ಜಿಲ್ಲಾ ಸುದ್ದಿ

ಇಂದು ನಮ್ಮ ಧ್ವನಿಯಿಂದ ‘ರಾಷ್ಟ್ರೀಯತೆ ಮತ್ತು ನಿರುದ್ಯೋಗ’ ವಿಷಯದಲ್ಲಿ ವಿಚಾರ ಸಂಕಿರಣ

ವರದಿಗಾರ (ಜೂನ್.15): ‘ರಾಷ್ಟ್ರೀಯತೆ ಮತ್ತು ನಿರುದ್ಯೋಗ’ ಎಂಬ ವಿಷಯದಲ್ಲಿ ಇಂದು (15 ಜೂನ್ 2019) ಮಧ್ಯಾಹ್ನ 3:30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಮ್ಮ ಧ್ವನಿಯು ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಕನ್ನಡ  ಮಣ್ಣಿನ ಮಕ್ಕಳಾದ ನಾವು ರಾಷ್ಟ್ರೀಯತೆ ಎಂಬ ಅಮಲಿನಲ್ಲಿ ನಮ್ಮ ರಾಜ್ಯಕ್ಕೆ ನಮ್ಮ ವಿದ್ಯಾವಂತ ಯುವಕರಿಗಾಗುವ ಅನ್ಯಾಯವನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತ ಕರ್ನಾಟಕದಲ್ಲಿರುವ ರೈಲ್ವೆ ಇಲಾಖೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ  ಅಲ್ಲದೆ ಈಗ ರೈತ ಕಟ್ಟಿದ ಸ್ಥಳೀಯ ಸಹಕಾರಿ ಬ್ಯಾಂಕ್ ಗಳಲ್ಲೂ ಕೂಡ ಉತ್ತರ ಭಾರತೀಯರು ಬಂದು ನಮ್ಮನ್ನಾಳುವ ವ್ಯವಸ್ಥೆ ಬಂದೊದಗಿದೆ. ಈ ದುರವಸ್ಥೆ ಇತರ ಸಾರ್ವಜನಿಕ ಸೇವಾವಲಯಕ್ಕೂ ಕೂಡ ಹಬ್ಬಿ ಕನ್ನಡಿಗ ತಬ್ಬಲಿಯಾಗುತ್ತಿದ್ದಾನೆ. ಕೇರಳಕ್ಕಿಲ್ಲದ ರಾಷ್ಟ್ರೀಯತೆ, ತಮಿಳುನಾಡಿಗೆ ಬೇಕಾಗಿಲ್ಲದ ರಾಷ್ಟ್ರೀಯತೆ, ತೆಲಂಗಾಣಕ್ಕೆ ಅಗತ್ಯವಿಲ್ಲದ ರಾಷ್ಟ್ರೀಯತೆ ಹಾಗೇ ಇತರ ದಕ್ಷಿಣ ಭಾರತದ ರಾಜ್ಯಗಳು ಗಮನಕೊಡದ ರಾಷ್ಟ್ರೀಯತೆ ಕನ್ನಡಿಗ ನಿಸ್ಸಾಹಾಯಕತೆಯಿಂದ ಒಪ್ಪಿಕೊಂಡು ತಾನು ನಿರುದ್ಯೋಗಿಯಾಗುತ್ತಿದ್ದಾನೆ ಎಂದು ನಮ್ಮ ಧ್ವನಿಯು ಈ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದು ವ್ಯವಸ್ಥಾಪಕರು ‘ವರದಿಗಾರ’ಕ್ಕೆ ತಿಳಿಸಿದ್ದಾರೆ.

ವಿಚಾರ ಸಂಕಿರಣದ ಗೌರವ ಉಪಸ್ಥಿತಿಯಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್. ದೊರೆಸ್ವಾಮಿ ಭಾಗವಹಿಸಲಿದ್ದಾರೆ.

ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಬೆಂಗಳೂರಿನ ಅಲ್ ಬಶೀರ್ ಇಂಟರ್ ನ್ಯಾಷನಲ್ ಶಾಲೆಯ ಉಮರ್ ಷರೀಫ್, ಚಿಂತಕರಾದ ರಾಜಲಕ್ಷ್ಮೀ, ಕರ್ನಾಟಕ ರಣಧೀರ ಪಡೆಯ ಹರೀಶ್ ಕುಮಾರ್ ಹಾಗೂ ಪ್ರಗತಿಪರ ಚಿಂತಕರು, ಯುವ ಬರಹಗಾರರು, ಸಮಾಜಮುಖಿ ಮನಸ್ಸುಗಳು ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಲಿದ್ದಾರೆ ಎಂದು ನಮ್ಮ ಧ್ವನಿ ಸ್ಥಾಪಕರಾದ ಮಹೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group