ರಾಷ್ಟ್ರೀಯ ಸುದ್ದಿ

ಬಿಜೆಪಿ ನೇತೃತ್ವದ NDA ಗೆ ಸೋಲು, ಯುಪಿಎ ಅಧಿಕಾರಕ್ಕೆ : ‘ನ್ಯೂಸ್ ಕ್ಲಿಕ್ ‘ ರಾಜಕೀಯ ವಿಶ್ಲೇಷಣೆ

ವರದಿಗಾರ ಮೇ 20 : ಹಲವು ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾದ 2019 ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮೇ 19ಕ್ಕೆ ಮುಗಿದಿದ್ದು, ಮೇ 23 ರಂದು ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ. ‘ನ್ಯೂಸ್ ಕ್ಲಿಕ್’ ನ ರಾಜಕೀಯ ಪರಿಣತರ ವಿಶ್ಲೇಷಣಾ ತಂಡ ನಡೆಸಿರುವ ರಾಜ್ಯಾವಾರು ಪಕ್ಷಗಳ ಮೈತ್ರಿ ಬಲಾಬಲ ಹಾಗೂ ಜನರ ಒಲವಿನ ಆಧಾರದಲ್ಲಿ ನಡೆಸಿರುವ ಈ ವಿಶ್ಲೇಷಣೆಯಲ್ಲಿ  ಬಿಜೆಪಿ ನೇತೃತ್ವದ ಎನ್ ಡಿ ಎ  166 ಸ್ಥಾನಗಳನ್ನು ಗಳಿಸಲಿದ್ದು,  ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ 200 ಸ್ಥಾನಗಳನ್ನು ಪಡೆದು ಇತರೆ ಬಿಜೆಪಿ ವಿರೋಧಿ ಪಕ್ಷಗಳ ನೆರವಿನೊಂದಿಗೆ ಅಧಿಕಾರಕ್ಕೇರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎನ್ ಡಿ ಎ ಹಾಗೂ ಯುಪಿಎ ಮೈತ್ರಿ ಒಕ್ಕೂಟಕ್ಕೆ ಸೇರದ ಮೂರನೇ ರಂಗ ಒಟ್ಟಾಗಿ 176 ಸೀಟುಗಳನ್ನು ಗೆಲ್ಲಲಿವೆ ಎಂದೂ ಈ ವಿಶ್ಲೇಷಕರ ತಂಡ ಹೇಳಿದೆ

 

‘ನ್ಯೂಸ್ ಕ್ಲಿಕ್ ‘ ಈ ವಿಶ್ಲೇಷಣೆ ನಡೆಸಿದ್ದು ಹೇಗೆ?

‘ನ್ಯೂಸ್ ಕ್ಲಿಕ್ ‘ ತಂಡ ಈ ಸಮೀಕ್ಷೆಯನ್ನು ಪ್ರತಿಯೊಂದು ರಾಜ್ಯಗಳ ಇತ್ತೀಚೆಗಿನ ಮತದಾನದ ದಿಕ್ಕು, ಸದ್ಯದ ಮೈತ್ರಿ ಒಕ್ಕೂಟಗಳು,  ರಾಜ್ಯಗಳ ಪ್ರಾದೇಶಿಕ ಹಾಗೂ ಕೇಂದ್ರ ಮೈತ್ರಿ ಹಾಗೂ ಅಲ್ಲಿನ ಮತಗಳ ಹಂಚಿಕೆ ಪ್ರಮಾಣಗಳು ಇವೆಲ್ಲವನ್ನೂ ವಿಸ್ತೃತವಾಗಿ ವಿಶ್ಲೇಷಣೆಗೆ ಒಳಪಡಿಸಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

ಈಗಿನ ಲೋಕಸಭೆಯಲ್ಲಿ ಎನ್ ಡಿ ಎ ಬಳಿ  339 ಸ್ಥಾನಗಳಿದ್ದು, ಅದರಲ್ಲಿ ಶಿವಸೇನಾ, ಜೆಡಿಯು, ಎಲ್ ಜೆ ಪಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಸೇರಿವೆ. ಇವುಗಳಲ್ಲಿ ಪಿಡಿಪಿ ಹಾಗೂ ಟಿಡಿಪಿ, ಎನ್ ಡಿ ಎ ಮೈತ್ರಿ ಕೂಟದಿಂದ ಹೊರ ಹೋಗಿದ್ದು, ತಮಿಳುನಾಡಿನಲ್ಲಿ ಎಐಎಡಿಎಂಕೆ,  ಎನ್ ಡಿ ಎ ತೆಕ್ಕೆಗೆ ಜಾರಿದೆ. ಆದರೆ ಯುಪಿಎ ತನ್ನ ಮೈತ್ರಿಕೂಟಗಳಾದ ಡಿಎಂಕೆ, ಎನ್ ಸಿ ಪಿ , ಜೆಡಿಎಸ್ ಹಾಗೂ ಆರ್ ಜೆ ಡಿ ಜೊತೆಗಿನ ತನ್ನ ಮೈತ್ರಿ ಬಲಗಳನ್ನು ಗಟ್ಟಿಗೊಳಿಸಿದ್ದು, ಇವೆಲ್ಲವೂ ಪ್ರಾದೇಶಿಕವಾಗಿ ಯುಪಿಎಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಡುವ ನಿರೀಕ್ಷೆ ಮೂಡಿದೆ. ಅದರಲ್ಲೂ ತಮಿಳುನಾಡಿನಲ್ಲಿ ಡಿಎಂಕೆ ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಹುಟ್ಟಿಸಿದೆ.

