ರಾಜ್ಯ ಸುದ್ದಿ

ಮಂಡ್ಯದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಸುಮಲತಾ ಅಂಬರೀಶ್ ಘೋಷಣೆ

ಚಿತ್ರರಂಗದ ದಿಗ್ಗಜರಿಂದ ಬೆಂಬಲ

ವರದಿಗಾರ (ಮಾ.18): ಮುಂದಿನ ತಿಂಗಳಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ನಟಿ ಸುಮಲತಾ ಅಂಬರೀಶ್ ಘೋಷಿಸಿದ್ದು ಈ ಮೂಲಕ ಹಲವು ಊಹಾಪೋಹ ಮತ್ತು ಚರ್ಚೆಗಳಿಗೆ ಅವರು ನಾಂದಿ ಹಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ ಅವರು, ‘ಜೀವನದಲ್ಲಿ ಕೆಲವು ಸವಾಲುಗಳನ್ನು ನಾವು ಹುಡುಕುತ್ತೇವೆ. ಮತ್ತೆ ಕೆಲವು ಸವಾಲುಗಳು ತಾವಾಗೇ ಬರುತ್ತವೆ. ಅಂಬರೀಶ್‌ ಇಲ್ಲ ಎಂಬ ನೋವು ಇಂದಿಗೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತೀರಿಕೊಂಡಾಗ ಕತ್ತಲೆ ಮನಸ್ಥಿತಿಯಲ್ಲಿದೆ. ಅವರ ಜೊತೆ ಯಾವಾಗಲೂ ಸ್ನೇಹಿತರು ಇರುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಮಂಡ್ಯದ ಜನತೆ ಸಮಾಧಾನ ಪಡಿಸಿದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಅಂಬರೀಶ್‌ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಅಧಿಕಾರದಲ್ಲಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು. ‘ಯಾರು ಯಾರಿಗೂ ನೋಯಿಸುವ ಮಾತುಗಳನ್ನು ಆಡಬಾರದು. ಜತೆಗೆ, ವೈಯಕ್ತಿಕ ನಿಂದನೆ ಮಾಡಬಾರದು. ಚಿತ್ರರಂಗದಲ್ಲಿ ಒಗ್ಗಟ್ಟು ಇದೆ. ಅದೇ ರೀತಿ ರಾಜಕಾರಣದಲ್ಲಿ ವೈರಿ ಅಗುವುದು‌ ಬೇಡ’ ಎಂದು ಪರೋಕ್ಷವಾಗಿ ಕೆಲವು ರಾಜಕೀಯ ನಾಯಕರ ಕಿವಿಗಳಿಗೆ ಸಲಹೆ ನೀಡುವ ಪ್ರಯತ್ನ ಮಾಡಿದರು.

‘ಚುನಾವಣೆ ಎದುರಿಸಲು ಧೈರ್ಯ ಬೇಕು. ಇದು ಕಷ್ಟದ ಹಾದಿ ಎಂಬುದು ಗೊತ್ತಿದೆ. ಅಂಬರೀಶ್‌ ಅಭಿಮಾನಿಗಳ ಪ್ರೀತಿಗೆ ಮಣಿದು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರದಿಂದ ಹಲವು ಸಂಬಂಧಿಕರು ದೂರವಾಗುತ್ತಾರೆ. ಆದರೂ ಕೂಡ ನನ್ನ ನಿರ್ಧಾರ ಪ್ರಕಟಿಸಲು ಇದು ಸೂಕ್ತ ಸಮಯ. ಮಂಡ್ಯದ ಜನತೆ ಸದಾ ನನ್ನ ಜೊತೆಗಿರುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು. ಇದೇ 20ರಂದು (ಬುಧವಾರ) ಬೆಳಗ್ಗೆ 10 ಗಂಟೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಮಲತಾಗೆ ಚಿತ್ರರಂಗದ ನಟರಾದ ಯಶ್‌, ದರ್ಶನ್‌, ಅಭಿಷೇಕ್‌, ದೊಡ್ಡಣ್ಣ, ಜೈಜಗದೀಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಹಲವರು ದಿಗ್ಗಜರು ಬೆಂಬಲ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group