ರಾಷ್ಟ್ರೀಯ ಸುದ್ದಿ

ಸ್ವತಃ ಬಿಜೆಪಿಯೇ ಗೋ ಹತ್ಯೆ ನಡೆಸಿದೆ: ಕೇಂದ್ರ ಸಚಿವ ವಿಜಯ್ ಸಾಂಪಲಾ ಆಕ್ರೋಶ!

ಹೆಸರಿನಲ್ಲಿ ‘ಚೌಕೀದಾರ್’ ಸೇರಿಸಿದ್ದನ್ನೂ ತೆಗೆದು ಹಾಕಿದ ಕೇಂದ್ರ ಸಚಿವ

ವರದಿಗಾರ (ಎ.24): ಸ್ವತಃ ಬಿಜೆಪಿಯೇ ಗೋಹತ್ಯೆ ಮಾಡಿದ್ದು ನನಗೆ ತುಂಬಾನೇ ದುಃಖವಾಗಿದೆ ಎಂದು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ರಾಜ್ಯಖಾತೆ ಸಚಿವ ವಿಜಯ್ ಸಾಂಪಲಾ ಹೇಳಿದ್ದಾರೆ. ವಿಜಯ್ ಸಾಂಪಲಾ ಹೇಳಿಕೆಯು ಬಿಜೆಪಿಯ ನೈಜತೆಯನ್ನು ಬಯಲಿಗೆಳೆದಿದೆ. ಇತ್ತೀಚೆಗೆ ಚೌಕೀದಾರ್ ಟ್ರೆಂಡ್ ನಿಂದ ತಮ್ಮ ಹೆಸರಿನಲ್ಲೂ ‘ಚೌಕೀದಾರ್’ ಎಂಬುವುದನ್ನು ಸೇರ್ಪಡಿಸಿದ್ದ ವಿಜಯ್ ಸಾಂಪಲಾ ಅದನ್ನು ಮುಲಾಜಿಲ್ಲದೆ ತೆಗೆದು ಹಾಕಿದ್ದಾರೆ.

ಪಂಜಾಬ್‌ನ ಹೋಷಿಯಾರ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಕೇಂದ್ರ ಸಚಿವ ವಿಜಯ್ ಸಾಂಪಲಾ ಸಿಟ್ಟುಗೊಂಡು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಹೇಳಿರುವುದರಲ್ಲಿ ವಾಸ್ತವಿದೆ.

ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹೋಷಿಯಾರ್‌ಪುರ್ ಕ್ಷೇತ್ರದಲ್ಲಿ ಫಗ್ವಾರಾ ಶಾಸಕ ಸೋಮ್ ಪ್ರಕಾಶ್‌ಗೆ ಟಿಕೆಟ್ ನೀಡಲಾಗಿದೆ. ಪಕ್ಷಕ್ಕೆ ಹೆಸರನ್ನು ತರುವ ಕೆಲಸ ಮಾಡಿರುವ ನನಗೆನೇ ಟಿಕೆಟ್ ನಿರಾಕರಿಸಿರುವುದು ಯಾಕಾಗಿ ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ತಮ್ಮ ಬೇಸರವನ್ನು ತೋರ್ಪಡಿಸಿಕೊಂಡಿದ್ದಾರೆ.

ತನ್ನ ಟ್ವೀಟ್ ನಲ್ಲಿ, ‘ನಾನು ಏನಾದರೂ ತಪ್ಪು ಮಾಡಿದ್ದರೆ ಹೇಳಬಹುದಿತ್ತು, ನಾನು ಮಾಡಿದ ತಪ್ಪು ಎಂದರೆ, ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ನನ್ನ ನಡವಳಿಕೆಯ ಬಗ್ಗೆ ಯಾರೂ ಬೆರಳು ತೋರಿಸುವಂತೆ ಮಾಡಿಲ್ಲ. ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದೇನೆ. ರೈಲು ಸಂಚಾರ ಮಾಡಿಸಿದ್ದೇನೆ. ರಸ್ತೆ ನಿರ್ಮಿಸಿದ್ದೇನೆ. ಇದೇ ನಾನು ಮಾಡಿರುವ ತಪ್ಪು ಎಂದಾದರೆ ಇಂತಹ ತಪ್ಪುಗಳನ್ನು ಮುಂದೆ ಯಾರೂ ಮಾಡಬೇಡಿ ಎಂದು ನಾನು ಮುಂದಿನ ಜನಾಂಗಕ್ಕೆ ಕರೆ ನೀಡುತ್ತೇನೆ’ ಎಂದು ಹೇಳುವುದರ ಮೂಲಕ ಬಿಜೆಪಿಯಲ್ಲಿ ಅಭಿವೃದ್ಧಿಗೆ ಪ್ರಾಶಸ್ತ್ಯವಿಲ್ಲ ಎಂಬುವುದನ್ನು ಪರೋಕ್ಷವಾಗಿ ದೇಶದ ಜನತೆಗೆ ಅವರು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group