ಜಿಲ್ಲಾ ಸುದ್ದಿ

ಸಣ್ಣ ಅವಧಿಯ ತಯಾರಿಯಲ್ಲಿ ಇಷ್ಟೊಂದು ರಕ್ತದಾನಿಗಳನ್ನು ಜೀವನದಲ್ಲೇ ಮೊದಲ ಬಾರಿಗೆ ನೋಡುತ್ತಿರುವುದು: ಬಾನು ಪ್ರಕಾಶ್

ಎಸ್.ಡಿ.ಪಿ.ಐ ಕರಾವಳಿಗರಿಂದ ಬೆಂಗಳೂರಿನಲ್ಲಿ ನಡೆದ ರಕ್ತದಾನ ಶಿಬಿರ

ವರದಿಗಾರ (ಮೇ.6): ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದ ಯಾವುದೇ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವಂತಿಲ್ಲ. ಹಾಗಾಗಿ ಬ್ಲಡ್  ಬ್ಯಾಂಕ್ ನಲ್ಲಿ ರಕ್ತದ ಕೊರತೆ ಬಹಳಷ್ಟಿತ್ತು. ಬಹಳಷ್ಟು ರೊಗಿಗಳಿಗೆ ರಕ್ತದ ಅವಶ್ಯಕತೆಯಿತ್ತು. ಇದನ್ನು ಮನಗಂಡು ಕೆಲವೇ ದಿನಗಳ ಮೊದಲು ಈ ಬಗ್ಗೆ ವಿಚಾರಿಸಿದ ಎಸ್.ಡಿ.ಪಿ.ಐ ಕರಾವಳಿಯ ಕಾರ್ಯಕ್ರಮದ ಸಂಯೋಜಕರು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದರು. ಸಣ್ಣ ಅವಧಿಯ ತಯಾರಿಯಲ್ಲಿ ಇಷ್ಟೊಂದು ರಕ್ತದಾನಿಗಳನ್ನು ಮತ್ತು ಅತ್ಯಂತ ಶಿಸ್ತಿನ ಕಾರ್ಯಕ್ರಮವನ್ನು ಜೀವನದಲ್ಲೇ ಮೊದಲ ಬಾರಿಗೆ ನೋಡುತ್ತಿರುವುದು ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ರಕ್ತದಾನ ಶಿಬಿರದ ಕೋ ಆರ್ಡಿನೇಟರ್ ಬಾನು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರಾವಳಿ ಡಿವಿಶನ್ ಸಮಿತಿಯು ‘ಕಾರ್ಮಿಕರ ದಿನಾಚರಣೆ’ ಪ್ರಯುಕ್ತ ಆದಿತ್ಯವಾರ ಬೆಂಗಳೂರಿನ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ಹಮ್ಮಿಕೊಂಡಿದ್ದ “ರಕ್ತದಾನ ಶಿಬಿರ” ಸಮಾರೋಪ ಭಾಷಣದಲ್ಲಿ ರಕ್ತದಾನಿಗಳನ್ನು ಪ್ರಶಂಸಿಸಿ ಮಾತನಾಡುತ್ತಿದ್ದರು.

ಬಾನು ಪ್ರಕಾಶ್ ಮಾತನಾಡುತ್ತಾ, ‘ಸದ್ಯ ಬಹಳಷ್ಟು ರಕ್ತದ ಅವಶ್ಯಕತೆಯಿದೆ. ರಕ್ತವನ್ನು ದಾನ ಮಾಡುವವರು 1 ಯುನಿಟ್ ರಕ್ತ ಸುಮಾರು 3 ರೋಗಿಗಳ ಜೀವನದಲ್ಲಿ ಹೊಸ ಚೈತನ್ಯ ಮೂಡಿಸುತ್ತೆ. ಹಲವು ಜೀವಗಳ ಬಾಳದಲ್ಲಿ ನಗುವನ್ನು ತುಂಬುತ್ತೆ. ರಕ್ತದಾನವು ಶ್ರೇಷ್ಠದಾನ. ಈ ಶಿಬಿರದಲ್ಲಿ ಯುವಕರೇ ರಕ್ತದಾನ ಮಾಡಲು ಮುಂದೆ ಬಂದಿರುವುದು ಸಂತೋಷದಾಯಕ ವಿಚಾರ’ ಎಂದು ಹೇಳಿದ್ದಾರೆ.

ಮುಖ್ಯ ಅಥಿತಿಯಾಗಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರಾವಳಿ ಡಿವಿಶನ್ ಕಾರ್ಯದರ್ಶಿ ಹಾಜಿ ಹುಸೈನ್ ಸಿರಾಜ್ ಆತೂರು, ‘ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಮಾಜಕ್ಕೆ ನನ್ನಿಂದ ಏನಾದರೂ ನೀಡಬೇಕೆಂಬ ಯುವಕರ ಸಾಮಾಜಿಕ ಚಿಂತನೆಯು ಈ ದೇಶದ ಬದಲಾವಣೆಯ ಮುನ್ನುಡಿಯಾಗಿದೆ. ರಕ್ತದಾನ ಮಾಡಿದವರು ಕೇವಲ ರಕ್ತವನ್ನು ನೀಡಿದ್ದಲ್ಲ, ಬದಲಾಗಿ ಹಲವು ಜೀವಗಳಿಗೆ ಜೀವನ ತುಂಬಿದ್ದಾಗಿರುತ್ತದೆ. ಇಂದು ನಿಮ್ಮೊಳಗಿರುವ ನಿಜವಾದ ಹೀರೋ ವನ್ನು ನಾವು ಕಾಣುತ್ತಿದ್ದೇವೆ. ಇಂತಹ ಚಿಂತನೆಗಳು ಮತ್ತಷ್ಟು ದೇಶದಾದ್ಯಂತ ಸೃಷ್ಟಿಯಾಗಲಿ’ ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಕರಾವಳಿ ಡಿವಿಶನ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಕೇವಲ 2 ದಿನಗಳ ನಮ್ಮ ಕರೆಗೆ ಸಕರಾತ್ಮಕವಾಗಿ ಸ್ಪಂದಿಸಿ ರಕ್ತದ ಅವಶ್ಯಕತೆಗೆ ರಕ್ತದ ಹನಿಗಳನ್ನು ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 100 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ ಎಂದು ಸಂಘಟಕರು ‘ವರದಿಗಾರ’ಕ್ಕೆ ತಿಳಿಸಿದ್ದಾರೆ.

ನಾರಾಯಣ ಹೃದಯಾಲಯದ ವೈಧ್ಯಾದಿಕಾರಿ, ಶಿಬಿರದ ಕ್ಯಾಂಪ್ ಇಂಚಾರ್ಜ್ ರಾಜೇಶ್ ಹಾಗೂ ಸಿಬ್ಬಂದಿಗಳ ಮಾನವೀಯ ಸೇವೆಯನ್ನು ಪುರಸ್ಕರಿಸಿ ಎಸ್.ಡಿ.ಪಿ.ಐ ಸಭೆಯಲ್ಲಿ ಅವರನ್ನು ಅಭಿನಂದಿಸಿದೆ.

ಕಾರ್ಯಕ್ರಮದಲ್ಲಿ ರಿಝ್ವಾನ್ ಕಿನ್ಯ, ಹಾರಿಸ್ ಸುನ್ನತ್ ಕೆರೆ, ರಹೀಮ್ ಸುಳ್ಯ, ಸಯ್ಯದ್ ಸುಲ್ತಾನ್, ಅಝರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ರಿಲ್ವಾನ್ ಹುಸೈನ್ ವಳಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group