Uncategorized

ಜೈ ಶ್ರೀರಾಮ್ ಹೆಸರಿನಲ್ಲಿ ಹತ್ಯೆಗೈಯ್ಯುವ ಮೂಲಕ ಮುಸಲ್ಮಾನರ ಸಹನೆಯನ್ನು ಪರೀಕ್ಷಿಸದಿರಿ: ಸಂಘಪರಿವಾರಕ್ಕೆ ಇಲ್ಯಾಸ್ ತುಂಬೆ ಎಚ್ಚರಿಕೆ

‘ಇಂತಹ ಹತ್ಯೆಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ’

ವರದಿಗಾರ (ಜೂನ್.1): ಜೈ ಶ್ರೀರಾಮ್ ಹೆಸರಿನಲ್ಲಿ ಹಾಗೂ ಗುಂಪು ಹತ್ಯೆಯ ಮೂಲಕ ಮುಸಲ್ಮಾನರ ಸಹನೆಯನ್ನು ಪರೀಕ್ಷಿಸದಿರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಸಂಘಪರಿವಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ಎಸ್.ಡಿ.ಪಿ.ಐ ಯು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಗುಂಡ್ಲುಪೇಟೆಯ ದಲಿತ ಯುವಕ ಪ್ರತಾಪ್ ಮೇಲಿನ ಅಮಾನವೀಯ ಕೃತ್ಯ, ಹೊನ್ನಳ್ಳಿಯ ದಯಾನಾತ್ ಖಾನ್ ನ ಗುಂಪು ಹತ್ಯೆ, ಜಾರ್ಖಂಡಿನ ತಬ್ರೇಝ್ ಅನ್ಸಾರಿಯ ಗುಂಪು ಹತ್ಯೆಯನ್ನು ಖಂಡಿಸಿ ಹಾಗೂ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ನಿರಂತರ ದೌರ್ಜನ್ಯದ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇಲ್ಯಾಸ್ ತುಂಬೆ ಮಾತನಾಡುತ್ತಾ, ‘ದೇಶದಲ್ಲಿ ಸಂಘಪರಿವಾರವನ್ನು ಹಾಳು ಮಾಡುವುದಕ್ಕಾಗಿ ಕಟ್ಟಿದ್ದಾರೆ. ಹಿಂದೂ ಹಾಗೂ ಮುಸ್ಲಿಮರ ನಡುವೆ ವೈಷಮ್ಯವನ್ನು ಸೃಷ್ಟಿಸಿ ಅದರಿಂದ ತಮ್ಮ ರಾಜಕೀಯ ಲಾಭ ಪಡೆಯುವ ಉದ್ದೇಶಕ್ಕಾಗಿ ಸೃಷ್ಟಿಸಿದ್ದಾರೆ. ಇದೀಗ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಥಳಿಸಿ ಜನರನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈಯ್ಯತ್ತಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವರದಿಯಾಗಿದೆ. ಇನ್ನು ಈ ಹತ್ಯೆಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಮೂಲಕ ನಮ್ಮ ಸಹನೆಯನ್ನು ಪರೀಕ್ಷಿಸದಿರಿ’ ಎಂದು ಸಂಘಪರಿವಾರಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ.

