
ಜಾಲ್ಸೂರು : ಪಯನೀರ್ ಪಬ್ಲಿಕ್ ಸ್ಕೂಲ್, ಜಾಲ್ಸೂರು ಇದರ 2019-20 ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲವು ಚುನಾವಣೆಯ ಮೂಲಕ ಇತ್ತೀಚೆಗೆ ನಡೆಯಿತು. ಚುನಾವಣೆಯಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ರೀಮಾ ಚುನಾಯಿತರಾದರೆ, ಕಾರ್ಯದರ್ಶಿಯಾಗಿ ಶುಐಬ್ ಆಯ್ಕೆಯಾದರು. ವಿದ್ಯಾರ್ಥಿ ಉಪನಾಯಕರಾಗಿ ನೈಮಾ ಹಾಗೂ ಉಪ ಕಾರ್ಯದರ್ಶಿಯಾಗಿ ಹಿಬಾ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯ ವೇಳೆ ಹಾಜರಿದ್ದ ಶಾಲಾ ಸಂಸ್ಥಾಪಕ ಅಧ್ಯಕ್ಷ ಶ್ರೀ ಅಬ್ದುಲ್ ರಝಾಕ್ ಅವರು ಮಾತನಾಡುತ್ತಾ, ” ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಂದರ ರೂಪಗಳು ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಅನುಭವವಾಗಲೆಂಬ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಚುನಾವಣೆಯ ಮೂಲಕ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ರಚಿಸಿದ್ದು, ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ” ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಾನೇಶ್ವರಿ ಹಾಜರಿದ್ದು, ಇತರೆ ಎಲ್ಲಾ ಶಿಕ್ಷಕಿಯರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.
