ರಾಷ್ಟ್ರೀಯ ಸುದ್ದಿ

ಗುಂಪು ಹಿಂಸಾ ಹತ್ಯೆ ವಿರುದ್ಧ  ಎಚ್ಚೆತ್ತ ಜನತೆ; ಕಾನೂನು ಜಾರಿಗೆ ಆಗ್ರಹಿಸಿ ಮಾಲೆಗಾಂವ್ ನಲ್ಲಿ 1 ಲಕ್ಷ ಜನರಿಂದ ಪ್ರತಿಭಟನೆ

‘ಸಂವಿಧಾನದ ರಕ್ಷಣೆಗೆ ಈ ಪ್ರತಿಭಟನೆ ನಡೆಸಲಾಗಿದೆ’

ವರದಿಗಾರ (ಜೂನ್.2): ಕೊನೆಗೂ ಭೀಕರ ಮತ್ತು ಅತ್ಯಂತ ಕ್ರೂರವಾದ ಗುಂಪಿನಿಂದ ಹತ್ಯೆಗೈಯ್ಯುವ ಅಮಾನವೀಯ ಕೃತ್ಯದ ವಿರುದ್ಧ ಜನತೆ ಎಚ್ಚೆತ್ತುಕೊಂಡಿದ್ದು, ಗುಂಪು ಹಿಂಸಾ ಹತ್ಯೆಯ ವಿರುದ್ಧ ಕಾನೂನು ಜಾರಿಗೆ ಒತ್ತಾಯಿಸಿ ಮಾಲೆಗಾಂವ್ ನ ಹುತಾತ್ಮರ ಸ್ಮಾರಕ (ಶಹೀದೋಂ ಕಿ ಯಾದ್‍ ಗಾರ್- ಸರಿಯಾಗಿ 97 ವರ್ಷಗಳ ಹಿಂದೆ ಬ್ರಿಟಿಷರು ಏಳು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಸ್ಥಳ ಈ ಸ್ಮಾರಕವಾಗಿದೆ)ದ  ಸಮೀಪ ಹಮ್ಮಿಕೊಂಡಿದ್ದ ಪತ್ರಿಭಟನೆಯನೆಯಲ್ಲಿ ಮುಸ್ಲಿಮರು ಸೇರಿದಂತೆ ಕನಿಷ್ಠ 1 ಲಕ್ಷ ಜನರು ಭಾಗವಹಿಸಿದ್ದರು ಎಂದು ಮೂಲಗಳು ವರದಿ ಮಾಡಿವೆ.

ಗುಂಪು ಹಿಂಸೆಯಿಂದ ಹತ್ಯೆ ಮಾಡುವ ಅಮಾನವೀಯ ಕೃತ್ಯದ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಮುಸ್ಲಿಮ್ ಸಮುದಾಯ ಆಯೋಜಿಸಿದ ಮೊದಲ ಪ್ರತಿಭಟನೆ ಇದೆಂದು ಹೇಳಲಾಗುತ್ತಿದ್ದು, ಜಾರ್ಖಂಡ್ ನಲ್ಲಿ 24 ವರ್ಷದ ತಬ್ರೇಝ್ ಅನ್ಸಾರಿಯನ್ನು ದುಷ್ಕರ್ಮಿಗಳು ‘ಜೈ ಶ್ರೀರಾಮ್ ಹಾಗೂ ಜೈ ಹನುಮಾನ್’ ಹೇಳುವಂತೆ ಒತ್ತಾಯಿಸಿ ಗುಂಪು ಥಳಿತ ಹಾಗೂ ಹತ್ಯೆ ಘಟನೆಯೇ ಈ ಪ್ರತಿಭಟನೆಗೆ ನಾಂದಿಯಾಯಿತು ಎಂದು ಸಂಘಟನಾ ಸಂಸ್ಥೆ ಜಮೀಯತ್ ಉಲಮಾ ಹೇಳಿಕೊಂಡಿದೆ.

‘ಸಂವಿಧಾನದ ರಕ್ಷಣೆಗೆ ಈ ಪ್ರತಿಭಟನೆ ನಡೆಸಲಾಗಿದೆ, ನಮಗೆ ದ್ವೇಷ ಸಾಧಿಸುವುದು ಬೇಕಿಲ್ಲ. ಹಿಂಸೆಯಲ್ಲೂ ನಮಗೆ ನಂಬಿಕೆಯಿಲ್ಲ. ಕಾನೂನಿನ ಮೇಲೆ ನಂಬಿಕೆಯಿದೆ” ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಮಾಲೆಗಾಂವ್ ಫೋರ್ಟ್ ಪ್ರದೇಶದಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರು ನಂತರ ಹುತಾತ್ಮರ ಸ್ಮಾರಕದತ್ತ ನಡೆದರು. ‘ಮುಸ್ಲಿಮರು ದೌರ್ಜನ್ಯವನ್ನು ಹೆಚ್ಚು ಕಾಲ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ಇಡೀ ದೇಶಕ್ಕೆ ಹೇಳಲು ಈ ಐತಿಹಾಸಿಕ ರ್ಯಾಲಿ ಸಾಕು. ಗುಂಪು ಥಳಿತ ಒಂದು ಸಂಘಟಿತ ಕೊಲೆ ಹಾಗೂ ಅದನ್ನು ಯೋಜನಾಬದ್ಧವಾಗಿ ನಡೆಸಲಾಗುತ್ತಿದೆ. ಇಂದು ಎಲ್ಲಾ ನಾಗರಿಕರೂ ಇಂತಹ ಘಟನೆಗಳಿಗೆ ಅಂತ್ಯ ಹಾಡುವ ಜವಾಬ್ದಾರಿ ಹೊಂದಿದ್ದಾರೆ. ಸೀತೆಯ ಈ ಪಾವನ ಭೂಮಿಯಲ್ಲಿ ನಾವು ರಾವಣನ ಹೆಜ್ಜೆಯ ಸದ್ದು ಕೇಳುತ್ತಿದ್ದೇವೆ. ಇದನ್ನು ನಿಲ್ಲಿಸುವುದು ನಮ್ಮ ಸಂಘಟಿತ ಜವಾಬ್ದಾರಿ” ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನ ರಹ್ಮಾನಿ ಹೇಳಿದರು.

ರಾಷ್ಟ್ರಪತಿಗಳು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತಗಳಿಗೆ ಪತ್ರ ಬರೆದು ಗುಂಪು ಥಳಿತ ಘಟನೆಗಳ ಕುರಿತಂತೆ ಅವರ ಸಂವಿಧಾನಿಕ ಕರ್ತವ್ಯಗಳನ್ನು ನೆನಪಿಸಬೇಕು ಹಾಗೂ ಸರಕಾರ ಗುಂಪು ಥಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಿದ ಪತ್ರದಲ್ಲಿ ಆಗ್ರಹಿಸಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group