
ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ
ವರದಿಗಾರ (ಜುಲೈ.6): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಕಾಲೇಜಿನ ದಲಿತ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ‘ಸಹಪಾಠಿಗಳು’ ಎಂಬ ಮುಖವಾಡ ಹೊತ್ತು ಸಾಮೂಹಿಕ ಅತ್ಯಾಚಾರಗೈದ ಅತ್ಯಾಚಾರಿಗಳು ಅದನ್ನು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಪಡೆದು ಬಂಧನಕ್ಕೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆಗಳು ಸಂಭವಿಸಿದರೂ ತನ್ನ ನಾಲಗೆ ಹರಿಯಬಿಡುವ, ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುವ, ವಿವಾದ ಸೃಷ್ಟಿಸುವ ಸಂಸದೆ ಶೋಭಾ ಕರಂದ್ಲಾಜೆಗೆ ಯುವತಿಯೊಬ್ಬಳು ಬಹಿರಂಗ ಸವಾಲ್ ಹಾಕಿದ್ದಾರೆ. ಈ ಸವಾಲಿಗೆ ಉತ್ತರಿಸುವಂತೆ ಯುವತಿ ಸಂಸದೆಯನ್ನು ಕೇಳಿಕೊಂಡಿದ್ದಾರೆ. ಪ್ರಸ್ತುತ ಯುವತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಾದ್ಯಂತ ಭಾರೀ ವೈರಲಾಗುತ್ತಿದೆ.
ಯುವತಿ ಹೇಳುವಂತೆ ‘ರಾಜ್ಯದ ಮಹಿಳಾ ಸಂಸದರಾದ ತಾವುಗಳು ಇಂದು ಬ್ಯುಸಿಯಾಗಿದ್ದೀರಿ ಎಂಬುವುದು ನಮಗೆ ತಿಳಿದಿದೆ. ಆದರೂ ಎಕೀ ಮಿನಿಟ್ ನಮ್ಮ ಮಾತುಗಳು ಕೇಳಬೇಕೆಂದು’ ಯುವತಿ ವಿನಂತಿಸಿಕೊಂಡಿದ್ದಾರೆ.
ಮಾತು ಮುಂದುವರಿಸುತ್ತಾ, “ನಿಮ್ಮ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಅದರಲ್ಲೂ ನಿಮ್ಮ ಎಬಿವಿಪಿ ಯ ಕಾರ್ಯಕರ್ತರು ಒಂದು ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ, ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಆ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾರೆ. ತಾವು ಸಂಸದರಾಗಿ, ಮಹಿಳೆಯಾಗಿ ಮತ್ತು ಬಿಜೆಪಿ ಪಕ್ಷದವರಾಗಿ, ನಿಮ್ಮ ಪಕ್ಷದವರಿಂದಲೇ ಆಗಿರುವ ಇಂತಹ ಕೃತ್ಯಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ? ಇದರ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ಮಾಡುತ್ತೀರಿ ಎಂಬುವುದನ್ನು ನೀವು ನಮ್ಮ ಕರ್ನಾಟಕದ ಜನತೆಗೆ ಮತ್ತು ಅತೀ ಮುಖ್ಯಮುಖ್ಯವಾಗಿ ನಮ್ಮಂತಹ ಹೆಣ್ಣು ಮಕ್ಕಳಿಗೆ ಹೇಳಬೇಕಾಗಿ ನಾನು ನಿಮ್ಮೊಂದಿಗೆ ಕೇಳುತ್ತಿದ್ದೇನೆ”.
ಯುವತಿಯು ಶೋಭಾ ಕರಂದ್ಲಾಜೆ ಮಾಡಿರುವ ಬಹಿರಂಗ ಸವಾಲ್ ನ ವೀಡಿಯೋ ವೀಕ್ಷಿಸಿ
“ನಿಮ್ಮ ಬಿಜೆಪಿ ಪಕ್ಷದಿಂದ ಹೆಣ್ಣು ಮಕ್ಕಳಿಗೆ ಆಗುತ್ತಿರುವಂತಹ ದೌರ್ಜನ್ಯ ಇದು ಮೊದಲೇನಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರಾದರೊಬ್ಬರು ಹಿಂದೂ ಕಾರ್ಯಕರ್ತರು ಅಥವಾ ಹಿಂದೂ ಹೇಗಾದರೂ ವಿವಿಧ ಕಾರಣಗಳಿಂದ ಸತ್ತರೆ, ಅವರ ಹೆಣವನ್ನು ಮುಂದಿಟ್ಟುಕೊಂಡು ತಾವು ರಾಜಕೀಯವನ್ನು ಮಾಡಿರುವುದನ್ನು ನಾವು ನೋಡಿದ್ದೀವಿ. ಹಾಗಾಗಿ ಇವತ್ತು ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಅನ್ಯಾಯವಾಗಿರುವುದಲ್ಲದೆ ಸಾಮಾಜಿಕ ತಾಲತಾಣಗಳಲ್ಲಿ ಹರಿಬಿಟ್ಟು ಆಕೆಯ ಮಾನ ಮರ್ಯಾದೆಯನ್ನು ಮತ್ತಷ್ಟು ಹಾಳು ಮಾಡಲಾಗಿದೆ. ಅದು ನಿಮ್ಮ ಎಬಿವಿಪಿ ಕಾರ್ಯಕರ್ತರಿಂದಲೇ. ಹಾಗಾಗಿ ಇದರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂಬುವುದು ನಮಗೆ ಗೊತ್ತಾಗಬೇಕಾಗಿದೆ. ದಯವಿಟ್ಟು ತಿಳಿಸಿಕೊಡಿ” ಎಂದು ಯುವತಿ ತನ್ನ ವೀಡಿಯೋದಲ್ಲಿ ಶೋಭಾ ಕರಂದ್ಲಾಜೆಯೊಂದಿಗೆ ಕೇಳಿಕೊಂಡಿದ್ದಾರೆ.
“ನಿಮ್ಮ ರಾಜಕೀಯವನ್ನು ಬಿಟ್ಟು ಒಂದು ಹೆಣ್ಣಿನ ಮೇಲೆ ಅನ್ಯಾಯವಾದರೆ ಅದರ ವಿರುದ್ಧ ನೀವು ಯಾವ ರೀತಿ ದನಿ ಎತ್ತುತ್ತೀರಿ ಎಂಬುವುದು ನಮಗೆ ಗೊತ್ತಾಗಬೇಕಾಗಿದೆ. ದಯವಿಟ್ಟು ತಿಳಿಸಿಕೊಡಿ” ಎಂದು ಯುವತಿಯು ಸವಾಲ್ ಎಸೆದಿದ್ದಾಳೆ.
ಘಟನೆಗೆ ಬಯಲಿಗೆ ಬಂದು ನಾಲ್ಕು ದಿನವಾದರೂ ತುಟಿ ಬಿಚ್ಚದ ಸಂಸದೆ ಶೋಭಾ ಕರಂದ್ಲಾಜೆ, ಈ ಯುವತಿಯ ನ್ಯಾಯಯುತ ಸವಾಲಿಗೆ ಉತ್ತರಿಸುತ್ತಾರ ಎಂಬುವುದು ಎಲ್ಲರ ಮುಂದಿರುವ ಪ್ರಶ್ನೆ.
