ರಾಜ್ಯ ಸುದ್ದಿ

ಚುನಾವಣೆ ಬೇಕಿರುವುದು ಬಿಜೆಪಿಯ ದೆಹಲಿ ಮಟ್ಟದ ನಾಯಕರಿಗೆ ಮಾತ್ರ: ಡಿ.ಕೆ ಶಿವಕುಮಾರ್

‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಅನ್ಕೊಂಡಿದ್ದಾರೆ ಬಿಜೆಪಿಯವರು’

ವರದಿಗಾರ (ಜುಲೈ.7):  ‘ನಮ್ಮ ಶಾಸಕರು ಸೇರಿದಂತೆ ಬಿಜೆಪಿಯ ಯಾವ ಶಾಸಕರಿಗೂ ಚುನಾವಣೆ ನಡೆಯೋದು ಬೇಕಿಲ್ಲ. ಬಿಜೆಪಿಯ ಶಾಸಕರೇ ನನಗೆ ಫೋನ್ ಮಾಡಿ ಅಣ್ಣಾ ಹೇಗಾದ್ರು ಮಾಡಿ ಎಲೆಕ್ಷನ್‌ಗೆ ಹೋಗೋದು ತಪ್ಪಿಸಿ ಎಂದಿದ್ದಾರೆ. ಚುನಾವಣೆ ಬೇಕಿರುವುದು ಬಿಜೆಪಿಯ ದೆಹಲಿ ಮಟ್ಟದ ನಾಯಕರಿಗೆ ಮಾತ್ರ. ಹೋಗಿರೊ ಶಾಸಕರನ್ನು ಕರೆತರುವ ಪ್ರಯತ್ನ ಮಾಡ್ತಿದ್ದೇವೆ. ಯಾವ ರೀತಿ ಅನ್ನೋದನ್ನ ಹೇಳೋದಕ್ಕೆ ಆಗಲ್ಲ.’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘ನಾನು ಏಳು ಬಾರಿ ಶಾಸಕನಾಗಿದ್ದವನು. ರಾಜಕೀಯ ಏನು ಅನ್ನೋದು ನನಗೂ ಗೊತ್ತು. ನಮ್ಮ ಶಾಸಕರ ಜೊತೆ ಎಷ್ಟೆಷ್ಟು ಮೀಟಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ ನನಗೆ. ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಅನ್ಕೊಂಡಿದ್ದಾರೆ ಬಿಜೆಪಿಯವರು’ ಎಂದು ರಾಜಕೀಯ ಪಂಡಿತನಂತೆ ಮಾತನಾಡುತ್ತಿದ್ದರು.

ಮಲ್ಲಿಕಾರ್ಜುನ ಖರ್ಗೆ ಅಥವಾ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಿದರೆ ಶಾಸಕರು ವಾಪಸ್ ಬರ್ತಾರೆ ಅನ್ನೊ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಐದು ವರ್ಷ ನೀವೇ ಮುಖ್ಯಮಂತ್ರಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದೀವಿ. ಅವರನ್ನು ವರ್ಷದವರೆಗೆ ಇಳಿಸುವ ಮಾತಿಲ್ಲ. ಅತೃಪ್ತರ ಮನವೊಲಿಸುವ ಸಭೆ ನಡೆಸುತ್ತಿದ್ದೀವಿ ನೋಡೋಣ ಏನಾಗುತ್ತದೆ’ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group