
‘ಮೋದಿಯಿಂದಲೇ ದೇಶ ಉಳಿಯುವುದೆಂದು ಬಿಂಬಿಸಲಾಯ್ತು’
‘ಸತ್ಯವನ್ನು ಹೇಳಲಾಗದ ಸ್ಥಿತಿಯಲ್ಲಿದ್ದೇವೆ’
ವರದಿಗಾರ (ಜೂನ್.13): ಭಾರತೀಯ ವಾಯುಸೇನೆ ವಿಮಾನ AN-32 ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾ ಅವರ ಸತ್ಯದ ಬಗ್ಗೆ ನಾವು ಮಾತನಾಡುವಂತಿಲ್ಲ. ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪುಲ್ವಾಮ ಘಟನೆ ಬಗ್ಗೆಯೂ ನಾವು ಪ್ರಶ್ನೆ ಕೇಳುವಂತಿಲ್ಲ. ನೋಡಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಪ್ರಧಾನಿ ಮೋದಿಯೊಬ್ಬನೇ ದೇಶಭಕ್ತ. ಅವನಿಂದಲೇ ದೇಶ ಉಳಿಯುವುದೆಂದು ಬಿಂಬಿಸಲಾಯ್ತು. ದೇಶದ ಜಿಡಿಪಿ ದರ ಕುಸಿದಿದೆ. ಇದನ್ನು ಪ್ರಶ್ನಿಸಬಾರದಾ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
