ರಾಜ್ಯ ಸುದ್ದಿ

‘ಯಾರೂ ರಾಜೀನಾಮೆ ನೀಡುವುದಿಲ್ಲ’; ಮೈತ್ರಿ ಸರಕಾರದ ಬಿಕ್ಕಟ್ಟಿನ ನಡುವೆ ಡಿ.ಕೆ. ಶಿವಕುಮಾರ್

ವರದಿಗಾರ (ಜುಲೈ.6): “ಯಾರೂ ರಾಜೀನಾಮೆ ನೀಡುವುದಿಲ್ಲ. ನಾನು ಶಾಸಕರನ್ನು ಭೇಟಿ ಮಾಡಲು ಬಂದಿದ್ದೇನೆ” ಎಂದು ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದು ಬಿಕ್ಕಟ್ಟಿನಲ್ಲಿರುವ ಮೈತ್ರಿ ಸರಕಾರದಲ್ಲಿ ಆಶಾವಾದವನ್ನು ತುಂಬಲು ಅವರು ಪ್ರಯತ್ನಿಸಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರ ಭೇಟಿಯಾದ ನಂತರ ಮೂವರು ಕಾಂಗ್ರೆಸ್ ಶಾಸಕರು ಅವರೊಂದಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

12 ಶಾಸಕರ ರಾಜೀನಾಮೆ ನಂತರ ಅತೃಪ್ತ ಶಾಸಕರ ಮನವೊಲಿಕೆಯ ಯತ್ನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಹೋಗುವವರನ್ನ ಹಿಡಿದುಕೊಳ್ಳಲು ಆಗುವುದಿಲ್ಲ. ಸಮಸ್ಯೆ ಇರಬಹುದು. ಆದ್ರೆ ಎಲ್ಲಾ ಸೆಟಲ್ ಆಗುತ್ತೆ. ರಾಜೀನಾಮೆಗೆ ಬೇಕಾದಷ್ಟು ಪ್ರೋಸಸ್ ಇದೆ. ನೋಡೋಣ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ‘ಯಾವ ಬಿಲ್ಡರ್‌ಗೆ ಕಾಲ್ ಮಾಡಿ ಎಷ್ಟೆಷ್ಟು ಹಣ ವಸೂಲಿ‌ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಕಾದು ನೋಡಿ’ ಎಂದೂ ಇದೇ ಸಂದರ್ಭ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ.

ಕರ್ನಾಟಕದ ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರ್ಕಾರದ 12 ಶಾಸಕರು (ಎಂಟು ಕಾಂಗ್ರೆಸ್ ಮತ್ತು ಮೂವರು ಜನತಾದಳದ ಜಾತ್ಯತೀತ ಶಾಸಕರು)ಶನಿವಾರ ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಕಚೇರಿಗೆ ಸಲ್ಲಿಸಿದ್ದಾರೆ. ಈ ಶಾಸಕರ ರಾಜೀನಾಮೆ ಅಂಗೀಕೃತಗೊಂಡರೆ ಮೈತ್ರಿ ಸರಕಾರ ಬಹುಮತವನ್ನು ಕಳೆದುಕೊಳ್ಳಲಿದೆ.

224 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 116 ಸ್ಥಾನಗಳನ್ನು ಹೊಂದಿದ್ದು, 113 ಬಹುಮತವಾಗಿದೆ. 14 ಶಾಸಕರು ತ್ಯಜಿಸಿದರೆ ಸರಕಾರ ಪತನಗೊಳ್ಳಲಿದೆ.

ಈ ಬಾರಿ ರಾಜೀನಾಮೆಯ ಬೆದರಿಕೆಯಲ್ಲಿ ವಿಶೇಷತೆಯಾಗಿ ಕಂಡಿರುವುದು ರಾಮಲಿಂಗ ರೆಡ್ಡಿಯೂ ರಾಜೀನಾಮೆಗಾಗಿ ಸ್ಪೀಕರ್ ರವರ ಬಾಗಿಲು ತಟ್ಟಿದ್ದು, ರಾಜೀನಾಮೆ ಬಗ್ಗೆ ಮಾತನಾಡುತ್ತಾ, “ನಾನು ನನ್ನ ರಾಜೀನಾಮೆಯನ್ನು ಸ್ಪೀಕರ್‌ಗೆ ಸಲ್ಲಿಸಲು ಬಂದಿದ್ದೇನೆ. ನನ್ನ ಮಗಳು (ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ) ಬಗ್ಗೆ ನನಗೆ ಗೊತ್ತಿಲ್ಲ, ಅವಳು ಸ್ವತಂತ್ರ ಮಹಿಳೆ” ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಪಕ್ಷದಲ್ಲಿ ಅಥವಾ ಹೈಕಮಾಂಡ್ನಲ್ಲಿ ಯಾರನ್ನೂ ದೂಷಿಸಲು ಹೋಗುವುದಿಲ್ಲ. ಕೆಲವು ವಿಷಯಗಳ ಬಗ್ಗೆ ನನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ನಾನು ಎಲ್ಲೋ ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group