ರಾಷ್ಟ್ರೀಯ ಸುದ್ದಿ

ಶ್ರೀಲಂಕಾ ಬಾಂಬ್ ಸ್ಪೋಟವನ್ನು ಕಾಂಗ್ರೆಸ್ ವಿರುದ್ಧದ ಆರೋಪಕ್ಕೆ ಬಳಸಿದ ಮೋದಿ!

ವರದಿಗಾರ (ಎ.22):  ಈಸ್ಟರ್​ ಸಂಭ್ರಮದಲ್ಲಿದ್ದ ಶ್ರೀಲಂಕಾ ಜನತೆಗೆ ಅಕ್ಷರಶ ಕರಾಳ ದಿನವಾಗಿದ್ದು, ದೇವರ ಪ್ರಾರ್ಥನೆಯಲ್ಲಿದ್ದ ಜನರ ಮೇಲೆ ಭಯೋತ್ಪಾದಕರು ನಡೆಸಿರುವ ಬಾಂಬ್ ದಾಳಿಯಿಂದ ಚರ್ಚ್​ಗಳು, ಐಷಾರಾಮಿ ಹೋಟೆಲ್​ಗಳು ರಕ್ತಸಿಕ್ತವಾಗಿವೆ. ಕ್ರಿಶ್ಚಿಯನ್​ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಗೆ ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸಿದೆ. ಬಾಂಬ್​ ದಾಳಿಯಿಂದಾಗಿ ಪುಟ್ಟ ದ್ವೀಪರಾಷ್ಟ್ರ ಬೆಚ್ಚಿದ್ದು, ಎಲ್ಲೆಡೆ ಅನುಕಂಪದ ಅಲೆ ಕೇಳಿ ಬಂದಿದೆ. ವಿಪರ್ಯಾಸವೆಂದರೆ ಇದೇ ಘಟನೆಯನ್ನು ಬಳಸಿರುವ ಪ್ರಧಾನಿ ಮೋದಿಯು ತಮ್ಮ ಚುನಾವಣಾ ಅಸ್ತಿತ್ವಕ್ಕಾಗಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿರುವುದು ಇವರ ಬಗ್ಗೆ ಜನತೆಗಿದ್ದ ವಿಶ್ವಾಸವನ್ನು ಮತ್ತಷ್ಟು ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರದ ದಿನ್​ದೊರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಶ್ರೀಲಂಕಾ ಸ್ಪೋಟ ಘಟನೆಯನ್ನು  ಉಲ್ಲೇಖಿಸಿದ ಮೋದಿ, ಇಂತಹದೇ ಪರಿಸ್ಥಿತಿ 2014ಕ್ಕೂ ಮುಂಚೆ ಭಾರತದಲ್ಲಿತ್ತು ಎಂದು ಹೇಳಿದ್ದಾರೆ. ‘ಶ್ರೀಲಂಕಾದಲ್ಲಿ ನಿನ್ನೆ ಬಾಂಬ್​ ದಾಳಿ ನಡೆದಿದೆ. ಈಸ್ಟರ್​ ಹಬ್ಬದ ಸಂಭ್ರಮದಲ್ಲಿ ನಡೆದ ದಾಳಿಯಲ್ಲಿ ನೂರಾರು ಜನರು ಪ್ರಾಣ ಬಿಟ್ಟಿದ್ದಾರೆ. ದೇವರ ಪ್ರಾರ್ಥನೆ ಮಾಡುತ್ತಿದ್ದ  ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ನೋಡಿದರೆ, ನಾವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಪರಿಸ್ಥಿತಿ ನೆನಪಾಗುತ್ತಿದೆ” ಎಂದಿದ್ದಾರೆ.

‘2014ರ ಹಿಂದೆ ಭಾರತದಲ್ಲಿ ಎಂತಹ ಪರಿಸ್ಥಿತಿ ಇತ್ತು. ದೇಶದ ಯಾವುದೋ ಮೂಲೆಯಲ್ಲಿ ಇದೇ ರೀತಿಯ ಬಾಂಬ್​ ಸ್ಪೋಟಗಳು ಆಗುತ್ತಿದ್ದವು. ಪಾಕಿಸ್ತಾನದ ಉಗ್ರರ ದಾಳಿಗೆ ಅವರು ಅಸಮರ್ಪಕ ಉತ್ತರ ನೀಡಿದ್ದರು. ಅಲ್ಲದೇ ಅವರು ಮೊಸಳೆ ಕಣ್ಣೀರು ಸುರಿಸಿದರು. ಸಂತಾಪ ಸಭೆಗಳನ್ನು ನಡೆಸಿ ಮರುಗಿದರು. ಈ ಪರಿಸ್ಥಿತಿ 2014ರ ಬಳಿಕ ಬದಲಾಯಿತು’ ಎಂದರು.

ಚೌಕಿದಾರ್​ ಕೈಗೆ ಅಧಿಕಾರ ನೀಡಿದ ಬಳಿಕ ಭಯೋತ್ಪಾದಕರ ಸೃಷ್ಟಿಸುತ್ತಿದ್ದ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತ ನೀಡಿದೆವು. ಇದರ ಫಲವಾಗಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಯೋತ್ಪಾದನೆಗೆ ನಿರ್ಬಂಧ ವಿಧಿಸಲಾಯಿತು ಎಂದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group