ರಾಷ್ಟ್ರೀಯ ಸುದ್ದಿ

ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ ಕುಸಿದ ಭಾರತ; 163 ದೇಶದಲ್ಲಿ ಭಾರತಕ್ಕೆ  141ನೇ ಸ್ಥಾನ

ವರದಿಗಾರ (ಜೂ.14): 2019ರ ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಕುಸಿತವನ್ನು ಕಂಡಿದ್ದು, ದೇಶದ ಪ್ರಸಕ್ತ ಸನ್ನಿವೇಶವನ್ನು ಜಾಗತಿಕ ಮಟ್ಟದಲ್ಲಿ ತೋರ್ಪಡಿಸಿಕೊಂಡಿದೆ.

ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯ 163 ದೇಶಗಳಲ್ಲಿ ಭಾರತ 141ನೇ ಸ್ಥಾನ ಗಳಿಸಿದೆ ಎಂದು ಆಸ್ಟ್ರೇಲಿಯಾದ ‘ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್’ ಸಂಸ್ಥೆ ನಡೆಸಿದ ಸಮೀಕ್ಷೆಯು ಬಹಿರಂಗಗೊಳಿಸಿದ ವರದಿ ಹೇಳಿದೆ.  ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲಿದ್ದು, ಅಪಘಾನಿಸ್ತಾನ ಅಂತಿಮ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.

ಇದುವರೆಗೆ ಈ ಸ್ಥಾನದಲ್ಲಿದ್ದ ಸಿರಿಯಾ ಒಂದು ಸ್ಥಾನ ಮೇಲೇರಿದೆ. ದಕ್ಷಿಣ ಸುಡಾನ್, ಯೆಮನ್ ಮತ್ತು ಇರಾಕ್ ಕ್ರಮವಾಗಿ 161, 160 ಮತ್ತು 159ನೇ ಸ್ಥಾನದಲ್ಲಿದೆ. ಸಾಮಾಜಿಕ ಸುರಕ್ಷೆ ಮತ್ತು ಭದ್ರತೆ, ಮಿಲಿಟರೀಕರಣದ ಮಟ್ಟ ಹಾಗೂ ದೇಶೀಯ ಮತ್ತು ಅಂತರಾಷ್ಟ್ರೀಯ ಸಂಘರ್ಷದ ಸ್ಥಿತಿ- ಈ ಮೂರನ್ನು ಮಾನದಂಡವಾಗಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದೆ. 2008ರಿಂದಲೂ ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲೇ ಸ್ಥಿರವಾಗಿದೆ.

ನ್ಯೂಝಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್, ಡೆನ್ಮಾರ್ಕ್ ಬಳಿಕದ ಸ್ಥಾನದಲ್ಲಿದೆ. ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿ ಭೂತಾನ್ 15ನೇ ಸ್ಥಾನ, ಶ್ರೀಲಂಕಾ 72, ನೇಪಾಳ 76 ಮತ್ತು ಬಾಂಗ್ಲಾದೇಶ 101ನೇ ಸ್ಥಾನದಲ್ಲಿದೆ. ಪಾಕಿಸ್ತಾನ 153ನೇ ಸ್ಥಾನದಲ್ಲಿದೆ. ಬಹು ವಿಧದ ತೀವ್ರ ಹವಾಮಾನ ಅಪಾಯ ಎದುರಿಸುತ್ತಿರುವ 9 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಫಿಲಿಪೀನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೋನೇಶಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಸ್ಥಾನ ಪಡೆದಿವೆ. ಭಾರತ, ಚೀನಾ ಮತ್ತು ಬಾಂಗ್ಲಾದೇಶಗಳು ಹವಾಮಾನ ವಿಪತ್ತಿಗೆ ತುತ್ತಾಗುವ ಅಪಾಯ ಹೆಚ್ಚಿದ್ದು, ಈ ಮೂರು ದೇಶಗಳಲ್ಲಿ ಸುಮಾರು 393 ಮಿಲಿಯನ್ ಜನರು ಅಧಿಕ ಹವಾಮಾನ ಅಪಾಯದ ವ್ಯಾಪ್ತಿಯ ಪ್ರದೇಶದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group