ರಾಜ್ಯ ಸುದ್ದಿ

ಗುಂಪು ಹತ್ಯೆಗೆ ಬಲಿಯಾದ ದಯಾನಾತ್ ಖಾನ್ ಹೊನ್ನಾಳಿ ಮನೆಗೆ ಎಸ್.ಡಿ.ಪಿ.ಐ ನಿಯೋಗ ಭೇಟಿ; ಕಾನೂನು ಹೋರಾಟದ ಭರವಸೆ

ವರದಿಗಾರ (ಜೂನ್ 30): ವಾಟ್ಸಪ್ ಸ್ಟೇಟಸ್‍ನಲ್ಲಿ ಧಾರ್ಮಿಕ ಧ್ವಜವನ್ನು ಬಳಸಿದ ಎಂಬ ಏಕೈಕ ಕಾರಣಕ್ಕೆ ‘ಪಾಕಿಸ್ತಾನದ ಧ್ವಜ ಬಳಸಿದ್ದಾನೆ’ ಎಂದು ಆರೋಪಿಸಿ ಸಂಘಪರಿವಾರದ ತ್ರಿಶೂಲ ದೀಕ್ಷೆಯಿಂದ ಪ್ರೇರಿತವಾದ ಗುಂಪು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಯಾನಾತ್ ಖಾನ್ ಎಂಬ ಯುವಕನ್ನು ಬೀಭತ್ಸವಾಗಿ ಜೂನ್ 15 ರಂದು ಹತ್ಯೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯ ಸಮಿತಿಯು ಶನಿವಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿ, ಕಾನೂನು ಹೋರಾಟದ ಭರವಸೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಡಿಪಿಐ ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ,  ‘ಘಟನೆಯು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಕರ್ನಾಟಕದಲ್ಲಿ ಸಂಘಪರಿವಾರವು ನಡೆಸಿದ ಜಾರ್ಖಂಡ್ ಹತ್ಯಾಕಾಂಡದ ಪ್ರಯೋಗವಾಗಿರುತ್ತದೆ. ಘಟನೆಯ ಬಗ್ಗೆ ಪೊಲೀಸ್ ಇಲಾಖೆಯು ದುರ್ಬಲವಾಗಿರುವ ಪ್ರಕರಣವನ್ನು ದಾಖಲಿಸುವ ಮೂಲಕ ಕರ್ತವ್ಯ ಲೋಪವನ್ನು ಎಸಗಿದೆ. ರಾಜ್ಯ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖೇದಕರ ಹಾಗೂ ಇದುವರೆಗೂ ಸಂತ್ರಸ್ತ ಕುಟುಂಬವನ್ನು ಯಾವೊಬ್ಬ ಜನಪ್ರತಿನಿಧಿಗಳು ಭೇಟಿಯಾಗದೆ ಇರುವುದನ್ನು ಗಮನಿಸಿದರೆ ಮುಸಲ್ಮಾನರ ಜೀವಕ್ಕೆ ಯಾವ ರೀತಿಯ ಬೆಲೆಯನ್ನು ಕಲ್ಪಿಸಲಾಗಿದೆ ಎಂಬುವುದನ್ನು ತಿಳಿಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಎಸ್‍ಡಿಪಿಐ ನಿಯೋಗವು ರಾಜ್ಯ ಸರಕಾರಕ್ಕೆ ಈ ಕೆಳಗಿನ ಬೇಡಿಕೆಯನ್ನಿಟ್ಟಿದೆ:

1 . ದಯಾನಾತ್ ಖಾನ್ ತಾಯಿ ಪತ್ರಿಕಾಗೋಷ್ಠಿಯಲ್ಲಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವ 5 ಮಂದಿ ಆರೋಪಿಗಳ ಹೆಸರುಗಳನ್ನು ಮರು ಹೇಳಿಕೆಯ ಮೂಲಕ ಎಫ್‍ಐಆರ್ ನಲ್ಲಿ ದಾಖಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.

2 . ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದು.

3 . ಪ್ರಕರಣದಲ್ಲಿ ಹೊನ್ನಾಳಿ ಪೊಲೀಸರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದು.

4 . ಮೃತ ದಯಾನಾತ್ ಖಾನ್ ಮನೆಯ ಆದಾಯದ ಮೂಲವಾಗಿದ್ದರಿಂದ ಅವರ ಸಹೋದರ ಸುಹೈಲ್ ಗೆ ಸರ್ಕಾರಿ ಉದ್ಯೋಗವನ್ನು ನೀಡುವುದು.

ನಿಯೋಗದಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಅಮೀನ್ ಮೊಹ್ಸಿನ್, ಶಿಮೊಗ್ಗ ಜಿಲ್ಲಾಧ್ಯಕ್ಷರಾದ ಸಲೀಂ ಅಹಮದ್ ಮತ್ತು ಇತರರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group