ಸುತ್ತ-ಮುತ್ತ

ಸಬಲ ಜಮಾಅತ್‍ಗಾಗಿ ಮಾದರಿ ಮಸೀದಿ ಕಾರ್ಯಕ್ರಮ

ವರದಿಗಾರ (ಜುಲೈ.6): ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್ ದ.ಕ ಜಿಲ್ಲೆ ಇದರ ವತಿಯಿಂದ “ಮಸ್ಜಿದ್ ಒನ್ ಮೂವ್‍ಮೆಂಟ್”ನ ಅಂಗವಾಗಿ ಶುಕ್ರವಾರ “ಸಬಲ ಜಮಾಅತ್‍ಗಾಗಿ ಮಾದರಿ ಮಸೀದಿ” ಕಾರ್ಯಕ್ರಮವು ಬದ್ರುಲ್ ಹುದಾ ಜುಮಾ ಮಸೀದಿ ಕಾಂಜಿಳಕೋಡಿ (ಅಡ್ಡೂರು) ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ದಾರಿಮಿಯವರು ದುವಾ ಆಶೀರ್ವಚನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸೀದಿಯ ಅಧ್ಯಕ್ಷರಾದ ಎಮ್.ಎ.ಅಹ್ಮದ್ ಬಾವ ಕಾರ್ಯಗಾರವನ್ನುದ್ದೇಶಿಸಿ ಮಾತನಾಡುತ್ತಾ, ಮುಸ್ಲಿಮರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಾ ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯು ಬಹಳ ಚಿಂತಾಜನಕವಾಗಿದ್ದು, ಅವರು ಎಲ್ಲಾ ಸ್ತರಗಳಲ್ಲಿಯೂ ಹಿಂದುಳಿದಿದ್ದಾರೆ, ಹಾಗಾಗಿ ನಮ್ಮ ಜಮಾಅತನ್ನು ಸಂಪೂರ್ಣ ಸಬಲ ಜಮಾಅತನ್ನಾಗಿ ರೂಪಿಸುವುದೇ ಈ ಕಾರ್ಯಕ್ರಮದ ಗುರಿಯಾಗಿದೆ . ನಮ್ಮ ಜಮಾಅತ್ ನ ಸರ್ವೆಯು ಬಹುತೇಕ ಮುಗಿದಿದ್ದು,ಇದರಲ್ಲಿ ನಮಗೆ ಹಲವು ಸಮಸ್ಯೆಗಳನ್ನು ಕಾಣಲು ಸಾಧ್ಯವಾಯಿತು. ಈ ಎಲ್ಲಾ ಸಮಸ್ಯೆಗಳನ್ನು ಮಸ್ಜಿದ್ ಒನ್ ಮೂವ್ಮೆಂಟ್ ನ ಯೋಜನೆಯನ್ನು ಕಾರ್ಯಗತಗೊಳಿಸುವ ಮೂಲಕ ಪರಿಹರಿಸೋಣ ಎಂದರು. \ ನಾವೆಲ್ಲರೂ ಸೇರಿ ನಮ್ಮ ಜಮಾಅತ್ನ ಮಹತ್ತರ ಬದಲಾವಣೆಗೋಸ್ಕರ ಈ ಕೆಳಕಂಡ ಘೋಷಣೆಯನ್ನು ಮಾಡುತ್ತಿದ್ದೇವೆ.

1.ಮುಂದಿನ ಹತ್ತು ವರುಷಗಳಲ್ಲಿಸುಮಾರು 5000 ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

2.ಜಮಾಅತಿನ ವಿದ್ಯಾರ್ಥಿಗಳನ್ನ ಐ.ಪಿ.ಎಸ್. ಐ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಮರೀಕ್ಷೆಗಳಿಗೆ ತಯಾರು ಗೊಳಿಸುವುದು.

3.100% ಸಾಕ್ಷರತೆ ಜಮಾಅತ್‍ಗಾಗಿ ಸರ್ವ ಪ್ರಯತ್ನ ಮಾಡುವುದು.

4.ಸ್ವಚ್ಚತಾ ಕಾರ್ಯಕ್ರಮವನ್ನ ಕೈಗೊಳ್ಳುವುದು.

5.ಮುಂದಿನ ಹತ್ತು ವರ್ಷಗಳಲ್ಲಿ ಸುಮಾರು 100 ವೃತ್ತಿನಿರತ ವ್ಯಕ್ತಿಗಳನ್ನ ತಯಾರು ಮಾಡುವುದು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಮಸ್ಜಿದ್ ಒನ್ ಮೂವ್‍ಮೆಂಟ್‍ನ ತುಪೈಲ್ ಮಹಮ್ಮದ್.ಕೆ ರವರು, ‘ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಸಾಪ್ಟ್‍ವೇರ್ ಟೆಕ್ನಾಲಜಿ ಮೂಲಕ ಒಂದೇ ವೇದಿಕೆಯಡಿ ತಂದು ಮಸೀದಿಯನ್ನು ಮುಸ್ಲಿಮರ ಅಭಿವೃದ್ಧಿಯ ಕೇಂದ್ರವನ್ನಾಗಿಸುವುದೇ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್- ಮಸ್ಜಿದ್ ಒನ್ ಮೂವ್‍ಮೆಂಟ್ ಇದರ ಉದ್ದೇಶವಾಗಿದೆ ಎಂದರು. ಸದ್ರಿ ಕಾರ್ಯಕ್ರಮಗಳನ್ನು ಮಸೀದಿಗಳಲ್ಲಿ ಯಾವ ರೀತಿಯಾಗಿ ಕಾರ್ಯಗತಗೊಳಿಸುವುದು ಮತ್ತು ಪ್ರಾಯೋಗಿಕವಾಗಿ ಹೇಗೆ ನಡೆಸಬಹುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಸಸಿ ನೆಡುವ ಮತ್ತು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಮಸೀದಿಯ ಗೌರವ ಅಧ್ಯಕ್ಷರಾದ ಎಮ್.ಎಚ್. ಮುಹಿಯುದ್ದೀನ್ ಮತ್ತು ಉಪಾಧ್ಯಕ್ಷರಾದ ಎ.ಕೆ ರಿಯಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಮ್ರಾನ್ ಅಡ್ಡೂರ್‍ ನಿರೂಪಿಸಿ, ವಂದಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group