ರಾಜ್ಯ ಸುದ್ದಿ

ರಾಷ್ಟ್ರೀಯತೆಯೆಂಬ ಪ್ರವಾಹದ ಹುಚ್ಚಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ: ಮಹೇಂದ್ರ ಕುಮಾರ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕರುನಾಡಿನ ಕಾರ್ನಾಡಿಗೆ ಗೌರವ ನಮನ

ನಮ್ಮ ಧ್ವನಿಯಿಂದ ‘ರಾಷ್ಟ್ರೀಯತೆ ಮತ್ತು ನಿರುದ್ಯೋಗ’ ವಿಚಾರ ಸಂಕಿರಣ

ವರದಿಗಾರ (ಜೂನ್.15): ರಾಷ್ಟ್ರೀಯತೆಯೆಂಬ ಪ್ರವಾಹದ ಹುಚ್ಚಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಮಾಜಿ ಬಜರಂಗದಳ ಸಂಚಾಲಕ, ನಮ್ಮ ಧ್ವನಿ ಸ್ಥಾಪಕ ಮಹೇಂದ್ರ ಕುಮಾರ್ ಹೇಳಿದ್ದಾರೆ.

ಅವರು ನಮ್ಮ ಧ್ವನಿ ಬಳಗವು ಬೆಂಗಳೂರಿನ ಗಾಂಧೀ ಭವನದಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯತೆ ಮತ್ತು ನಿರುದ್ಯೋಗ’ ವಿಚಾರ ಸಂಕಿರಣದ ಪ್ರಸ್ತಾವಿಕನ್ನುದ್ದೇಶಿಸಿ ಮಾತನಾಡುತ್ತಿಸದ್ದರು.

ರಾಷ್ಟ್ರೀಯತೆಯ ವಿಷಯ ಬಂದಾಗ ಕನ್ನಡಿಗರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.ಆದರೆ ರಾಷ್ಟ್ರೀಯತೆಯ ಪ್ರವಾಹದಲ್ಲಿ ತಮ್ಮ ಉದ್ಯೋಗವನ್ನು, ಅಸ್ಮಿತೆಯನ್ನು ಕಳೆದುಕೊಳ್ಳುವುದನ್ನು ನಾವು ಮರೆತಿದ್ದೇವೆ. ಕರ್ನಾಟಕದ ಲಾಭಾಂಶದಲ್ಲಿರುವ ಬ್ಯಾಂಕುಗಳನ್ನು ನಷ್ಟದಲ್ಲಿರುವ ರಾಷ್ಟ್ರೀಯ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮೂಲಕ ಕರ್ನಾಟಕದ ಜನತೆಗೆ ಅನ್ಯಾಯ ಮಾಡಲಾಗಿದೆ ಎಂದು ಮಹೇಂದ್ರ ಕುಮಾರ್ ಆರೋಪಿಸಿದ್ದಾರೆ.

ಇದರ ಬಗ್ಗೆ ಧ್ವನಿ ಎತ್ತಬೇಕಾಗಿರುವ ಕನ್ನಡಿಗರು ಮೌನಕ್ಕೆ ಶರಣಾಗಿರುವುದು ದುರಂತವೆಂದು ಈ ಸಂದರ್ಭ ಅವರು ಖೇಧ ವ್ಯಕ್ತಪಡಿಸಿದ್ದಾರೆ.

ರಾಜ್ಯದಾದ್ಯಂತ ಈ ಬಗ್ಗೆ ಧ್ವನಿಯೆತ್ತಿ ತಮ್ಮ ಹಕ್ಕುಗಳನ್ನು ಪಡೆಯುವಂತೆ ಕರ್ನಾಟಕ ಜನತೆಗೆ ಅವರು ಕರೆ ನೀಡಿದ್ದಾರೆ.

ಕಾರ್ಯಕ್ರಮದ ಮೊದಲು ಇತ್ತೀಚೆಗೆ ನಮ್ಮನ್ನಗಲಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ರವರ ಭಾವಚಿತ್ರಕ್ಕೆ ಅತಿಥಿಗಳು ಮತ್ತು ಸಭಿಕರು ಗೌರವ ನಮನ ಸಲ್ಲಿಸಿ ಸ್ಮರಿಸಿದರು.

ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಬೆಂಗಳೂರಿನ ಅಲ್ ಬಶೀರ್ ಇಂಟರ್ ನ್ಯಾಷನಲ್ ಶಾಲೆಯ ಉಮರ್ ಷರೀಫ್, ಚಿಂತಕರಾದ ರಾಜಲಕ್ಷ್ಮೀ, ಕರ್ನಾಟಕ ರಣಧೀರ ಪಡೆಯ ಹರೀಶ್ ಕುಮಾರ್ ವಿಚಾರ ಸಂಕಿರಣವನ್ನು ಉದ್ದೇಶಿಸಿ ವಿಚಾರ ಮಂಡಿಸಿದರು.

ನಮ್ಮ ಧ್ವನಿಯ ನೇಮಿಚಂದ್ರಯ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಲೋಹಿತ್ ಸ್ವಾಗತಿಸಿ, ಝೈನುದ್ದೀನ್ ಅಕ್ಬರ್ ಕಾರ್ಯಕ್ರಮ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group