರುದ್ಧನೇ ಟೀಕಿಸಿದ ಬಿಜೆಪಿ:

ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕರ್ನಾಟಕ ಬಿಜೆಪಿ ಮಾಧ್ಯಮ ವಕ್ತಾರೆ ಎಸ್.ಶಾಂತರಾಮ್, “ಅವರು (ಜಾರ್ಜ್) ವೇದಿಕೆಗೆ ಬಂದರು, ಪಕ್ಷದ ಧ್ವಜವನ್ನು ತೆಗೆದುಕೊಂಡರು ಮತ್ತು ನಮ್ಮ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಘೋಷಿಸಿದರು. ಅವರು ತಮ್ಮ ನಿಲುವನ್ನು ಏಕೆ ಬದಲಾಯಿಸಿದರು ಎಂದು ತಿಳಿದಿಲ್ಲ. ಅಧ್ಯಕ್ಷರಿಂದ ವೇದಿಕೆಯಲ್ಲಿ ಧ್ವಜವನ್ನು ತೆಗೆದುಕೊಳ್ಳುವ ಅರ್ಥ ಅವಳಿಗೆ ತಿಳಿದಿದೆಯೇ?” ಎಂದು ಪ್ರಶ್ನಿಸುತ್ತಾ ಅಂಜು ಬಾಬಿಯವರನ್ನೇ ಟೀಕಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group