ರಾಜ್ಯ ಸುದ್ದಿ

ಆರೆಸ್ಸೆಸ್ ಬೈಠಕ್ ಸ್ಥಳ ಇದೀಗ ಅತ್ಯಾಚಾರಿಗಳ ಕೇಂದ್ರ ಸ್ಥಳವಾಗಿದೆ: ಹರೀಶ್ ಕುಮಾರ್

‘ಬಿಜೆಪಿ ಶಾಸಕ, ಸಚಿವರ ಕರ್ಮಕಾಂಡವೇ ಪುತ್ತೂರು ಘಟನೆಗೆ ಪ್ರೇರಣೆ’: ಶಕುಂತಳಾ ಶೆಟ್ಟಿ

ವರದಿಗಾರ (ಜುಲೈ.7): ಆರೆಸ್ಸೆಸ್ ನ ಬೈಠಕ್ ನಡೆಯುವ ಸ್ಥಳಗಳು ಇದೀಗ ಅತ್ಯಾಚಾರಿಗಳ ಕೇಂದ್ರ ಸ್ಥಳವಾಗಿ ಮಾರ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ಅವರು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಅತ್ಯಾಚಾರಿಗಳು ಸಾಮೂಹಿಕ ಅತ್ಯಾಚಾರ ಹಾಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು ವಿಕೃತಿ ಪಡೆದ ಘಟನೆಯನ್ನು ಖಂಡಿಸಿ ಶನಿವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಖಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

‘ಹೆಣ್ಣನ್ನು ದೇವತೆಯಂತೆ ಪೂಜಿಸಬೇಕೆಂದು ಹೇಳಿಕೊಡಲಾಗುತ್ತದೆ ಎಂದು ಎದೆ ತಟ್ಟಿಕೊಳ್ಳುವವರ ವಿಚಾರ ಕೇಂದ್ರವಾದ ಆರೆಸ್ಸೆಸ್ ರಾಜ್ಯ, ರಾಷ್ಟ್ರ ಮಟ್ಟದ ಬೈಠಕ್ ನಡೆಯುವ ಸ್ಥಳವೇ ಇದೀಗ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಸ್ಥಳವಾಗಿ ಮೂಡಿ ಬಂದಿದೆ. ಸಂಜೀವ ಮಠಂದೂರು ಪುತ್ತೂರಿನ ಶಾಸಕರಾದ ಮೇಲೆ ಇಲ್ಲಿ ಅಶಕ್ತರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ,  ‘ಆರೋಪಿಗಳು ಎಬಿವಿಪಿಯವರಲ್ಲ ಎಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ಜನ ನಂಬಲಾರರು. ಬೇರೆ ಕೋಮಿನವರಿಗೆ ಹಲ್ಲೆ , ಬಸ್‌ಗೆ ಕಲ್ಲು ಹೊಡೆದವರನ್ನು ನಮ್ಮವರು ಎನ್ನುತ್ತೀರಿ. ಈಗ ಮಾತ್ರ ನಿಮ್ಮವರಲ್ಲವೇ’ ಎಂದು ಛೇಡಿಸಿದರು. ‘ಶೋಭಾ ಕರಂದ್ಲಾಜೆಯವರೇ, ನಿಮ್ಮ ಸರ್ಕಾರ ರಾಜ್ಯದಲ್ಲಿದ್ದಾಗ ಸಚಿವರು, ಶಾಸಕರು ಮಾಡಿದ ಚುಂಬನ, ಆಲಿಂಗನ, ಶಯನ ಮುಂತಾದ ಕರ್ಮಕಾಂಡವೇ ಇಂದು ಯುವಜನರಿಗೆ ಕೆಟ್ಟ ಪ್ರೇರಣೆಯಾಗಿ ನಿಮ್ಮದೇ ಜಿಲ್ಲೆಯಲ್ಲಿ ಪ್ರತಿಧ್ವನಿಸುತ್ತಿದೆ’ ಎಂದು ಶೋಭಾ ಕರಂದ್ಲಾಜೆಗೆ ಬಿಜೆಪಿಯ ಇತಿಹಾಸವನ್ನು ನೆನಪಿಸುವ ಪ್ರಯತ್ನ ಪಟ್ಟರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪಕ್ಷದ ಮುಖಂಡರಾದ ಎಂ.ಬಿ. ವಿಶ್ವನಾಥ ರೈ, ಉಪ್ಪಿನಂಗಡಿ ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷ ಅಬ್ದುಲ್ಲಾ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಎ.ಕೆ. ಜಯರಾಮ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group