ಇದಲ್ಲದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಅಲ್ಲಿ ಈ ಬಾರಿ ಮಹಾ ಘಟಬಂಧನ ಮೈತ್ರಿ ಪಕ್ಷಗಳಾದ ಎಸ್ಪಿ-ಬಿಎಸ್ಪಿ ಹಾಗೂ ರಾಷ್ಟ್ರೀಯ ಲೋಕದಳ ಒಟ್ಟು ಸೇರಿ ಕಳೆದ ಬಾರಿಗಿಂತಲೂ 52 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಇದು ಮೋದಿಗೆ ಹೆಚ್ಚಿನ ನಷ್ಟವನ್ನುಂಟುಮಾಡುವ ಕುರಿತು ಸಂಶಯವಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಮೈತ್ರಿ ಪಕ್ಷ ಎಐಎಡಿಎಂಕೆ ಕಳೆದ ಬಾರಿ 37 ಹಾಗೂ ಬಿಜೆಪಿ 2 ಸ್ಥಾನಗಳನ್ನು ಜಯಿಸಿತ್ತು. ಆದರೆ ಈ ಬಾರಿ ಅಲ್ಲಿ ಡಿಎಂಕೆ 38 ರಲ್ಲಿ 28 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿವೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಇಲ್ಲಿಯೂ ಕೂಡಾ ಎನ್ ಡಿ ಎ ಗೆ ತೀವ್ರ ಹಿನ್ನೆಡೆಯಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಕೂಡಾ ಬಿಜೆಪಿಗೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನ ನಾಗಾಲೋಟವನ್ನು ತಡೆಯುವಲ್ಲಿ ವಿಫಲವಾಗಲಿದ್ದು, ಅಲ್ಲಿ ಎನ್ ಡಿ ಎ ಗೆ ನಿರೀಕ್ಷಿತ ಫಲಿತಾಂಶ ಬರುವುದು ಕಷ್ಟ ಸಾಧ್ಯವೆನ್ನಲಾಗಿದೆ.

ಯುಪಿಎ ಮತ್ತು ಎನ್ ಡಿ ಎ ಹೊರತುಪಡಿಸಿದ ಮೂರನೇ ರಂಗ,  ‘ನ್ಯೂಸ್ ಕ್ಲಿಕ್’ ತಂಡದ ವಿಶ್ಲೇಷಣೆಯ ಪ್ರಕಾರ 176 ಸ್ಥಾನಗಳನ್ನು ಜಯಿಸಲಿದ್ದು, ಇವೆಲ್ಲವೂ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಿಯೇ ಚುನಾವಣೆ ಎದುರಿಸಿರುವುದರಿಂದ ಚುನಾವನೆಯ ನಂತರವೂ ಎನ್ ಡಿ ಎ ಗೆ ಬೆಂಬಲ ಕೊಡುವುದು ದೂರದ ಮಾತು. ಅವುಗಳಲ್ಲು ಮುಖ್ಯವಾಗಿ ಉತ್ತರ ಪ್ರದೇಶದ ಎಸ್ಪಿ-ಬಿಎಸ್ಪಿ ಮತ್ರಿಕೂಟ ಜಯಿಸುವ 57 ಸ್ಥಾನಗಳು ಹಾಗೂ ಟಿ ಎಂ ಸಿ ಜಯಿಸಲಿರುವ 34 ಸ್ಥಾನಗಳು ಸೇರಿವೆ.

ಈ ವಿಶ್ಲೇಷಣೆಯು ಮೋದಿ ಸರ್ಕಾರದ ಹಲವಾರು ಆಡಳಿತ ವೈಫಲ್ಯಗಳಾದ ನಿರುದ್ಯೋಗ, ರೈತರ ಆದಾಯದಲ್ಲಿ ಇಳಿಕೆ, ಅವರ ಸಾಲದಲ್ಲಿನ ಏರಿಕೆ, ಭ್ರಷ್ಟಾಚಾರ ನಿಗ್ರಹದಲ್ಲಿನ ವಿಫಲತೆ, ಬಂಡವಾಳಶಾಹಿಗಳಿಗೆ ಬಹಿರಂಗ ಬೆಂಬಲ, ಸಾಂವಿಧಾನಿಕ ಸಂಸ್ಥೆಗಳ ಮೇಲಾದ ನಿರಂತರ ದಾಳಿ, ಮುಸ್ಲಿಮ್ ವಿರೋಧಿ ನಿಲುವುಗಳು, ಹಿಂದುತ್ವ ಮತಾಂಧ ಶಕ್ತಿಗಳಿಗೆ ನೀಡಿದ ಬೆಂಬಲ, ದಲಿತರ ವಿರುದ್ಧ ಮೇಲ್ಜಾತಿಗಳ ಓಲೈಕೆ, ಆದಿವಾಸಿಗಳ ಭೂಮಿ ಮೇಲಿನ ಹಕ್ಕುಗಳ ಕಸಿಯುವಿಕೆ ಮುಂತಾದ ಗಂಭೀರ ವಿಷಯಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆಯುವಲ್ಲಿನ ವಿಫಲತೆಗಳು ಮೋದಿ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದು ‘ನ್ಯೂಸ್ ಕ್ಲಿಕ್ ‘ ನ ಪಿಯೂಶ್ ಶರ್ಮಾ ಹಾಗೂ ಗ್ಲೆನಿಸ್ಸಾ ಪೆರೀರಾ ನೇತೃತ್ವದ ರಾಜಕೀಯ ವಿಶ್ಲೇಷಕರ ತಂಡ ಸಿದ್ಧಪಡಿಸಿದ ವರದಿ ಅಭಿಪ್ರಾಯಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group