ಜಿಲ್ಲಾ ಸುದ್ದಿ

ಶಿರಸಿ ಹಲ್ಲೆ ಪ್ರಕರಣದ ಆರೋಪಿಗಳು ಅರೆಸ್ಟ್ ; ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕೊಲೆ ಆರೋಪಿಗಳ ಬಂಧನವಿಲ್ಲ : ಪೊಲೀಸರ ನಡೆಯ ವಿರುದ್ಧ ಸ್ಥಳೀಯರ ಆಕ್ರೋಶ !

ವರದಿಗಾರ ಮೇ 2 : ಇತ್ತೀಚೆಗೆ ಶಿರಸಿಯಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಹಲ್ಲೆ ಹಾಗೂ ಅದಕ್ಕೆ ಪ್ರತೀಕಾರವಾಗಿ ನಡೆದಿದ್ದ ಕೊಲೆ ಪ್ರಕರಣಗಳಲ್ಲಿ ಶಿರಸಿ ಪೊಲೀಸರು ಹಲ್ಲೆ ಪ್ರಕರಣದ ಮೂವರು ಆರೋಪಿಗಳನ್ನು ನಿನ್ನೆ ಬಂಧಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದ್ದು, ಇನ್ನಷ್ಟೇ ಪೊಲೀಸರು ಈ ಕುರಿತು ಅಧಿಕೃತ ಮಾಹಿತಿ ನೀಡಬೇಕಾಗಿದೆ. ಆದರೆ ವಿಪರ್ಯಾಸವೆಂಬಂತೆ ಹಲ್ಲೆ ಪ್ರಕರಣಕ್ಕೆ ಪ್ರತೀಕಾರವಾಗಿ ನಡೆದಿದ್ದ ಯುವಕನೊಬ್ಬನ ಕೊಲೆಯಲ್ಲಿ ಶಾಮೀಲಾಗಿರುವರೆಂದು ಆರೋಪಿಸಲಾಗಿರುವ ಬಿಜೆಪಿಯ ಅಲ್ಪ ಸಂಖ್ಯಾತ ಮೋರ್ಚಾದ ನಾಯಕರನ್ನು ಪೊಲೀಸರು ಇನ್ನೂ ಬಂಧಿಸದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಲೋಕಸಭಾ ಚುನಾವಣೆಯ ನಂತರ ಸ್ಥಳೀಯ ಯುವಕರು ಹಾಗೂ ಬಿಜೆಪಿಯ ಕಾರ್ಯಕರ್ತರ ನಡುವೆ ಸ್ವಲ್ಪ ಮಟ್ಟಿನ ಘರ್ಷಣೆಗಳಿಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ಸ್ಥಳೀಯ ಯುವಕ ಅಸ್ಲಂ ಹಾಗೂ  ಕೆಲ ಬಿಜೆಪಿ ಕಾರ್ಯಕತರು ಅದರಲ್ಲೂ  ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳಾಗಿರುವ ಅನೀಸ್ ತಹಶೀಲ್ದಾರ್ ಹಾಗೂ ಸಲ್ಮಾನ್  ಭಾಗಿಯಾಗಿದ್ದರೆಂದು ಸ್ಥಳೀಯರು ಆರೋಪಿಸಿದ್ದರು. ಘರ್ಷಣೆ ನಡೆದ ಮರುದಿನ ಸ್ಥಳೀಯ ಯುವಕ ಅಸ್ಲಂನನ್ನು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಇದೀಗ ಪೊಲೀಸರು ಹಿಂದಿನ ದಿನ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಸಂಶಯಿಸಲಾಗಿರುವ ಮೂವರು ಯುವಕರಾದ ಸಲೀಮ್, ಫಾರೂಕ್ ಹಾಗೂ ಫರ್ಹಾನ್ ರನ್ನು ನಿನ್ನೆ ಬಂಧಿಸಿದ್ದಾರೆಂದು ತಿಳಿದು ಬಂದಿದ್ದು, ಆದರೆ ಮರುದಿನ ನಡೆದ ಅಸ್ಲಂ ಕೊಲೆಯ ಹಿಂದಿರುವ ಆರೋಪಿಗಳೆಂದು ಹೇಳಲಾಗಿರುವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳಾಗಳಾಗಿರುವ ಅನೀಸ್ ತಹಸೀಲ್ದಾರ್ ಹಾಗೂ ಸಲ್ಮಾನ್ ಸೇರಿದಂತೆ ಇರುವ ಬಿಜೆಪಿಯ ಕಾರ್ಯಕರ್ತರ ತಂಡವನ್ನು ಇನ್ನೂ ಬಂಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹಿಂದೆ ಅಲ್ಲಿನ ಸಂಸದ ಅನಂತ್ ಕುಮಾರ್ ಹೆಗಡೆಯ ಕೈವಾಡ ಇದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.  ಪೊಲೀಸರು ಇನ್ನಾದರೂ ಸ್ಥಳಿಯ ವಿಶ್ವಾಸವನ್ನು ಮರಳಿ ಗಳಿಸುವ ಪ್ರಯತ್ನವಾಗಿ ಯಾವುದೇ ಒತ್ತಡಗಳಿಗೆ ತಲೆ ಬಾಗದೆ ಬಿಜೆಪಿಯ ಕೊಲೆ ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸಬೇಕಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group