ಪೆಹ್ಲುಖಾನ್, ಅಖ್ಲಾಕ್ ರ ಹತ್ಯೆಯನ್ನು ಉಲ್ಲೇಖಿಸುತ್ತಾ, ಅಖ್ಲಾಕ್ ರನ್ನು ಹತ್ಯೆ ಮಾಡಿದವರು ಜೈಲಿನಲ್ಲಿಲ್ಲ, ಆದರೆ ಸಂತ್ರಸ್ತರ ಮನೆಯವರ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ‘ಸಂಘಪರಿವಾರದ ಕಾರ್ಯಕರ್ತರನ್ನು ಇಂತಹ ಕೃತ್ಯವನ್ನು ಮಾಡಲು ಕಳುಹಿಸುತ್ತಿರುವವರು ಭೀಫ್ ಎಕ್ಸ್ಪೋರ್ಟ್ ಕಂಪನಿಗಳ ಮೂಲಕ ಟನ್ ಗಟ್ಟಲೆ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದಾರೆ. ನೀವು ಜೈಲಿಗೆ ಹೋಗುತ್ತಿದ್ದೀರಿ ಆದರೆ ನಿಮ್ಮನ್ನು ಇಂತಹ ಕೃತ್ಯಗಳಿಗೆ ಪ್ರೇರೇಪಿಸಿದವರು ಮನೆಯಲ್ಲಿದ್ದು ಭೀಫ್ ಬಿರಿಯಾನಿಯ ಸವಿ ನೋಡುತ್ತಿದ್ದಾರೆ. ನಾವು ಸುಮ್ಮನೆ ಕೂತಿರುವುದರಿಂದ ಸಂಘಪರಿವಾರದವರು ನಮ್ಮನ್ನು ಮತ್ತೆ ಮತ್ತೆ ಹತ್ಯೆಗೈಯ್ಯುತ್ತಿದ್ದಾರೆ. ದಲಿತರಿಗೆ ಜೀವನ ಮಾಡಲು ಅಸಾಧ್ಯವಾದ ಸ್ಥಿತಿಯನ್ನು ನಿರ್ಮಿಸಲಾಗಿದೆ. ಮೀಸೆ ಬಿಟ್ಟ ಎಂಬ ಕಾರಣಕ್ಕೆ ದಲಿತರ ಮೇಲೆ ಹಲ್ಲೆಗಳಾಗಿದೆ. ಮದುಮಗ ಕುದುರೆ ಮೇಲೆ ಮೆರವಣಿಗೆ ಮಾಡಿದ್ರೆ ಆತನ ಮೇಲೆ ಹಲ್ಲೆ ಮಾಡಿ ಕೊಚ್ಚಿ ಕೊಚ್ಚಿ ಹತ್ಯೆ ಮಾಡಲಾಗುತ್ತೆ. ಅದಕ್ಕೆ ಜೀವಂತ ಉದಾಹರಣೆ ಚಾಮರಾಜನಗರದಲ್ಲಿ ಪ್ರತಾಪ್ ಎಂಬ ಯುವಕನ ಮೇಲೆ ನಡೆದ ದೌರ್ಜನ್ಯ. ಇನ್ನು ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವವೇ ನಮ್ಮ ದೇಶದ ವೈಶಿಷ್ಟತೆ ಎಂದು ಹೇಳುತ್ತೇವೆ ಆದರೆ ಪ್ರಜಾಪ್ರಭುತ್ವ ಎಲ್ಲಿದೆ ಸ್ವಾಮಿ’ ಎಂದು ಅವರು ಪ್ರಶ್ನಿಸಿದರು. ‘ಪ್ರಧಾನಿ ಮೋದಿ ಹೇಳುತ್ತಾರೆ ಸಬ್ಕಾ ಸಾತ್ ಸಬ್ಕಾ ವಿಶ್ವಾಸ್ ಎಂದು. ಆದರೆ ಮೋದಿಯು ಯಾರ ವಿಶ್ವಾಸನೂ ಗಳಿಸಿಕೊಂಡಿಲ್ಲ. ಮುಸಲ್ಮಾನರ ಮೇಲೆ ಮೋದಿಗೆ ವಿಶ್ವಾಸವಿಲ್ಲ ಹಾಗೂ ಮೋದಿ ಮೇಲೆ ಮುಸಲ್ಮಾನರಿಗೂ ವಿಶ್ವಾಸವಿಲ್ಲ. ದಲಿತರ ವಿಶ್ವಾಸವೂ ಮೋದಿಗಿಲ್ಲ. ಯಾಕೆಂದರೆ ಮೋದಿ ಹೇಳುವುದು ಒಂದು ಮಾಡುವುದು ಮತ್ತೊಂದು. ಲೋಕಸಭೆಯಲ್ಲಿ ಗುಂಪು ಹತ್ಯೆಯ ಬಗ್ಗೆ ಯಾವತ್ತಾದರೂ ಚರ್ಚೆ ಮಾಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ವೀಡಿಯೋ ವೀಕ್ಷಿಸಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group