ರಾಷ್ಟ್ರೀಯ ಸುದ್ದಿ

ಪರಿಹಾರ ಧನವನ್ನು ಅತ್ಯಾಚಾರ ಸಂತ್ರಸ್ತರ ನೆರವಿಗಾಗಿ ಬಳಸುತ್ತೇನೆ: ಬಿಲ್ಕಿಸ್ ಬಾನು

‘ಸುಪ್ರೀಂ ಕೋರ್ಟು ತೀರ್ಪು ಸಂವಿಧಾನದ ಮೇಲಿಟ್ಟಿದ್ದ ನಂಬಿಕೆಯನ್ನು ಹೆಚ್ಚಿಸಿದೆ’

ವರದಿಗಾರ (ಎ.26): ಕಳೆದ 17 ವರ್ಷಗಳಿಂದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ತಾನು ವಿಶ್ವಾಸವಿಟ್ಟಿದ್ದು ಸದ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲಿಟ್ಟಿದ್ದ ತನ್ನ ನಂಬಿಕೆಯನ್ನು ಹೆಚ್ಚಿಸಿದ್ದು, ಪರಿಹಾರ ಧನವನ್ನು ಅತ್ಯಾಚಾರ ಸಂತ್ರಸ್ತರ ನೆರವಿಗಾಗಿ ಬಳಸುತ್ತೇನೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.

2002ರ ಗುಜರಾತ್ ಹಿಂಸಾಚಾರ ಸಂದರ್ಭ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನುಗೆ ಸರಕಾರಿ ಉದ್ಯೋಗ, ವಸತಿ ಮತ್ತು 50 ಲಕ್ಷ ರೂ. ಪರಿಹಾರ ಧನ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರಕಾರಕ್ಕೆ ಆದೇಶಿಸಿದೆ. ಇಲ್ಲಿ ತನಗೆ ದೊರೆತ ಪರಿಹಾರ ಧನದ ಮೊತ್ತ ಮುಖ್ಯವಲ್ಲ. ತಾನು ಅನುಭವಿಸಿದ ಯಾತನೆ ನ್ಯಾಯಾಲಯಕ್ಕೆ ಅರ್ಥವಾಗಿದೆ ಎಂಬುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ತನಗೆ ದೊರೆತಿರುವ ಪರಿಹಾರ ಧನದ ಒಂದು ಭಾಗವನ್ನು ಬಳಸಿಕೊಂಡು ಅತ್ಯಾಚಾರ ಮತ್ತು ಕೋಮುಗಲಭೆ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಲು ಯೋಚಿಸಿದ್ದೇನೆ. ಈ ನಿಧಿಗೆ ಕೋಮುಗಲಭೆಯಲ್ಲಿ ಮೃತಪಟ್ಟ ತನ್ನ ಮೂರು ವರ್ಷದ ಮಗಳು ಸಲೇಹಾರ ಹೆಸರನ್ನು ಇಡಲಾಗುವುದು. “ಮಗಳ ಮೃತದೇಹವೂ ನಮಗೆ ದೊರೆತಿಲ್ಲ. ಅವಳ ಅಂತ್ಯಸಂಸ್ಕಾರ ನಡೆಸಲೂ ನಮ್ಮಿಂದಾಗಲಿಲ್ಲ ಎಂಬ ದುಃಖ ಇಂದಿಗೂ ಬಾಧಿಸುತ್ತಿದೆ. ನ್ಯಾಯಾಲಯದ ತೀರ್ಪಿನಿಂದ ತುಸು ನೆಮ್ಮದಿಯಾಗಿದೆ” ಎಂದು ಹೇಳಿದ್ದಾರೆ.

ಇನ್ನು ಮುಂದೆ ತನ್ನ, ಪತಿಯ ಮತ್ತು ಮಕ್ಕಳ ಜೀವನದ ಬಗ್ಗೆ ಯೋಚಿಸುತ್ತೇನೆ. ಹಿಂಸೆಯ ಸಂತ್ರಸ್ತರ ಪ್ರಕರಣದಲ್ಲಿ ಹೋರಾಟ ನಡೆಸುವ ಉದ್ದೇಶದಿಂದ ಮಗಳು ವಕೀಲೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಅವಳ ನಿರ್ಧಾರಕ್ಕೆ ನಮ್ಮ ಸಮ್ಮತಿಯಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group