ರಾಜ್ಯ ಸುದ್ದಿ

ಅಕ್ರಮ ಗೋ ಸಾಗಾಟದಲ್ಲಿ ಬಜರಂಗದಳ ಕಾರ್ಯಕರ್ತರ ಬಂಧನ; ಪೊಲೀಸ್ ಇಲಾಖೆ ಮತ್ತು ಗೋ ರಕ್ಷಕರ ಮೌನವೇಕೆ?: ರಿಯಾಝ್ ಫರಂಗಿಪೇಟೆ ಪ್ರಶ್ನೆ

‘ಪೊಲೀಸ್ ಇಲಾಖೆಯ ದ್ವಿಮುಖ ಧೋರಣೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಸ್ಥ್ಯ ಹಾಳಾಗಿದೆ’

ವರದಿಗಾರ (ಜೂನ್.25): ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ದರೆಗುಡ್ಡೆ-ಕಲ್ಲುಪುತ್ತಿಗೆ ಎಂಬಲ್ಲಿ ಅಕ್ರಮ ಗೋ ಸಾಗಾಟ ಪತ್ತೆಯಾಗಿರುವ ಪ್ರಕರಣದಲ್ಲಿ ಬಜರಂಗದಳ ಸಂಘಟನೆಯ ಇಬ್ಬರು ಸಕ್ರೀಯ ಕಾರ್ಯಕರ್ತರನ್ನು ಶನಿವಾರ ಮಧ್ಯರಾತ್ರಿ ಮೂಡಬಿದಿರೆ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಮತ್ತು ಗೋ ರಕ್ಷಕರ ಮೌನ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಘಟನೆಯನ್ನು ಉಲ್ಲೇಖಿಸಿ ತನ್ನ ಫೇಸ್ಬುಕ್ ಖಾತೆಯಲ್ಲಿ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿರುವ ರಿಯಾಝ್ ಫರಂಗಿಪೇಟೆ, ‘ಅಕ್ರಮ ಗೋ ಸಾಗಾಟದಲ್ಲಿ ಬಂಧಿತ ಆರೋಪಿಗಳನ್ನು ಸಕ್ರಮ ಗೋ ಸಾಗಾಟವೆಂದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಮುಸಲ್ಮಾನರು ಗೋ ಸಾಗಾಟ ಮಾಡಿದಾಗ ಅಲ್ಲಿ ನಡೆಯುವ ಲಾಠಿ ಏಟು, ಪೊಲೀಸ್ ಕೇಸು, ದಂಡ ಇದು ಯಾವುದೂ ಇಲ್ಲಿ ಕಾಣುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಇಲಾಖೆಯ ಈ ದ್ವಿಮುಖ ಧೋರಣೆಯಿಂದಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಸ್ಥ್ಯ ಹಾಳಾಗುತ್ತಿರುವುದು ಎಂದು ರಿಯಾಝ್ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಗ್ರ ತನಿಖೆ ನಡೆಸಿ ಅಕ್ರಮ ಗೋ ಸಾಗಾಟ ನಡೆಸಿರುವ ಬಜರಂಗದಳದ ಖದೀಮರನ್ನು ಕಾನೂನಿನ ಸುಪರ್ದಿಗೆ ಒಪ್ಪಿಸಿ ಸಾಮಾಜಿಕ ನ್ಯಾಯ ಮತ್ತು ಕಾನೂನು ಈಗಲೂ ಜೀವಂತವಾಗಿದೆ ಎಂದು ತೋರಿಸಿ ಕೊಡಬೇಕಾಗಿದೆ ಎಂದಿರುವ ರಿಯಾಝ್ ಫರಂಗಿಪೇಟೆ, ಗೋರಕ್ಷಕರ ಮುಖವಾಡವನ್ನು ಹೊತ್ತಿರುವವರು ತಮ್ಮ ಅಟ್ಟಹಾಸವನ್ನು ಮತ್ತು ಪೌರುಷವನ್ನು ಅಕ್ರಮ ಗೋ ಸಾಗಾಟದಲ್ಲಿ ಸೆರೆಸಿಕ್ಕ ಬಜರಂಗದಳದ ಕಾರ್ಯಕರ್ತ ಮೇಲೆ ತೋರಿಸಿ ಎಂದು ಸಲಹೆ ನೀಡಿದ್ದಾರೆ.

#ಬಜರಂಗದಳದ #ಅಕ್ರಮ #ಗೋಸಾಗಾಟ #ಪೋಲೀಸ್ #ಇಲಾಖೆ #ಮತ್ತು #ಗೋರಕ್ಷಕರ #ಮೌನವೇಕೆ..?ಜೂನ್ 23 ರಂದು ಬಜರಂಗದಳದವರು ಮೂಡಬಿದಿರೆಯಲ್ಲಿ ಮಧ್ಯ…

Posted by Riyaz Farangipete on Monday, 24 June 2019

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group