ರಾಷ್ಟ್ರೀಯ ಸುದ್ದಿ

“ಜೈ ಶ್ರೀರಾಮ್” ಹೇಳುವಂತೆ ಒತ್ತಾಯಿಸಿ ಭಾರತದಲ್ಲಿ ಜನರನ್ನು ಹತ್ಯೆಗೈಯ್ಯಲಾಗುತ್ತಿದೆ: ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ

ವಿಶ್ವದಲ್ಲಿ ಭಾರತವನ್ನು ಅವಮಾನಕ್ಕೊಳಪಡಿಸಿದ ಹಿಂದುತ್ವ ಭಯೋತ್ಪಾದಕರ ಕೃತ್ಯ

ವರದಿಗಾರ (ಜುಲೈ.05): ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ “ಜೈ ಶ್ರೀರಾಮ್” ಹೇಳುವಂತೆ ಒತ್ತಾಯಿಸಿ ಹಿಂದುತ್ವ ಭಯೋತ್ಪಾದಕರಿಂದ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆ ಮತ್ತು ಧ್ವೇಷದಿಂದ ನಡೆಯುತ್ತಿರುವ ಪ್ರಕರಣಗಳ ಕುರಿತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಜುಲೈ 1ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದು, ಈ ಭೀಕರ ಕೃತ್ಯದಿಂದ ವಿಶ್ವದಲ್ಲಿ ಭಾರತ ಅವಮಾನಕ್ಕೊಳಗಾಗಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಇತ್ತೀಚೆಗೆ ಭೀಭತ್ಸವಾಗಿ ಹತ್ಯೆಗೊಳಗಾದ 24ರ ಹರೆಯದ ಜರ್ಖಾಂಡಿನ ತಬ್ರೇಝ್ ಅನ್ಸಾರಿ ಮತ್ತು ಕೋಲ್ಕತಾದ ಮದರಸ ಶಿಕ್ಷಕನ ಹತ್ಯೆಯ ಕುರಿತು ಪ್ರಸ್ತಾಪ ಮಾಡಲಾಗಿದೆ. ಅನ್ಸಾರಿಯನ್ನು ಹಿಂದೂ ಮೂಲಭೂತವಾದಿಗಳು ಜಾರ್ಖಂಡ್‌ನ ಕರ್ಸವಾನ್ ಜಿಲ್ಲೆಯ ದಡ್‌ಕಿಡಿ ಗ್ರಾಮದಲ್ಲಿ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿದ್ದರೆ ಕೋಲ್ಕತಾದಲ್ಲಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮದರಸ ಶಿಕ್ಷಕ ಜೈಶ್ರೀರಾಮ್ ಹೇಳದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂದು ಸಭೆಯಲ್ಲಿ ಹೇಳಲಾಗಿದೆ.

ವೀಡಿಯೋ ವೀಕ್ಷಿಸಿ:

ಸರಕಾರೇತರ ಸಂಸ್ಥೆ ಸೆಂಟರ್ ಆಫ್ ಆಫ್ರಿಕ ಡೆವಲಪ್‌ಮೆಂಟ್ ಆಯಂಡ್ ಪ್ರೋಗ್ರೆಸ್ ಆಫ್ ಸೌತ್ ಆಫ್ರಿಕದ ಪ್ರತಿನಿಧಿ ಪೌಲ್ ನ್ಯೂಮನ್ ಕುಮಾರ್ ಸ್ಟನಿಲ್ಕವಸ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ನಡೆದ 41ನೇ ಸಾಮಾನ್ಯ ಅಧಿವೇಶನದ 17ನೇ ಸಭೆಯಲ್ಲಿ ಅವರು ಈ ಮಾತುಗಳನ್ನು ಉಲ್ಲೇಖಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ವಿರುದ್ಧದ ಧ್ವೇಷಾಪರಾಧಗಳಲ್ಲಿ ಗಮನಾರ್ಹ ಏರಿಕೆಯಾಗಿದೆ. ಮುಸ್ಲಿಮರು ತಮ್ಮ ಸಮುದಾಯದ ವಿರುದ್ಧ ದ್ವೇಷಾಪರಾಧ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದಾರೆ ಎಂದು ಅವರು ಸಭೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಹಿಂಸಾ ಪ್ರವೃತ್ತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ದಾಳಿಗಳಿಂದ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವ ಹೆಚ್ಚಾಗಿದೆ ಮತ್ತು ಧಾರ್ಮಿಕ ಉದ್ವಿಗ್ನತೆಗೆ ಕಾರಣವಾಗಿದೆ. ಇದರಲ್ಲಿ ಇತ್ತೀಚಿನ ಬೆಳವಣಿಗೆಯೇ ಮುಸ್ಲಿಮರು ಜೈಶ್ರೀರಾಮ್ ಎಂದು ಹೇಳಲು ಒತ್ತಾಯಪಡಿಸುವುದಾಗಿದೆ ಎಂದು ಅವರು ವಿಶ್ವಸಂಸ್ಥೆಯಲ್ಲಿ ಹೇಳಿರುವುದು ದೇಶದಲ್ಲಿರುವ ಅಸಹಿಷ್ಣುತೆ, ಅಧರ್ಮ, ಅನೀತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯಿಂದ ಭಾರತವು ವಿಶ್ವದ ಮುಂದೆ ತಲೆತಗ್ಗಿಸುವಂತಾಗಿದೆ.

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group