ರಾಷ್ಟ್ರೀಯ ಸುದ್ದಿ

ಹಿಂದೂ ಸೈನಿಕರನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ಚಾಕು ವಿತರಣೆ

ಸಾವರ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಚಾಕು ವಿತರಿಸಿದ ಮತ್ತೆ ವಿವಾದ ಹಿಂದೂ ಮಹಾಸಭಾ!

ವರದಿಗಾರ (ಮೇ.30): ಹಿಂದೂ ಮಹಾಸಭಾ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ 10ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಾಕುಗಳನ್ನು ವಿತರಿಸಿ ಮತ್ತೆ ವಿವಾದವನ್ನು ಸೃಷ್ಟಿಸಿದೆ.

”ರಾಜನೀತಿ ಕಾ ಹಿಂದೂಕರಣ್ ಹಾಗೂ ಹಿಂದೂವೋಂ ಕಾ ಸೈನಿಕೀಕರಣ್”  ಸಾವರ್ಕರ್ ಅವರ ಕನಸಾಗಿತ್ತು. ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮೋದೀಜಿ ಸಾವರ್ಕರ್ ಅವರ ಮೊದಲ ಕನಸನ್ನು ಈಡೇರಿಸಿದ್ದಾರೆ, ನಾವೀಗ ಚಾಕುಗಳನ್ನು ವಿತರಿಸಿ ಹಿಂದೂ ಸೈನಿಕರನ್ನು ಸೃಷ್ಟಿಸುವ ಮೂಲಕ ಸಾವರ್ಕರ್ ಅವರ ಇನ್ನೊಂದು ಕನಸನ್ನು ಈಡೇರಿಸುತ್ತಿದ್ದೇವೆ” ಎಂದು ಹಿಂದೂ ಮಹಾಸಭಾ ಮೀಡಿಯಾ ಪರ್ಸನ್ ಅಶೋಕ್ ಪಾಂಡೆ ಹೇಳಿದ್ದಾರೆ.

”ಹಿಂದೂಗಳು ತಮ್ಮನ್ನು ರಕ್ಷಿಸಿಕೊಳ್ಳುವುದರ ಜತೆಗೆ ತಮ್ಮ ದೇಶವನ್ನೂ ರಕ್ಷಿಸಬೇಕಿದ್ದರೆ ಅವರು ಶಸ್ತ್ರಗಳನ್ನು ಬಳಸಲು ಕಲಿಯಬೇಕು,” ಎಂದು ಪಾಂಡೆ ಈ ಸಂದರ್ಭ ಹೇಳಿದ್ದಾರೆ.

ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಾತನಾಡಿ ”ಹಿಂದೂಗಳನ್ನು ಪ್ರೇರೇಪಿಸಿ ಅವರ ಸಬಲೀಕರಣಗೊಳಿಸಲು, ಮುಖ್ಯವಾಗಿ ಯುವಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಇದೊಂದು ಹೆಜ್ಜೆಯಾಗಿದೆ”. ‘ಈ ಚಾಕುಗಳನ್ನು ಭಗವದ್ಗೀತೆಯ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಅಪ್ರಾಪ್ತ ಮಕ್ಕಳಿಗೆ ನೀಡಲಾಗಿದ್ದು ಯಾವಾಗ ಹೇಗೆ ಈ ಆಯುಧ ಬಳಸಬೇಕೆಂಬುದನ್ನು ಅವರು ಅರಿಯಬೇಕು’ ಎಂದು ಹೇಳಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹಲವಿದ್ದು ಅವರಿಗೆ ತಮ್ಮ ಆತ್ಮ ರಕ್ಷಣೆಗಾಗಿ ಚಾಕುಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ತರಬೇತಿ ನೀಡಬೇಕು ಎಂದು ಪಾಂಡೆ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group