ಜಿಲ್ಲಾ ಸುದ್ದಿ

ಕರಾವಳಿಯ ಯುವ ಕವಿ ಆಶಿಕ್ ಮುಲ್ಕಿಯ ‘ಗೀಚಿಟ್ಟೆ -ಓದುವ ಸಂಕಟಕ್ಕೆ…ಸಂತಸಕ್ಕೆ” ಚೊಚ್ಚಲ ಕವನ ಸಂಕಲನ ಪುಸ್ತಕ ಜೂನ್ 16ರಂದು ಬಿಡುಗಡೆ

ವರದಿಗಾರ (ಜೂನ್.13): ಕರಾವಳಿಯ ಯುವ ಕವಿ, ಪತ್ರಕರ್ತ ಆಶಿಕ್ ಮುಲ್ಕಿಯು ಬರೆದಿರುವ “ಗೀಚಿಟ್ಟೆ-ಓದುವ ಸಂಕಟಕ್ಕೆ…ಸಂತಸಕ್ಕೆ” ಚೊಚ್ಚಲ ಕವನ ಸಂಕಲನ ಪುಸ್ತಕವು 2019ರ ಜೂನ್ 16 ಆದಿತ್ಯವಾರ ಸಂಜೆ 5ಕ್ಕೆ ಬೆಂಗಳೂರಿನ ಸಂಸ ಬಯಲು ರಂಗ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.

“ಗೀಚಿಟ್ಟೆ-ಓದುವ ಸಂಕಟಕ್ಕೆ…ಸಂತಸಕ್ಕೆ” ಕವನ ಸಂಕಲನ ಪುಸ್ತಕವನ್ನು ಭಾವನಾ ಪ್ರಕಾಶನದಿಂದ ಬಿಡುಗಡೆಗೊಳಿಸಲಾಗುತ್ತಿದೆ.

ಬಿಡುಗಡೆ ಸಮಾರಂಭದಲ್ಲಿ ಯುವ ಕವಿ ಆಶಿಕ್ ಮುಲ್ಕಿಯವರ ತಾಯಿ ಆಯಿಷಾ ಅಬು, ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಬೆಳಗೂರು,  ಭಾವನಾ ಪ್ರಕಾಶನದ ರವಿ ಬೆಳಗೆರೆ, ಕನ್ನಡ ಅಧ್ಯಾಪಕರಾದ ಮಂಜು ಬಶೀರ್, ಓ ಮನಸೇ ಸಹ ಸಂಪಾದಕಿ ಭಾವನಾ ಬೆಳಗೆರೆ ಮತ್ತು ಇನ್ನಿತರ ಜನಪರ ಹೋರಾಟಗಾರರು, ಪತ್ರಕರ್ತರು, ಸಾಮಾಜಿಕ-ರಾಜಕೀಯ ನೇತಾರರು, ಚಿಂತಕರು, ಬರಹಗಾರರು, ಯುವ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಾದ ಮಣಿನಾಲ್ಕೂರು ರವರ ಸೌಹಾರ್ದ ಸಂಗೀತವೂ ನಡೆಯಲಿದೆ ಎಂದು ಭಾವನಾ ಪ್ರಕಾಶನದ ರವಿ ಬೆಳಗೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾವನಾ ಪ್ರಕಾಶನದ ರವಿ ಬೆಳಗೆರೆಯವರು “ಗೀಚಿಟ್ಟೆ-ಓದುವ ಸಂಕಟಕ್ಕೆ…ಸಂತಸಕ್ಕೆ” ಚೊಚ್ಚಲ ಕವನ ಸಂಕಲನಕ್ಕೆ ಆಹ್ವಾನ ನೀಡುತ್ತಿರುವುದು ಮತ್ತು ಕರಾವಳಿಯ ಯುವ ಕವಿಯ ಬಗ್ಗೆ ತನ್ನ ಮನದಾಳದ ಮಾತನ್ನು ಮುಂದಿಟ್ಟಿದ್ದಾರೆ.

Posted by Ravi Belagere on Tuesday, 11 June 2019

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group