ರಾಷ್ಟ್ರೀಯ ಸುದ್ದಿ

‘ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ’: ವ್ಯಾಪಕ ಪ್ರಶಂಸೆಗೆ ಕಾರಣವಾದ ಬಿಜೆಪಿ ಸಂಸದನ ನಡೆ

ವರದಿಗಾರ (ಮೇ 30): ತನಗೆ ಶುಭ ಹಾರೈಸಲು ಕಚೇರಿಗೆ ಆಗಮಿಸುವವರು ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ, ಅದನ್ನು ಬಡ ಮಕ್ಕಳಿಗೆ ತಲುಪಿಸುತ್ತೇನೆ ಎಂದು ಹೇಳುವ ಮೂಲಕ ತೆಲಂಗಾಣದ ಸಿಕಂದರಾಬಾದ್ ನ ಬಿಜೆಪಿ ಸಂಸದರೊಬ್ಬರು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಇವರ ಹೆಸರು ಕಿಶನ್ ರೆಡ್ಡಿ, ಸಿಕಂದರಾಬಾದ್ ಕ್ಷೇತ್ರದಲ್ಲಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದರು. ತನ್ನ ವಿಜಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು ಈ ವಿಶೇಷ ಬೇಡಿಕೆಯನ್ನು ಹಿತೈಷಿಗಳ ಮುಂದಿಟ್ಟಿದ್ದಾರೆ.

ಇದೀಗ ನೂತನ ಸಂಸದರ ಕಚೇರಿಗೆ ಜನರು ಪುಸ್ತಕಗಳೊಂದಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ ರಾಶಿರಾಶಿ ಪುಸ್ತಕಗಳು ಅವರ ಕಚೇರಿ ತಲುಪಿವೆ. ಈ ಎಲ್ಲಾ ಪುಸ್ತಕಗಳನ್ನು ರಾಜ್ಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಕಿಶನ್ ರೆಡ್ಡಿ ಹೇಳಿಕೊಂಡಿರುವುದಾಗಿ ಮೂಲಗಳು ವರದಿ ಮಾಡಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group