ರಾಷ್ಟ್ರೀಯ ಸುದ್ದಿ

ಬಿಲ್ಕೀಸ್ ಬಾನುಗೆ ಪರಿಹಾರ ನೀಡುವಂತೆ ಸುಪ್ರೀಂ ಸೂಚನೆಯು ಕೋಮು ಉಗ್ರರಿಗೆ ಸುಪ್ರೀಂಕೋರ್ಟ್ ನೀಡಿದ ಕಪಾಳಮೋಕ್ಷವಾಗಿದೆ: ಎಸ್‍ಡಿಪಿಐ

ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ ಎಸ್‍ಡಿಪಿಐ

ವರದಿಗಾರ (ಎ.25): 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ 22 ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕೀಸ್ ಬಾನು ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಸ್ವಾಗತಿಸಿದ್ದು, ಈ ಆದೇಶವು ಕೋಮು ಉಗ್ರರಿಗೆ ಸುಪ್ರೀಂಕೋರ್ಟ್ ನೀಡಿದ ಕಪಾಳಮೋಕ್ಷವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಹೇಳಿಕೆ ಬಿಡುಗಡೆ ಮಾಡಿದ್ದು, 17 ವರ್ಷಗಳ ಸುದೀರ್ಘ ಕಾಲ ಮಾನಸಿಕ ನೋವು ಅನುಭವಿಸಿದ ಬಿಲ್ಕೀಸ್ ಬಾನು ಅವರಿಗೆ ಕೊನೆಗೂ ಸುಪ್ರೀಂಕೋರ್ಟ್ ಸಾಂತ್ವನ ಹೇಳಿ ತೀರ್ಪು ನೀಡಿದ್ದು, ಕೋಮು ಉಗ್ರರಿಗೆ ಸುಪ್ರೀಂಕೋರ್ಟ್ ಈ ತೀರ್ಪಿನ ಮೂಲಕ ಕಪಾಳಮೋಕ್ಷ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ದೇಶದಲ್ಲಿ ನೆಲೆಸಿರುವ ಇತರ ಸಮುದಾಯಗಳಿಗೆ ಹಾನಿ ಮಾಡಲು ಯಾರಿಗೂ ಅವಕಾಶವಿಲ್ಲ. ಎಲ್ಲ ಜನರಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ತನ್ನ ಆಡಳಿತದಲ್ಲಿ ಈ ಘನಘೋರ ಹಿಂಸಾಚಾರ ನಡೆದಿರುವುದಕ್ಕೆ ಗುಜರಾತ್‍ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಜವಾಬ್ದಾರಿ ಹೊರಬೇಕು ಎಂದು ಶಾಫಿ ಒತ್ತಾಯಿಸಿದ್ದಾರೆ.

ತಮ್ಮ ವಿರುದ್ಧದ ಪ್ರಕರಣದಲ್ಲಿ ಹೋರಾಡಿದ ಬಿಲ್ಕೀಸ್ ಬಾನು ಅವರು ಇಡೀ ಭಾರತೀಯರ ಗೌರವಕ್ಕೆ ಅರ್ಹರಾಗಿದ್ದಾರೆ. ಮೋದಿ ಅವರು 21 ವರ್ಷಗಳ ಹಿಂದೆ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಗರ್ಭಿಣಿ ಬಿಲ್ಕಿಸ್ ಬಾನು ಅವರ ಮೇಲೆ ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಲಭೆಕೋರರು ಸಾಮೂಹಿಕ ಅತ್ಯಾಚಾರವೆಸಗಿದ್ದರು ಮತ್ತು ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದರು. ನರೇಂದ್ರ ಮೋದಿ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಮತ್ತು ನಂತರ ಪ್ರಧಾನಿಯಾದಾಗ ಅತ್ಯಂತ ಪ್ರಬಲ ಮತ್ತು ಕುಖ್ಯಾತ ಆಡಳಿತವನ್ನು ಎದುರು ಹಾಕಿಕೊಂಡು ಈ ಪ್ರಕರಣದಲ್ಲಿ ಹೋರಾಡಲು ಬಿಲ್ಕೀಸ್ ಬಾನು ಎಷ್ಟು ಕಷ್ಟಪಟ್ಟಿರಬಹುದು ?. 2002ರಲ್ಲಿ ಗುಜರಾತ್‍ನಲ್ಲಿ ನಡೆದ ಘಟನೆಗೆ ಮೋದಿ ಜವಾಬ್ದಾರಿ ಹೊರಲಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದುವರೆಗೆ ಮೋದಿ ಘಟನೆಯನ್ನು ಬಹಳ ನಾಜೂಕಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಹೋರಾಟ ಮಾಡುವ ಜನರು ಮತ್ತು ವ್ಯಕ್ತಿಯ ಸಂವಿಧಾನಾತ್ಮಕ ಹಕ್ಕುಗಳನ್ನು ಈ ತೀರ್ಪು ಎತ್ತಿಹಿಡಿದಿದೆ.

ಆದಾಗ್ಯೂ, ಪರಿಹಾರ, ಸೇವೆ ಮತ್ತು ಮನೆ ಈ ಪ್ರಕರಣದ ಬಲಿಪಶುಗಳಿಗೆ ಪ್ರೋತ್ಸಾಹ ನೀಡುತ್ತದೆ. ಕೆಚ್ಚೆದೆ ಮತ್ತು ದೃಢ ನಿರ್ಧಾರದೊಂದಿಗೆ 17 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಬಿಲ್ಕೀಸ್ ಬಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿರುವ ಅವರು, ಬಿಲ್ಕೀಸ್ ಬಾನು ಅವರ ಹೋರಾಟದಿಂದ ಕೊನೆಗೂ ಸತ್ಯ ಹೊರಬಂದಿದೆ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿದ್ದಾಗ ಮಾತ್ರ ಇಂತಹ ತೀರ್ಪುಗಳು ಬರಲು ಸಾಧ್ಯ. ಭಾರತೀಯ ನಾಗರಿಕ ಎಂಬ ನೆಲೆಯಲ್ಲಿ ನಾವು ಸ್ವತಂತ್ರ ನ್ಯಾಯಾಂಗವನ್ನು ಕಾಪಾಡಬೇಕಾದುದು ನಮ್ಮ ಕರ್ತವ್ಯ ಎಂದು ಶಾಫಿ ಹೇಳಿದ್ದಾರೆ.

ಬಿಲ್ಕೀಸ್ ಬಾನು ಅವರಿಗೆ ನೀಡಿರುವ ಪರಿಹಾರ ತೀರಾ ಅತ್ಯಲ್ಪ. ಬಿಜೆಪಿ ಪಕ್ಷದ ನಿಧಿಯಿಂದ ಅಥವಾ ಕರ್ತವ್ಯ ಲೋಪವೆಸಗಿ ಶಿಕ್ಷೆಗೆ ಗುರಿಯಾಗಿರುವ ಅಧಿಕಾರಿಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡಿ ಬಿಲ್ಕೀಸ್ ಅವರಿಗೆ ನೀಡಬೇಕಿತ್ತು. ಈ ಪ್ರಕರಣದಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿರುವುದರಿಂದ; ಸಂಬಂಧಪಟ್ಟ ಅಧಿಕಾರಿಗಳನ್ನು ನಿರ್ವೀರ್ಯಗೊಳಿಸಬೇಕು ಮತ್ತು ಅವರಿಗೆ ಪಿಂಚಣಿ ನಿರಾಕರಿಸಬೇಕು ಎಂದು ಮುಹಮ್ಮದ್ ಶಾಫಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group