ರಾಜ್ಯ ಸುದ್ದಿ

ಅಲ್ಪಸಂಖ್ಯಾತರ ನಿರ್ದೇಶನಾಲಯದ ರಾಜ್ಯ ಕಚೇರಿಯಲ್ಲಿ ಅಧಿಕಾರಿಗಳ ದರ್ಪ!

ಪತ್ರಕರ್ತನ ಮೇಲೆ ಹಲ್ಲೆಗೆ ಮುಂದಾದ ಅಧಿಕಾರಿ

ವರದಿಗಾರ (ಎ.25): ಬೆಂಗಳೂರಿನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ರಾಜ್ಯ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳ ದರ್ಪದಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಮಾಹಿತಿಗಾಗಿ ಹೋದ ಸಂದರ್ಭ ಅಧಿಕಾರಿಗಳ ದರ್ಪದ ಮಾತುಗಳು ಮತ್ತು ಸೌಜನ್ಯವೇ ಇಲ್ಲದ ಅವರ ವರ್ತನೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮವನ್ನು ಬೀಳುತ್ತಿರುವುದು ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಿಸುವಲ್ಲಿ ವಿಫಲವಾಗಿದ್ದಾರೆ.

ಬಡ ಕುಟುಂಬದವರು ಮಾತ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಬರುವ ವಿವಿಧ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುವುದನ್ನು ತಿಳಿದಿರುವ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳ ಬಡತನವನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಎಪ್ರಿಲ್ 25ರಂದು ಮದ್ಯಾಹ್ನ ಪತ್ರಕರ್ತರೊಬ್ಬರು ತನ್ನ ರಕ್ತ ಸಂಬಂಧಿಯ ಕಾಲೇಜು ಸ್ಕಾಲರ್ ಶಿಫ್ ಬಗ್ಗೆ ಮಾಹಿತಿಯನ್ನು ಪಡೆಯಲು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ರಾಜ್ಯ ಕಚೇರಿಗೆ ಭೇಟಿ ನೀಡಿದ್ದರು. ಕೇಳಿದಂತಹ ಮಾಹಿತಿಗೆ ಸರಿಯಾದ ಮಾಹಿತಿ ಸಿಗದೇ ಇದ್ದಾಗ ಆ ಬಗ್ಗೆ ವಿಚಾರಿಸಲು ಪ್ರಯತ್ನಿಸಿದ ಸಂದರ್ಭ ಅಧಿಕಾರಿಗಳು ಪತ್ರಕರ್ತನೊಂದಿಗೆ ತಮ್ಮ ರೌದ್ರಾವತಾರ ತೋರ್ಪಡಿಸುತ್ತಾ, ‘ನಿನ್ನಂತಹಾ ಎಷ್ಟೋ ಜನರನ್ನು ನಾನು ನೋಡಿದ್ದೇನೆ. ನಿನ್ನಿಂದ ಏನು ಮಾಡಲು ಸಾಧ್ಯ?. ಇಲ್ಲ ಮಾಹಿತಿ ಕೊಡಲು ಸಾಧ್ಯವೇ ಇಲ್ಲ. ಏನು ಮಾಡ್ತೀಯಾ… ನಾನು ನೋಡ್ತೇನೆ’.  ‘ಇದು ಊಟದ ಸಮಯ. ಈಗ ನೀಡಲು ಸಾಧ್ಯವೇ ಇಲ್ಲ.’ ಎಂದು ದರ್ಪ ತೋರಿಸುತ್ತಾರೆ.

ಮಾಹಿತಿ ಬಗ್ಗೆ ವಿಚಾರಣೆಯು ಅರ್ಧದಲ್ಲಿದ್ದ ಕಾರಣ ‘ಸರ್, ಕೇವಲ ಒಂದು ಮಾಹಿತಿ ಪೂರ್ತಿಯಾಗಿ ನೀಡಿ, ನೀವು ಹೇಳುತ್ತಿರುವ ರೀತಿ ಸರಿಯಾಗಿಲ್ಲ’ ಎಂದು ಪತ್ರಕರ್ತನು ನಯವಾಗಿ ಹೇಳಿದ ಸಂದರ್ಭ ‘ನನಗೆ ಪಾಠ ಮಾಡಲು ನೀನು ಬರಬೇಡ. ನನಗೆ ಎಲ್ಲವೂ ಗೊತ್ತಿದೆ’  ಎಂಬಂತಹ ದರ್ಪಗಳ ಮಾತುಗಳಿಂದ ಪತ್ರಕರ್ತನ ಮೇಲೆ ಹಲ್ಲೆಗೆ ಮುಂದಾಗುತ್ತಾರೆ.  ಈ ಸಂದರ್ಭ ಸಿಬ್ಬಂದಿಗಳು ಅಧಿಕಾರಿಯನ್ನು ಹಲ್ಲೆ ಮಾಡದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಒಬ್ಬ ಮೇಲಧಿಕಾರಿಯ ವರ್ತನೆಯೇ ಹೀಗಾದಲ್ಲಿ ಅಲ್ಲಿರುವ ಸಿಬ್ಬಂದಿಗಳು ಇನ್ನು ಯಾವ ಮಟ್ಟದಲ್ಲಿ ಅಲ್ಲಿಗೆ ಮಾಹಿತಿಗಾಗಿ ಬರುವ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸಬಹುದು ಎಂಬುವುದನ್ನು ನಾವು ಊಹಿಸಬಹುದಾಗಿದೆ.

ಇಂತಹ ಸೌಜನ್ಯ, ನಿಷ್ಠಾವಂತಿಕೆ, ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳಿಂದ ಅಲ್ಪಸಂಖ್ಯಾತ ಇಲಾಖೆಗೆ ಜನತೆ ಛೀ ಮಾರಿ ಹಾಕುವುದರಲ್ಲಿ ಸಂಶಯವೇ ಇಲ್ಲ. ಇಂತಹ ವರ್ತನೆಯಿಂದ ದೂರ ದೂರದ ಊರುಗಳಿಂದ ಹಲವಾರು ಕನಸು, ಆಕಾಂಕ್ಷೆಗಳೊಂದಿಗೆ ಬರುವ ಅದೆಷ್ಟೋ ವಿದ್ಯಾರ್ಥಿಗಳು ಬೇಸತ್ತು ಹೋಗಿರಬಹುದು.  ಇವರನ್ನು ಕೇಳುವವರು ಯಾರೂ ಇಲ್ಲವೇ? ಇವರ ದರ್ಪಗಳಿಗೆ ಕೊನೆಯೇ ಇಲ್ಲವೇ? ಇವರ ಜೇಬಿನಿಂದ ವಿದ್ಯಾರ್ಥಿಗಳಿಗೆ ಸವಲತ್ತು ನೀಡಲಾಗುತ್ತಿದೆಯೇ? ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಬೇಕಾಗಿದೆ. ವಿದ್ಯಾರ್ಥಿಗಳ ಬಡತನವನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಸೌಜನ್ಯ ರಹಿತ ಅಧಿಕಾರಿಗಳ ವಿರುದ್ಧ ಸರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಂಬುವುದು ಇವರ ವರ್ತನೆಗಳಿಂದ ರೋಸಿ ಹೋದಂತಹ ವಿದ್ಯಾರ್ಥಿಗಳ ಒಕ್ಕೊರಳ ಬೇಡಿಕೆಯಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group