
ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದ ಅಧಿಕಾರಿಗೆ ದೇಶವ್ಯಾಪಿ ಅಭಿನಂದನೆ
ವರದಿಗಾರ (ಎ.23): ಒಡಿಶಾದ ಸಂಬಲ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದ ಚುನಾವಣಾ ಆಯೋಗದ ವೀಕ್ಷಕ, ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಕರ್ನಾಟಕ್ಕೆ ಕಳುಹಿಸಲಾಗಿದೆ.
ಎಸ್ಪಿಜಿ ಭದ್ರತೆ ಇರುವ ವ್ಯಕ್ತಿಗಳನ್ನು ತಪಾಸಣೆ ಮಾಡುವಂತಿಲ್ಲ ಎಂಬ ಆಯೋಗದ ನಿಯಮವನ್ನು ಮೊಹ್ಸಿನ್
ಉಲ್ಲಂಘಿಸಿದ್ದಾರೆ ಎಂಬ ನೆಪವನ್ನು ನೀಡಿ ಅವರನ್ನು ಕಳೆದ ವಾರ ಆಯೋಗವು ಚುನಾವಣಾ ಕರ್ತವ್ಯದಿಂದ ಅಮಾನತು ಮಾಡಿದೆ.
ಮೋದಿ ಅವರ ಬೆಂಗಾವಲು ವಾಹನದ ತಪಾಸಣೆ ಮಾಡಲು ಮೊಹ್ಸಿನ್ ಮುಂದಾಗಿದ್ದರು. ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದಕ್ಕಾಗಿ ಅವರನ್ನು ಸಂಬಲ್ಪುರ ಮುಖ್ಯ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ಕರ್ನಾಟಕ ಮುಖ್ಯ ಚುನಾವಣಾ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಇವರು 1996ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ತೋರ್ಪಡಿಸಿರುವ ಇವರನ್ನು ದೇಶವ್ಯಾಪಿ ಜನತೆ ಅಭಿನಂದಿಸಿದ್ದಾರೆ.
