ರಾಷ್ಟ್ರೀಯ ಸುದ್ದಿ

ಸಂಸದೆಯ ಭಾಷಣವನ್ನು ಕೃತಿಚೌರ್ಯವೆಂದು ಆರೋಪಿಸಿ ಮತ್ತೊಮ್ಮೆ ಮುಖಭಂಗಕ್ಕೊಳಗಾದ ಝೀ ಟಿವಿಯ ಸುಧೀರ್ ಚೌಧರಿ!

• ಈ ಹಿಂದೆ 2000ದ ನೋಟಿನಲ್ಲಿ ಜಿಪಿಎಸ್ ನ್ಯಾನೋ ಚಿಪ್ ಇದೆಯೆಂದು ಹೇಳಿದ್ದನು!

• ಡಿಎನ್’ಎ ಎಂಬ ಕಾರ್ಯಕ್ರಮದಲ್ಲಿ ತನ್ನದೇ ಡಿಎನ್’ಎ ಬಹಿರಂಗಗೊಳಿಸಿದ ‘ಸೋ ಕಾಲ್ಡ್ ಜರ್ನಲಿಸ್ಟ್’

ವರದಿಗಾರ(04-07-2019) : ಸಂಸತ್ ಸದನದಲ್ಲಿ ತನ್ನ ಚೊಚ್ಚಲ ಭಾಷಣದಲ್ಲಿ ಫ್ಯಾಶಿಸಂ ವಿರುದ್ಧ ಕಿಡಿಕಾರಿ ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರ ದೇಶದಾದ್ಯಂತ ಜಾತ್ಯತೀತವಾದಿಗಳ ಮನಗೆದ್ದಿದ್ದರು.

https://youtu.be/dnh-mpg_oF4

ಅದೇ ಕಾರಣಕ್ಕಾಗಿ ಬಿಜೆಪಿಯ ಟ್ರೋಲ್ ಆರ್ಮಿ ಹಾಗೂ ಬಿಜೆಪಿ ಪರ ವಾಲಿರುವ ಮಾಧ್ಯಮಗಳ ಕೆಂಗಣ್ಣಿಗೂ ಗುರಿಯಾಗಿದ್ದರು.

ಅವರನ್ನು ಟೀಕಿಸುವ ಭರದಲ್ಲಿ ಇಲ್ಲೊಬ್ಬ ‘ಸೋ ಕಾಲ್ಡ್ ಜರ್ನಲಿಸ್ಟ್’ ತನ್ನ ಚಾನೆಲಿನ ಡಿಎನ್’ಎ ಎಂಬ ಕಾರ್ಯಕ್ರಮದಲ್ಲಿ ತಾನು ನಡೆಸಿದ ‘ಅಧ್ಯಯನ’ದ ಬಗ್ಗೆ ವಿವರಿಸಿದ್ದಾನೆ. ಆತನ ಪ್ರಕಾರ, ಮಹುವಾ ಮೊಯಿತ್ರ ತನ್ನ ಭಾಷಣ ಅಮೇರಿಕಾದ ವೆಬ್ಸೈಟ್ ‘ವಾಷಿಂಗ್ಟನ್ ಮಂತ್ಲೀ’ ಯಲ್ಲಿ ಲೇಖಕ ಮಾರ್ಟಿನ್ ಲಾಂಗ್ಮಾನ್ ಅವರ ಲೇಖನದ ಕೆಲವು ಅಂಶಗಳನ್ನು ಮೂಲವನ್ನುಲ್ಲೇಖಿಸದೆ ಉಪಯೋಗಿಸಿದ್ದಾರಂತೆ! ಇದಕ್ಕೆ ಸಾಕ್ಷಿಯಾಗಿ ಅವರ ಭಾಷಣದ ತುಣುಕು ಹಾಗೂ ವಾಷಿಂಗ್ಟನ್ ಮಂತ್ಲೀ ಲೇಖನದವನ್ನೂ ತನ್ನ ಕಾರ್ಯಕ್ರಮದಲ್ಲಿ ಸುಧೀರ್ ಚೌಧರಿ ತೋರಿಸಿದ್ದನು.

