ರಾಜ್ಯ ಸುದ್ದಿ

ಸಿಪಿಎಂ ಕಾರ್ಯಕರ್ತನ ಹತ್ಯೆ ನಡೆಸಿದ್ದ 7 ಆರೆಸ್ಸೆಸ್‌, ಬಿಜೆಪಿಯ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ವರದಿಗಾರ (ಮೇ 17): ಸಿಪಿಎಂ ಕಾರ್ಯಕರ್ತ ಪರಕ್ಕಂಡಿ ಪವಿತ್ರನ್ ಅವರನ್ನು ತಲಶ್ಶೇರಿಯ ಪೊನ್ನಿಯಮ್‌ ನಲ್ಲಿರುವ ಅವರ ಮನೆಯ ಸಮೀಪ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್‌ ಮತ್ತು ಬಿಜೆಪಿ ಯ 7 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆಯನ್ನು ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪ್ರಕಟಿಸಿದೆ.

ಈ 7 ಕಾರ್ಯಕರ್ತರನ್ನು ಆರೋಪಿಗಳು ಎಂದು ಪರಿಗಣಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎನ್. ವಿನೋದ್ ಬುಧವಾರ ಈ ತೀರ್ಪು ನೀಡಿದ್ದಾರೆ.ಹಾಗೂ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ.

ಪ್ರಕರಣದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಕಾರ್ಯಕರ್ತರಾದ ಸಿ.ಕೆ. ಪ್ರಶಾಂತ್, ಲಿಜೇಶ್ ಆಲಿಯಾಸ್ ಲಿಜು, ಪರಯಕಂಡಿ ವಿನೇಶ್, ಪ್ರಶಾಂತ್ ಆಲಿಯಾಸ್ ಮುತ್ತು, ಕೆ.ಸಿ. ಅನಿಲ್ ಕುಮಾರ್, ಕಿಝಿಕ್ಕಯಿಲ್ ವಿಜಿಲೇಶ್ ಹಾಗೂ ಕೆ. ಮಹೇಶ್‌ರನ್ನು ಆರೋಪಿ ಎಂದು ಪರಿಗಣಿಸಲಾಗಿತ್ತು. ಪ್ರಕರಣದ ಇನ್ನೋರ್ವ ಆರೋಪಿ ವಲಿಯಪರಂಬತ್ ಜ್ಯೋತಿಶ್ ಮೃತಪಟ್ಟಿದ್ದಾನೆ.

ಪ್ರಾಸಿಕ್ಯೂಷನ್ ಪ್ರಕಾರ, 2007 ನವೆಂಬರ್ 6ರಂದು ಬೆಳಗ್ಗೆ 5:45ಕ್ಕೆ ಪರಕ್ಕಂಡಿ ಪವಿತ್ರನ್ ಹಾಲು ತರಲು ಪೊನ್ನಿಯಂನಲ್ಲಿರುವ ತನ್ನ ಮನೆಯಿಂದ ಹೊರಗೆ ಬಂದ ಸಂದರ್ಭ ಬಿಜೆಪಿ ಹಾಗೂ ಆರೆಸ್ಸೆಸ್‌ನ 8 ಮಂದಿ ಕಾರ್ಯಕರ್ತರ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ದಾಳಿಯಿಂದ ತಪ್ಪಿಸಿಕೊಳ್ಳಲು ಪವಿತ್ರನ್ ಸಮೀಪದ ಮನೆಯ ಕಂಪೌಂಡ್‌ನ ಒಳಗೆ ಓಡಿದ್ದರು. ಬೆನ್ನಟ್ಟಿ ಬಂದ ಗುಂಪು ಅವರಿಗೆ ಇರಿದಿತ್ತು. ಗಂಭೀರ ಗಾಯಗೊಂಡಿದ್ದ ಪವಿತ್ರನ್ ಕೋಝಿಕ್ಕೋಡ್‌ನ ಆಸ್ಪತ್ರೆಯೊಂದರಲ್ಲಿ ನವೆಂಬರ್ 10ರಂದು ಮೃತಪಟ್ಟಿದ್ದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group