ಜಿಲ್ಲಾ ಸುದ್ದಿ

ಅಸ್ಲಂ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ದ್ವಿಮುಖ ಧೋರಣೆ : ಎಸ್.ಡಿ.ಪಿ.ಐ ಆರೋಪ

ಹಂತಕರನ್ನು ಶೀಘ್ರ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ!

ವರದಿಗಾರ (ಮೆ.03): ಅಸ್ಲಂ ಹತ್ಯೆ ಪ್ರಕರಣದಲ್ಲಿ ಪೊಲೀಸರು ದ್ವಿಮುಖ ಧೋರಣೆ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಆರೋಪಿಸಿದೆ.

ಅವರು ಇಂದು ಶಿರಸಿಯಲ್ಲಿ ಎಸ್.ಡಿ.ಪಿ.ಐ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಎಪ್ರಿಲ್ 23  ರಂದು ಶಿರಸಿಯ ನಗರ ಭಾಗದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘರ್ಷಣೆ ಪ್ರಕರಣದಲ್ಲಿ  ಎಸ್ ಡಿಪಿಐ ಕಾರ್ಯಕರ್ತ ಅಸ್ಲಂ (23 ವರ್ಷ) ಇವರನ್ನು ಉದ್ದೇಶ ಪೂರಕವಾಗಿ ಕೊಲೆ ನಡೆಸಲಾಗಿರುತ್ತದೆ ಎಂದು ಆರೋಪಿಸಲಾಗಿದೆ.

ಈ ಕೊಲೆ ಪ್ರಕರಣದಲ್ಲಿ ಬಿಜೆಪಿ ಅಲ್ಪಸಂಖ್ಯಾತ  ಘಟಕದ  ಉಪಾಧ್ಯಕ್ಷ ಅನೀಸ್ ತಹಶೀಲ್ದಾರ್ ಮತ್ತು ಅವನ ಗೂಂಡಾ ಪಡೆ ನೇರವಾಗಿ ಶಾಮೀಲಾಗಿ ನಂತರ ತನಗಾದ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆಯ ನೆಪದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ವಿಚಾರವು ಸ್ಥಳೀಯ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರಿಗೆ ತಿಳಿದು ಬಂದಿರುತ್ತದೆ. ರಾಜ್ಯಾದ್ಯಂತ ಜನಪರ ರಾಜಕೀಯ ಹೋರಾಟವನ್ನು ನಡೆಸುತ್ತಿರುವ ಎಸ್ಡಿಪಿಐ ಪಕ್ಷವು ಶಿರಸಿ ನಗರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸಲುವಾಗಿ ಬಿಜೆಪಿ ಪಕ್ಷವು ತನ್ನ ಅಲ್ಪಸಂಖ್ಯಾತ ಘಟಕದ ಯುವ ಮೋರ್ಚಾದ ಅಧ್ಯಕ್ಷ ಅನೀಸ್ ತಹಶೀಲ್ದಾರ್ ಎಂಬುವನನ್ನು ಛೂ ಬಿಟ್ಟು ಮಾಡಿಸಿದ ಪೂರ್ವ ನಿಯೋಜಿತ ಕೃತ್ಯ ಇದಾಗಿರುತ್ತದೆ ಎಂದು ಎಸ್ಡಿಪಿಐ ನೇರ ಆರೋಪ ಮಾಡಿದೆ.

ಆದರೆ ಇಂತಹ ಕೃತ್ಯಗಳ ಮೂಲಕ ಎಸ್ಡಿಪಿಐ ಯನ್ನು ಭಯಪಡಿಸಲು ಸಾಧ್ಯವಿಲ್ಲ ಮತ್ತು ಎಸ್ಡಿಪಿಐ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅವರ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಈ ಕೃತ್ಯದ ಆರೋಪಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ನಾಯಕರು ತನಿಖೆಯ ಹಾದಿಯನ್ನು ತಪ್ಪಿಸುತ್ತಿದ್ದಾರೆ. ಅದಕ್ಕೆ ಪ್ರೇರಿತವಾದ ಪೋಲೀಸ್ ಇಲಾಖೆಯು ಎಸ್ಡಿಪಿಐ ಕಾರ್ಯಕರ್ತನ ಗಂಭೀರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಪೋಲೀಸ್ ಇಲಾಖೆಯು ಸ್ಥಳೀಯ ಎಸ್ ಡಿ ಪಿ ಐ ನಾಯಕರನ್ನು  ಹಾಗೂ ಕಾರ್ಯಕರ್ತರನ್ನು ಹಲ್ಲೆ ಪ್ರಕರಣದ ನೆಪವೊಡ್ಡಿ ನಿರಂತರ ಕಿರುಕುಳವನ್ನು ನೀಡುತ್ತಿರುವುದನ್ನು ನೋಡಿದರೆ ಪೊಲೀಸ್ ಇಲಾಖೆಯು ರಾಜಕೀಯ ಪ್ರೇರಿತರಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.ಇತ್ತೀಚಿಗೆ ತನಿಖೆಯ ನೆಪದಲ್ಲಿ ಎಸ್ ಡಿ ಪಿ ಐ ತಾಲೂಕು ಅಧ್ಯಕ್ಷ ಅಸ್ಲಂ ಹಾಗೂ ಜಿಲ್ಲಾ ಕಾರ್ಯದರ್ಶಿ ಶರೀಫ್ ರವರನ್ನು ಶಿರಸಿಯ ಪೋಲೀಸರು ಸಾರ್ವಜನಿಕವಾಗಿ ಶಿರಸಿಯ ಮುಖ್ಯ ಬೀದಿಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುವುದರ ಮೂಲಕ  ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ.ಪೋಲೀಸ್ ಇಲಾಖೆಯ ಈ ದ್ವಿಮುಖ ಧೋರಣೆಯು ಸಂಪೂರ್ಣವಾಗಿ ಕಾನೂನು ವಿರೋಧಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಲ್ಲಿದೆ ಆದ್ದರಿಂದ ಪೋಲೀಸ್ ಇಲಾಖೆಯ ಈ ಕ್ರಮವನ್ನು ಖಂಡಿಸುವುದರ ಮೂಲಕ ನೈಜ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಎಸ್ ಡಿ ಪಿ ಐ ಪಕ್ಷವು ಆಗ್ರಹಿಸುತ್ತದೆ ಒಂದು ವೇಳೆ ಪೋಲೀಸ್ ಇಲಾಖೆಯು ನೈಜ ಆರೋಪಿಗಳನ್ನು ಬಂಧಿಸಲು ವಿಳಂಬ ನೀತಿ ಅನುಸರಿಸಿದಲ್ಲಿ ಅಥವಾ ನಿಷ್ಪಕ್ಷವಾದ ತನಿಖೆಗೆ ಒತ್ತುನೀಡದಿದ್ದಲ್ಲಿ ಎಸ್ಡಿಪಿಐ ಪಕ್ಷವು ಬೃಹತ್  ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳುವುದರೊಂದಿಗೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯರಾದ ಆನಂದ ಮಿತ್ತಬೈಲ್ ಮತ್ತು ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ತೌಫೀಕ್ ಬ್ಯಾರಿಯವರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group