ಸುತ್ತ-ಮುತ್ತ

ಎಸ್‍ಡಿಪಿಐ ಕಾರ್ಯಕರ್ತ ಅಸ್ಲಂ ಹತ್ಯೆಯಲ್ಲಿ  ಬಿಜೆಪಿಯ ಒತ್ತಡಕ್ಕೆ ಮಣಿದು ಸ್ನೇಹಿತರನ್ನೇ ಆರೋಪಿಯಾಗಿಸಿದ ಪೊಲೀಸರ ನಡೆ ಕಾನೂನು ವ್ಯವಸ್ಥೆಗೆ ಮಾಡಿದ ಅಪಚಾರ: ರಿಯಾಝ್ ಫರಂಗಿಪೇಟೆ

ವರದಿಗಾರ (ಮೇ 4): ಶಿರಸಿಯ ಕಸ್ತೂರಬಾ ನಗರದಲ್ಲಿ ಇತ್ತೀಚೆಗೆ ನಡೆದ ಎಸ್‍ಡಿಪಿಐ ಕಾರ್ಯಕರ್ತ ಅಸ್ಲಂ (23ವರ್ಷ) ಇವರ ಹತ್ಯೆಯು ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅನೀಸ್ ತಹಶೀಲ್ದಾರ್ ಮತ್ತು ಸಂಗಡಿಗರು ನಡೆಸಿರುವುದು ಜಗಜ್ಜಾಹಿರವಾಗಿದ್ದರೂ ಶಿರಸಿಯ ಪೊಲೀಸರು ಅಸ್ಲಂ ರ ಕೊಲೆ ನಡೆದ ದಿವಸ ಜೊತೆಯಲ್ಲಿದ್ದ ತನ್ನ ಆತ್ಮೀಯ ಸ್ನೇಹಿತರಾದ ಫಾರೂಕ್, ಫರ್ಹಾನ್ ಮತ್ತು ಸಲೀಂ ಎಂಬವರು ತನಿಖೆಯ ನೆಪದಲ್ಲಿ ಕರೆಯಿಸಿ ಪೊಲೀಸರು ಅವರನ್ನೇ ಆರೋಪಿಗಳೆಂದು ಚಿತ್ರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದು ಕಾನೂನು ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭಾ ಚುನಾವಣೆಯ ದಿನ ರಾತ್ರಿ  ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘಟನೆಯಲ್ಲಿ ಎಸ್‍ಡಿಪಿಐ ಕಾರ್ಯಕರ್ತ ಅಸ್ಲಂ ಹಲ್ಲೆಗೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಮೃತರಾಗಿರುತ್ತಾರೆ. ಈ ಬಗ್ಗೆ ಮೃತರ ಅಣ್ಣ ನೀಡಿರುವ ದೂರಿನಲ್ಲಿ ಕೊಲೆ ನಡೆದ ದಿನ ಬೆಳಿಗ್ಗಿನಿಂದ ಅಸ್ಲಂನ ಸ್ನೇಹಿತರು ಕಾರಿನಲ್ಲಿ ಜೊತೆಯಾಗಿ ತಿರುಗಾಡುತ್ತಿದ್ದರು ಎಂಬ ಹೇಳಿಕೆಯನ್ನು ನೆಪಮಾಡಿಕೊಂಡು ಪೊಲೀಸರು ಸ್ನೇಹಿತರನ್ನೇ ಆರೋಪಿಗಳಾಗಿ ಚಿತ್ರಿಸಿ ಕೊಲೆಯನ್ನು ಎಸ್‍ಡಿಪಿಐ ಪಕ್ಷದ ತಲೆಗೆ ಕಟ್ಟುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ  ಎಫ್‍ಐಆರ್ ನಲ್ಲಿ ನೇರವಾಗಿ ಉಲ್ಲೇಖಿಸಲ್ಪಟ್ಟಿರುವ ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅನೀಸ್ ತಹಶೀಲ್ದಾರ್‍ನ ವಿಚಾರಣೆಯೂ ನಡೆಸದೆ ಅವನನ್ನು ಕೊಲೆ ಆರೋಪದಿಂದ ರಕ್ಷಿಸುವ ಪ್ರಯತ್ನವನ್ನು ಬಿಜೆಪಿಯ ಮುಖಂಡ ಅನಂತ್ ಕುಮಾರ್ ಹೆಗಡೆಯ ಒತ್ತಡಕ್ಕೆ ಮಣಿದು ಶಿರಸಿಯ ಪೊಲೀಸ್ ಇಲಾಖೆ ಮಾಡುತ್ತಿದೆ. ಒಬ್ಬ ಅಪರಾಧಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಭಾರತದ ಕಾನೂನಿನಲ್ಲಿ ಉಲ್ಲೇಖಿಸಲಾಗಿದ್ದರೂ ಶಿರಸಿಯ ಪೊಲೀಸರು ಇದಕ್ಕೆ ತದ್ವಿರುಧ್ಧವಾಗಿ ನಡೆದು ಕೊಂಡಿರುವುದು ಖಂಡನೀಯ.

ಇದೇ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಅನೀಸ್ ತಹಶೀಲ್ದಾರ್ ನೀಡಿರುವ ಕೊಲೆಯತ್ನದ ಸುಳ್ಳು ಕೇಸಿನ ಆಧಾರದಲ್ಲಿ ಸುಮಾರು ಐದು ಮಂದಿ ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ಒಟ್ಟಾರೆಯಾಗಿ ಒಂದೇ ಸಮಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದ್ವಿಮುಖ ಧೋರಣೆಯನ್ನು ತೋರ್ಪಡಿಸಿ ಸಂಪೂರ್ಣ ಘಟನೆಯನ್ನು ಎಸ್‍ಡಿಪಿಐ ಪಕ್ಷದ ತಲೆಗೆ ಕಟ್ಟುವ ಪ್ರಯತ್ನವನ್ನು ಬಿಜೆಪಿ ಮತ್ತು ಪೊಲೀಸ್ ಇಲಾಖೆ ಜೊತೆಯಾಗಿ ಸೇರಿ ಮಾಡುತ್ತಿದೆ.

ಪೊಲೀಸ್ ಇಲಾಖೆಯ ಕಾನೂನು ದುರುಪಯೋಗ ಮತ್ತು ದೌರ್ಜನ್ಯದ ವಿರುದ್ಧ ಎಸ್‍ಡಿಪಿಐ ರಾಜ್ಯ ಸಮಿತಿಯು ಕಾನೂನು ಹೋರಾಟವನ್ನು ನಡೆಸಲಿದೆ. ಹಾಗೂ ಬಿಜೆಪಿಯ ಮುಂದುವರಿದ ದ್ವೇಷ ರಾಜಕೀಯದ ವಿರುದ್ಧ ನಿರಂತರ ಹೋರಾಟದ ಮೂಲಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಹೋರಾಟವನ್ನು ನಡೆಸಲಿದೆ ಹಾಗೂ ಬಿಜೆಪಿಯ ನೀಚ ರಾಜಕಾರಣದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group