ರಾಜ್ಯ ಸುದ್ದಿ

ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದಿದ್ದ ಮೋದಿ ಬಿಜೆಪಿಯನ್ನೇ ಮುಕ್ತ ಮಾಡಿದ್ದಾರೆ: ಅನ್ಸಾಫ್ ಬನ್ಸಾಲೆ

‘ಬಿಜೆಪಿಯನ್ನು ಬಿಎಂಪಿ ಮಾಡಿದ ಹೆಗ್ಗಳಿಕೆ ಮಾತ್ರ ಮೋದಿ ಸಲ್ಲುತ್ತದೆ’

ವರದಿಗಾರ (ಎ.22):  ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದಿದ್ದ ಮೋದಿಯು ಸದ್ಯ ಭಾರತೀಯ ಜನತಾ ಪಾರ್ಟಿ-ಬಿಜೆಪಿಯನ್ನೇ ಮುಕ್ತ ಮಾಡಿದ್ದಾರೆ ಎಂದು ಕೆಪಿಸಿಸಿ ಸಕಲೇಶಪುರ ವಿಧಾನ ಸಭಾ ಕ್ಷೇತ್ರ ಸಂಘಟಕ ಅನ್ಸಾಫ್ ಬನ್ಸಾಲೆ ಹೇಳಿದ್ದಾರೆ.

ಈ ಬಗ್ಗೆ ‘ವರದಿಗಾರ’ದೊಂದಿಗೆ ಮಾತನಾಡಿದ ಅವರು, ಸದ್ದಿಲ್ಲದೇ ನರೇಂದ್ರ ಮೋದಿಯು ಬಿಜೆಪಿಯನ್ನು ಭಾರತೀಯ ಮೋದಿ ಪಾರ್ಟಿ (BMP)ಯನ್ನಾಗಿ ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅವರ ರಾಜಕೀಯ ಗುರು ಆಡ್ವಾಣಿಯನ್ನು ಪರದೆಯ ಹಿಂದೆ ತಳ್ಳುವುದರ ಮೂಲಕ ಪ್ರಥಮವಾಗಿ ಯಶಸ್ಸು ಕಂಡಿರುವ ಮೋದಿಯು ತಳ ಮಟ್ಟದ ಕಾರ್ಯಕರ್ತರನ್ನೆಲ್ಲ ಮೋಡಿಯ ಮಾತಿನಿಂದ ಹಾಗೂ ಕೋಟ್ಯಂತರ ರೂಪಾಯಿ ಪ್ರಚಾರಕ್ಕೆ ಸುರಿದು ಮೋದಿ ಮೋದಿ ಎಂದು ತನ್ನ ಹೆಸರನ್ನು ಪ್ರಚಾರ ಮಾಡಿಸುತ್ತಾ ಬಿಜೆಪಿ ಪಕ್ಷದ ಹೆಸರು ಅಷ್ಟೊಂದು ಬಳಕೆ ಆಗದಂತೆ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಅನ್ಸಾಫ್ ಆರೋಪಿಸಿದ್ದಾರೆ.

ಇದನ್ನೆಲ್ಲಾ ಒಂದು ವಿಭಾಗೀಯ ಬಿಜೆಪಿಯ ನೈಜ ನಾಯಕರುಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮೋದಿಯು ವಿರೋಧ ಪಕ್ಷಗಳಿಗಿಂತಲೂ ಸ್ವ-ಪಕ್ಷದವರಿಂದಲೇ ದೂರವಾಗುವ ಕಾಲ ಬರುವುದರಲ್ಲಿ ಸಂಶಯವಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಈ ಸಲ ಎಲ್ಲಾದರೂ ಅಪ್ಪಿತಪ್ಪಿ ಕೇಂದ್ರದಲ್ಲಿ ಅಧಿಕಾರದ ಅವಕಾಶ ಬಂದರೆ ಮೋದಿಯನ್ನು ಪ್ರಧಾನಿ ಆಗಲು  ಬಿಜೆಪಿಯ ಉಳಿದ ನಾಯಕರು ಅಷ್ಟು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂಬುವುದು ಗಡ್ಕರಿಯವರ ಇತ್ತೀಚೆಗಿನ ಕೆಲವೊಂದು ನಡೆಗಳು ಹಾಗೂ ಬಿಜೆಪಿಯ ಕೆಲವು ನಾಯಕರುಗಳ ವ್ಯಕ್ತಿ ಪೂಜೆ ಸಲ್ಲ ಎಂಬ ಹೇಳಿಕೆಗಳು  ಮೋದಿಯನ್ನು ಮತ್ತೆ ಪ್ರಧಾನಿಯಾಗಲು ಬಿಡಲಾರೆವು ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದವರು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group