ರಾಷ್ಟ್ರೀಯ ಸುದ್ದಿ

ಯಾರ ಮಗನಾದರೂ ಸರಿ, ಪಕ್ಷದಿಂದಲೇ ಉಚ್ಛಾಟಿಸಿ: ಮೌನ ಮುರಿದ ಪ್ರಧಾನಿ

‘ಬ್ಯಾಟ್ ನಿಂದ ಅಧಿಕಾರಿಗೆ ಹಲ್ಲೆಗೈದಿದ್ದ ಬಿಜೆಪಿ ಶಾಸಕ’

 ವರದಿಗಾರ (ಜೂನ್.2): ಕಳೆದ ವಾರ ಮುನ್ಸಿಪಾಲ್ ಅಧಿಕಾರಿಯೊಬ್ಬರೊಂದಿಗೆ ದರ್ಪದೊಂದಿಗೆ ವರ್ತಿಸಿ ಕ್ರಿಕೆಟ್ ಬ್ಯಾಟ್ ನಿಂದ ಸಾರ್ವಜನಿಕವಾಗಿ ಥಳಿಸಿದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಅವರ ಪುತ್ರ ಹಾಗೂ ಇಂದೋರ್ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯು ಕೊನೆಗೂ ಮೌನ ಮುರಿದಿದ್ದು, ಇಂತಹವರನ್ನು ಪಕ್ಷದಿಂದಲೇ ಉಚ್ಚಾಟಿಸುವಂತೆ ಕರೆ ನೀಡಿದ್ದಾರೆ ಎಂಬ ಅಂಶಗಳು ಬಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯು, ‘ಯಾರ ಮಗನಾದರೂ ಸರಿ ಯಾವುದೇ ವಿನಾಯಿತಿಯಿಲ್ಲದ ಪಕ್ಷದಿಂದ ಉಚ್ಛಾಟಿಸಬೇಕೆಂದು’ ಬಿಜೆಪಿ ಸಂಸದೀಯ ಪಕ್ಷದ ಸಭೆಯೊಂದರಲ್ಲಿ ಹೇಳಿದ್ದಾರೆಂದು ಪಕ್ಷದ ಕೆಲ ನಾಯಕರು ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

”ಪ್ರಧಾನಿ ಬಹಳಷ್ಟು ಅಸಮಾಧಾನಗೊಂಡಿದ್ದರು. ಯಾರಿಗೂ ದುರ್ವರ್ತನೆ ತೋರಲು ಅಥವಾ ಸಾರ್ವಜನಿಕವಾಗಿ ಅಹಂಕಾರ ತೋರ್ಪಡಿಸುವ ಅಧಿಕಾರವಿಲ್ಲ. ಅವರು ಘಟನೆಯನ್ನು ಬಲವಾಗಿ ಖಂಡಿಸಿ ಇಂತಹ ಕೃತ್ಯಗಳನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದರು” ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಬಿಜೆಪಿ ಸಂಸದೀಯ ಪಕ್ಷದ ಸಭೆಯ ನಂತರ ಹೇಳಿರುವುದಾಗಿ ವರದಿ ಹೇಳಿವೆ.

ಆಕಾಶ್ ವಿಜಯ್‍ವರ್ಗಿಯಾ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದವರನ್ನೂ ಪಕ್ಷದಿಂದ ಉಚ್ಛಾಟಿಸಬೇಕೆಂದು ಪ್ರಧಾನಿ ಹೇಳಿದರೆಂದು ಮೂಲಗಳು ತಿಳಿಸಿವೆ. ಅಧಿಕಾರಿಗೆ ಹಲ್ಲೆಗೈದು ಬಂಧನಕ್ಕೊಳಗಾಗಿದ್ದ ಆಕಾಶ್ ವಿಜಯ್‍ವರ್ಗಿಯಾ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಅಧಿಕಾರಿಗೆ ಬ್ಯಾಟ್ ನಿಂದ ಹಲ್ಲೆ ಮಾಡುವ ವೀಡಿಯೋ ವೀಕ್ಷಿಸಿ:

 

 

 

 

 

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group