ನಡೆದದ್ದೇನು:
ಮಹುವಾ ಮೋಯಿತ್ರ ಸಂಸತ್’ನ ತನ್ನ ಚೊಚ್ಚಲ ಭಾಷಣದಲ್ಲಿ ದೇಶದ ಪ್ರಸಕ್ತ ಸನ್ನಿವೇಶದ ಕುರಿತು ಕಳವಳಿ ವ್ಯಕ್ತಪಡಿಸುತ್ತಾ, ದೇಶದಲ್ಲಿ ಫ್ಯಾಶಿಸಂ ನ ಆರಂಭಿಕ ಲಕ್ಷಣಗಳು ಕಾಣಿಸುತ್ತಿವೆ ಎಂದಿದ್ದರು. ಇದಕ್ಕೆ ಪೂರಕವಾಗಿ ಅಮೇರಿಕಾದ ಹೋಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ನಲ್ಲಿದ್ದ ಸೂಚನಾ ಫಲಕದಲ್ಲಿ ನಮೂದಿಸಲಾಗಿದ್ದ ಫ್ಯಾಶಿಸಂ ನ ಆರಂಭಿಕ 14 ಲಕ್ಷಣಗಳಲ್ಲಿ 7 ಲಕ್ಷಣಗಳು ಭಾರತದ ಪ್ರಸಕ್ತ ಸನ್ನಿವೇಶಕ್ಕೆ ಅನ್ವಯವಾಗುತ್ತಿವೆ ಎಂದು, 7 ಲಕ್ಷಣಗಳನ್ನು ವಿವರಿಸಿದ್ದರು. ಇಲ್ಲಿ ಅವರು ಮಾಹಿತಿಯ ಮೂಲವನ್ನೂ ತಿಳಿಸಿದ್ದರು.

ಸುಧೀರ್ ಚೌಧರಿ ಹೇಳಿದಂತೆ, ವಾಷಿಂಗ್ಟನ್ ಮಂತ್ಲೀಯಲ್ಲಿ ಲೇಖಕ ಮಾರ್ಟಿನ್ ಲಾಂಗ್ಮಾನ್ ಅಮೇರಿಕಾದ ಅಧ್ಯಕ್ಷ ಟ್ರಂಪ್ ಕುರಿತು ತನ್ನ ವಿಮರ್ಷೆಯಲ್ಲಿ, ಇದೇ 14 ಲಕ್ಷಣಗಳಿಂದ 12 ಲಕ್ಷಣಗಳ ಬಗ್ಗೆ ವಿವರಿಸಿದ್ದರು. ಅಲ್ಲಿ ಲೇಖಕರೂ ಮಾಹಿತಿಯ ಮೂಲವನ್ನು ನಮೂದಿಸಿದ್ದರು.

ಆದರೆ, ತನ್ನ ವೀಕ್ಷಕರಿಗೆ ತಪ್ಪು ಮಾಹಿತಿ ನೀಡುವುದಕ್ಕಾಗಿಯೇ ಕುಪ್ರಸಿದ್ಧನಾಗಿರುವ ಝೀ ನ್ಯೂಸ್ ಎಡಿಟರ್, ತನ್ನ ಕಾರ್ಯಕ್ರಮದಲ್ಲಿ ತನ್ನ ಮೂಗಿನ ನೇರಕ್ಕೆ ವರದಿ ಮಾಡಿದನು.

ಇದನ್ನರಿತ, ಅಮೇರಿಕಾದ ಲೇಖಕ ಮಾರ್ಟಿನ್ ಲಾಂಗ್ಮಾನ್, ತನ್ನ ಟ್ವೀಟ್ ನಲ್ಲಿ ಈ ಬಗ್ಗೆ ಬರೆಯುತ್ತಾ, ಬಲಪಂಥೀಯರು ಎಲ್ಲಾ ದೇಶಗಳಲ್ಲೂ ಒಂದೇ ಥರಾ ಎಂದು ವ್ಯಂಗ್ಯವಾಡಿದರು. ಮಹುವಾ ಮೋಯಿತ್ರ ಮೇಲೆ ಕೃತಿಚೌರ್ಯದ ಆರೋಪ ತಪ್ಪು ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಸುಧೀರ್ ಚೌಧರಿ, ಈ ಹಿಂದೆ ನೋಟು ರದ್ಧತಿಯ ಸಂದರ್ಭದಲ್ಲಿ ಎರಡು ಸಾವಿರ ರೂಪಾಯಿಯ ಹೊಸ ನೋಟು ಜಿಪಿಎಸ್ ನ್ಯಾನೋ ಚಿಪ್ ಹೊಂದಿದೆ ಎಂದು ತನ್ನ ಡಿಎನ್’ಎ ಕಾರ್ಯಕ್ರಮದಲ್ಲಿ ಹೇಳಿ ನಗೆಪಾಟಲಿಗೀಡಾಗಿದ್ದನು.

ಒಟ್ಟಿನಲ್ಲಿ ಇದೀಗ ಸಂಸದೆ ಮಹುವಾ ಮೊಯಿತ್ರಾ ಝೀಟಿವಿ ಹಾಗೂ ಅದರ ಎಡಿಟರ್ ಸುಧೀರ್ ಚೌಧರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group