ರಾಷ್ಟ್ರೀಯ ಸುದ್ದಿ

ಮುಂದಿನ ಪ್ರಧಾನಿ: ವಿವಿಧ ರಾಜ್ಯಗಳಲ್ಲಿ ಮೋದಿಯನ್ನೇ ಹಿಂದಿಕ್ಕಿದ ರಾಹುಲ್!

ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ವರದಿ

ವರದಿಗಾರ (ಎ.22): ಮುಂದಿನ ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಧ್ಯೆ ನೇರ ಸ್ಪರ್ಧೆ ನಡೆದರೆ ಕೇರಳ, ತಮಿಳುನಾಡು, ಪಂಜಾಬ್ ಮತ್ತು ಆಂಧ್ರ ಪ್ರದೇಶದಲ್ಲಿ ಮೋದಿಯನ್ನು ರಾಹುಲ್ ಹಿಂದಿಕ್ಕಿದ್ದು. ರಾಹುಲ್ ಗಾಂಧಿಗೆ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ವರದಿ ತಿಳಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಇದೇ ಎಪ್ರಿಲ್ 19ರಂದು ನಡೆಸಿದ ಸಮೀಕ್ಷೆಯಲ್ಲಿ, ಒಂದು ವೇಳೆ ನಿಮಗೆ ಪ್ರಧಾನಿಯನ್ನು ನೇರವಾಗಿ ಚುನಾಯಿಸುವ ಆಯ್ಕೆ ದೊರೆತರೆ ಮೋದಿ ಹಾಗೂ ರಾಹುಲ್ ಮಧ್ಯೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಮತದಾರರನ್ನು ಪ್ರಶ್ನಿಸಲಾಗಿತ್ತು. ಕೇರಳದ 64.96 ಶೇ. ಮತದಾರರು ರಾಹುಲ್‌ರನ್ನು ಬೆಂಬಲಿಸಿದರೆ ಮೋದಿಯನ್ನು ಕೇವಲ ಶೇ.23.97 ಮತದಾರರು ಬೆಂಬಲಿಸಿದ್ದಾರೆ. ತಮಿಳುನಾಡಿನಲ್ಲಿ ರಾಹುಲ್ ಪರ ಶೇ.60.91, ಮೋದಿ ಪರ ಕೇವಲ 26.93 ಶೇ, ಪಂಜಾಬ್‌ನಲ್ಲಿ ರಾಹುಲ್ ಪರ ಶೇ.37.04, ಮೋದಿ ಪರ 36.05 ಶೇ. ಮತದಾರರು ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರವಿದೆ. ಆದರೆ ದೇಶದ ಉಳಿದ ಭಾಗಗಳಲ್ಲಿ ಮೋದಿ ಬಗ್ಗೆಯೇ ಹೆಚ್ಚಿನವರು ಒಲವು ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮೋದಿ ರಾಹುಲ್‌ಗಿಂತ ಶೇ.26.10ರಷ್ಟು ಮುನ್ನಡೆ ಕಾಯ್ದುಕೊಂಡಿದ್ದು, ಚುನಾವಣೆಯಲ್ಲಿ ಮತದಾರರು ತಮ್ಮ ಒಲವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮೋದಿಯವರ ಆಡಳಿತಕ್ಕೆ ಮತದಾರರು ಪಾಠ ಕಲಿಸಲು ತುದಿ ಕಾಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group